ಚಾಮರಾಜನಗರ: ವಿದ್ಯಾಗಣಪತಿ ಮಂಡಳಿಯು ನಗರದ ರಥದ ಬೀದಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ವಿದ್ಯಾಗಣಪತಿಯ ವಿಸರ್ಜನಾ ಮೆರವಣಿಗೆಯು ವಿಜೃಂಭಣೆಯಿಂದ ನಡೆದು, ಮಂಗಳವಾರ ಬೆಳಗಿನ ಜಾವ ದೊಡ್ಡ ಅರಸಿನ ಕೊಳದಲ್ಲಿ ವಿಸರ್ಜನೆ ಮಾಡಲಾಯಿತು. ಸುಮಾರು 16 ಗಂಟೆಗಳ ಕಾಲ ವಿಸರ್ಜನಾ ಮೆರವಣಿಗೆ ನಡೆದು, ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು.
ಸೋಮ ವಾರ ಬೆಳಗ್ಗೆ ನಗರದ ವಿದ್ಯಾಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಪ್ರಾರಂಭಿಸಲಾಯಿತು. ಈ ವೇಳೆ ವಸತಿ ಸಚಿವ ವಿ.ಸೋಮಣ್ಣ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭಾ ಅಧ್ಯಕ್ಷೆ ಆಶಾ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೇರಿದಂತೆ ಇತರೆ ಗಣ್ಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಇದನ್ನೂ ಓದಿ;- ಆತ ಪಾಕ್ ಪ್ರೇಮಿ… ರಾತ್ರೋರಾತ್ರಿ ನನ್ನ ವಿರುದ್ಧ ಸಂಚು ಮಾಡಿದ್ದೇಕೆ? ಸೋನಿಯಾಗೆ ಸಿಂಗ್
ಗರದ ಗುರುನಂಜಶೆಟ್ಟರ ಛತ್ರದ ಮುಂಭಾಗದಿಂದ ವಿವಿಧ ಕಲಾ ತಂಡಗಳೊಂದಿಗೆ ಹೊರಟ ಮೆರವಣಿಗೆ ಖಡಕ್ ಪುರ ಮೊಹಲ್ಲಾ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಡಿವಿಯೇಷನ್ ರಸ್ತೆ, ದೇವಾಂಗ ಬೀದಿ, ದೊಡ್ಡ ಅಂಗಡಿ ಬೀದಿ ಚಿಕ್ಕ ಅಂಗಡಿ ಬೀದಿ, ಸಂತೆಮರಹಳ್ಳಿ ವೃತ್ತ, ಮುಂತಾದ ಮಾರ್ಗಗಳಲ್ಲಿ ಚಲಿಸಿ ಮಂಗಳವಾರ ಬೆಳಗಿನ ಜಾವ ದೊಡ್ಡರಸನಕೊಳ ತಲುಪಿತು. ಬಾಣ ಬಿರುಸಿನ ಪ್ರದರ್ಶನದೊಂದಿಗೆ ಗಣೇಶನನ್ನು ಕೊಳಕ್ಕೆ ಬಿಡಲಾಯಿತು.
ವಿವಿಧ ಬಡಾವಣೆಗಳಿಗೆ ಗಣಪತಿ ಮಹೋತ್ಸವ ಮೆರವಣಿಗೆ ಹೊರಟ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಪೊಲೀಸ್ ಪಡೆಗಳನ್ನು ಕರೆಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ನಗರದಲ್ಲಿ ಕರ್ತವ್ಯ ನಿರ್ವಹಿಸಿ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿತ್ತು.