ಕೆಂಟ್: ಭಾರತದ ಎಡಗೈ ಸೀಮರ್ ಅರ್ಷದೀಪ್ ಸಿಂಗ್ ಮುಂಬರುವ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಋತುವಿನಲ್ಲಿ ಕೆಂಟ್ ಕೌಂಟಿ ಪರ ಆಡಲಿದ್ದಾರೆ.
ಕೆಂಟ್ ಕೌಂಟಿ ತನ್ನ ವೆಬ್‌ಸೈಟ್‌ನಲ್ಲಿ ಇದನ್ನು ತಿಳಿಸಿದೆ. ಜೂನ್-ಜುಲೈಯಲ್ಲಿ ನಡೆಯುವ ಎಲ್‌ವಿ ಇನ್ಶೂರೆನ್ಸ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಅರ್ಷದೀಪ್ ಸಿಂಗ್ ಆಡಲಿದ್ದಾರೆ.
ಇದನ್ನೂ ಓದಿ:ಬಿಜೆಪಿ ಸಂಸದ ದುಬೆ ‘ಎಂಬಿಎ ಡಿಗ್ರಿ ನಕಲಿ’; ಟಿಎಂಸಿ ಸಂಸದೆ ಮೊಯಿತ್ರಾ ಆರೋಪ
ಇಂಗ್ಲಿಷ್ ಕೌಂಟಿಯಲ್ಲಿ ರೆಡ್ ಬಾಲ್ ಕ್ರಿಕೆಟ್ ಆಡಲು ಕಾತರಗೊಂಡಿದ್ದೇನೆ. ನನ್ನ ಬೌಲಿಂಗ್ ಕೌಶಲ ಹೆಚ್ಚಿಸಲು ಇದೊಂದು ಉತ್ತಮ ಅವಕಾಶ. ಇದು ಅಮೋಘ ಇತಿಹಾಸವುಳ್ಳ ಕ್ಲಬ್ ಆಗಿದೆ ಎಂಬುದಾಗಿ ರಾಹುಲ್ ದ್ರಾವಿಡ್ ಈಗಾಗಲೇ ತಿಳಿಸಿದ್ದಾರೆ ಎಂಬುದಾಗಿ ಅರ್ಷದೀಪ್ ಹೇಳಿದರು