ಪಣಜಿ: ಮೊದಲ ಅಂತರಾಷ್ಟ್ರೀಯ ಕ್ರೂಸ್ ಹಡಗು “ವೈಕಿಂಗ್ ಮಾರ್ಸ್” ಗುರುವಾರ 621 ಪ್ರಯಾಣಿಕರು ಮತ್ತು 422 ಸಿಬ್ಬಂದಿಗಳೊಂದಿಗೆ ಗೋವಾಕ್ಕೆ ಆಗಮಿಸಿದೆ. ಮುಗಾರ್ಂವ್ ಶಾಸಕ ಸಂಕಲ್ಪ್ ಅಮೋನ್ಕರ್ ರಾಜ್ಯದ ಮೊದಲ ಅಂತರಾಷ್ಟ್ರೀಯ ಕ್ರೂಸ್ ಪ್ರಯಾಣಿಕರನ್ನು ಸ್ವಾಗತಿಸಿದರು.
ಈ ವರ್ಷದ 2022-23 ಪ್ರವಾಸೋದ್ಯಮ ಋತುವಿನ ಮೊದಲ ವಿದೇಶಿ ಪ್ರವಾಸಿ ಹಡಗು “ವೈಕಿಂಗ್ ಮಾರ್ಸ್” ಸಾವಿರಕ್ಕೂ ಹೆಚ್ಚು ಪ್ರವಾಸಿಗರನ್ನು ಹೊತ್ತು ಇಂದು ಮುಗಾರ್ಂವ್ ಬಂದರಿಗೆ ಆಗಮಿಸಿದೆ. ಇದೇ ವೇಳೆ ದೇಶೀಯ ಹಡಗು “ಕಾರ್ಡೆಲಿಯಾ” ಕೂಡ ಸುಮಾರು ಸಾವಿರ ಪ್ರವಾಸಿಗರೊಂದಿಗೆ ಮುಗಾರ್ಂವ್ ಬಂದರನ್ನು ಪ್ರವೇಶಿಸಿದೆ.
ಈ ವರ್ಷದ ಸಮುದ್ರ ಪ್ರವಾಸೋದ್ಯಮವು ಸೆಪ್ಟೆಂಬರ್ 20 ರಿಂದ “ಕಾರ್ಡೆಲಿಯಾ ಎಂಪ್ರೆಸ್” ಹಡಗಿನ ಆಗಮನದೊಂದಿಗೆ ಪ್ರಾರಂಭವಾಯಿತು. ಈ ವರ್ಷ ವಿವಿಧ ದೇಶಗಳ ಒಟ್ಟು 21 ವಿದೇಶಿ ಪ್ರವಾಸಿ ಹಡಗುಗಳು ಗೋವಾದ ಮುಗಾರ್ಂವ್ ಬಂದರನ್ನು ಪ್ರವೇಶಿಸಲಿವೆ. ಇದು ಕಾರ್ಡೆಲಿಯಾ ದೇಶೀಯ ಪ್ರವಾಸಿ ಹಡಗುಗಳ 32 ಮತ್ತು ವಿದೇಶಿ ಹಡಗುಗಳ 16 ಅನ್ನು ಒಳಗೊಂಡಿದೆ. ಒಟ್ಟು 7 ಲಕ್ಷದ 42 ಸಾವಿರ ದೇಶಿ ಮತ್ತು ವಿದೇಶಿ ಪ್ರವಾಸಿಗರು ಸಮುದ್ರ ಮಾರ್ಗವಾಗಿ ಗೋವಾಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ವಿದೇಶಿ ಹಡಗು “ವೈಕಿಂಗ್ ಮಾರ್ಸ್ ಯುರೋಪಿಯನ್ ದೇಶವಾದ ನಾರ್ವೆಯಿಂದ ದುಬೈ ಮೂಲಕ ಮುಂಬೈಗೆ ಗೋವಾ ಮಾರ್ಗವಾಗಿ ಮುಗಾರ್ಂವ್ ಬಂದರಿಗೆ ಆಗಮಿಸಿತು. ನಂತರ ಹಡಗಿನಲ್ಲಿ ಆಗಮಿಸಿದ ಪ್ರವಾಸಿಗರನ್ನು ಬಸ್ಸಿನಲ್ಲಿ ಗೋವಾ ಪ್ರವಾಸಕ್ಕೆ ಕರೆದೊಯ್ಯಲಾಯಿತು.
Related Articles
ಈ ಸಂದರ್ಭದಲ್ಲಿ ಮುರಗಾಂವ್ ಶಾಸಕ ಸಂಕಲ್ಪ್ ಅಮೋನ್ಕರ್ ಪ್ರವಾಸಿಗರನ್ನು ಸ್ವಾಗತಿಸಲು ಆಗಮಿಸಿದ್ದರು. ಅಲ್ಲದೆ ಡೊಳ್ಳು ಬಾರಿಸುವ ಮೂಲಕ ಪ್ರವಾಸಿಗರನ್ನು ಸ್ವಾಗತಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇಂದು ಏಕಕಾಲದಲ್ಲಿ ಎರಡು ಪ್ರವಾಸಿ ಹಡಗುಗಳು ಮುಗಾರ್ಂವ್ ಬಂದರನ್ನು ಪ್ರವೇಶಿಸಿದ್ದರಿಂದ ಹಾರ್ಬರ್ ಮುಗಾರ್ಂವ್‍ನಲ್ಲಿ ಜಾತ್ರೆ ಏರ್ಪಟ್ಟಿತ್ತು. ಒಂದು ದೇಶೀಯ ಮತ್ತು ಇನ್ನೊಂದು ವಿದೇಶಿ ಅಂತರಾಷ್ಟ್ರೀಯ ಪ್ರವಾಸಿ ಹಡಗು ಗೋವಾಕ್ಕೆ ಆಗಮಿಸಿದೆ.