Advertisement

ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಬಂಧನ

06:24 PM Aug 03, 2022 | Team Udayavani |

ಕನಕಪುರ: ದರೋಡೆ ಮಾಡಲು ಮಾರಕಾಸ್ತ್ರಗಳನ್ನು ಹಿಡಿದು ಹೊಂಚು ಹಾಕುತ್ತಿದ್ದ ಐವರು ಆರೋಪಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ನಗರದ ರಾಮನಗರ ರಸ್ತೆಯ ಮುತ್ತುರಾಯಸ್ವಾಮಿ ದೇವಸ್ಥಾನದ ಬೀದಿಯ ಕೌಶಿಕ್‌ ಅಲಿಯಾಸ್‌ ಕೌಶಿ (32), ಮಹದೇಶ್ವರ ಬಡಾವಣೆಯ ಮಹದೇಶ್ವರ ದೇವಸ್ಥಾನದ ಪಕ್ಕದ ರಸ್ತೆ ಪ್ರಶಾಂತ್‌ ನಾಯಕ್‌ ಅಲಿಯಾಸ್‌ ಸಾಲೆ (20), ಬಸವೇಶ್ವರನಗರದ ಹಳೆ ಸೆಂಟ್‌ ಮೈಕಲ್‌ ಶಾಲೆ ರಸ್ತೆಯ ನಿವಾಸಿ ಆನಂದ್‌ (21), ಎಂ.ಜಿ.ರಸ್ತೆಯ ಪಾಂಡುರಂಗ ಸ್ವಾಮಿ ದೇವಸ್ಥಾನದ ಬೀದಿಯ ಅಭಿಷೇಕ್‌ (20), ಮೇಗಳ ಬೀದಿ ಬಾಣಂತ ಮಾರಮ್ಮ ಬಡಾವಣೆಯ ಚೋಟಣ್ಣನ ವಟಾರದ ನಿವಾಸಿ ಕಾರ್ತಿಕ್‌ ಅಲಿಯಾಸ್‌ ಕಾರ್ತಿ (22) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಕಳೆದ ಜುಲೈ 30ರಂದು ಈ ಐವರು ಆರೋಪಿಗಳು ಕರಡಿ ಗುಡ್ಡೆಗೆ ಹೋಗುವ ರಸ್ತೆಯ ಕಿಚ್ಚಲ ಮಾರಮ್ಮನ ದೇವಾಲಯದ ಬಳಿ ದೊಣ್ಣೆ, ಲಾಂಗು, ಖಾರದಪುಡಿಯನ್ನು ಹಿಡಿದು ಒಬ್ಬಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಅವರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಟಿ.ಟಿ.ಕೃಷ್ಣ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಆರಕ್ಷಕ ಉಪನಿರೀಕ್ಷಕಿ ಉಷಾ ನಂದಿನಿ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ, ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ನಂಬರ್‌ ಪ್ಲೇಟ್‌ ಇಲ್ಲದ ಒಂದು ಕಾರು, ಒಂದು ದ್ವಿಚಕ್ರ ವಾಹನ, ಒಂದು ಲಾಂಗು, ದೊಣ್ಣೆ, ಕಾರದಪುಡಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next