ಲಕ್ನೋ: ಕರ್ನಾಟಕದಲ್ಲಿ ಇರುವ ಆರೆಸ್ಸೆಸ್‌ನ 4, ಉ. ಪ್ರದೇಶದ 2 ಕಚೇರಿ ಗಳನ್ನು ಸ್ಫೋಟಿ ಸುವ ಬೆದ ರಿಕೆ ಹಾಕಿದ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಆತನನ್ನು ತ.ನಾಡಿನ ಪುದು ಕೋಟ್ಟೈಯ ರಾಜ್ ಮೊಹಮ್ಮದ್ ಎಂದು ಗುರು ತಿಸಲಾಗಿದೆ.
Advertisement
ಈತ ಬೆದರಿಕೆಯ ವಾಟ್ಸ್ ಆ್ಯಪ್ ಸಂದೇಶ ರವಾನಿ ಸಿದ್ದ. ಈ ಬಗ್ಗೆ ಉ.ಪ್ರ. ಪೊಲೀಸರಿಂದ ಮಾಹಿತಿ ರವಾನೆಯಾಗಿತ್ತು.
ಆತನನ್ನು ಉ.ಪ್ರ. ಪೊಲೀಸರ ಕೋರಿಕೆ ಮೇರೆಗೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ದಾಳಿ ಬೆದರಿಕೆಯ ಸಂದೇಶ ಬಂದಿದೆ.
ಹೀಗಾಗಿ ಎಲ್ಲ ಆರೆಸ್ಸೆಸ್ ಕಚೇರಿಗಳಿಗೆ ಪೊಲೀಸ್ ಭದ್ರತೆ ನೀಡ ಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Related Articles
Advertisement