Advertisement

ಬೆಂಗಳೂರು: ಇಬ್ಬರು ಮನೆಕಳ್ಳರ ಬಂಧನ

07:10 PM Nov 25, 2021 | Team Udayavani |

ಬೆಂಗಳೂರು: ಬೀಗದ ಹಾಕಿದ ಮನೆಗಳನ್ನು ಹಗಲು ವೇಳೆ ಗುರುತಿಸಿ ರಾತ್ರಿ ವೇಳೆ ಕಳವು ಮಾಡುತ್ತಿದ್ದ ರೌಡಿಶೀಟರ್‌ ಸೇರಿ ಇಬ್ಬರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸಂಜಯನಗರದ ಶರಣಪ್ಪ (24) ಮತ್ತು ಹರೀಶ್‌(24) ಬಂಧಿತರು. ಆರೋಪಿಗಳಿಂದ 3.70 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ಚಿನ್ನಾಭರಣ, 2 ಲ್ಯಾಪ್‌ಟಾಪ್‌, 2 ಐಫೋನ್‌ ಹಾಗೂ 2 ದ್ವಿಚಕ್ರವಾಹನ ವಶಡಿಸಿಕೊಳ್ಳಲಾಗಿದೆ. ಆರೋಪಿಗಳು ಇತ್ತೀಚೆಗೆ ಸಂಜಯನಗರ ವ್ಯಾಪ್ತಿಯಲ್ಲಿ ಎರಡು ಮನೆಗಳ ಕಳವು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಶರಣಪ್ಪ ಸಂಜಯನಗರ ಠಾಣೆ ರೌಡಿಶೀಟರ್‌ ಆಗಿದ್ದಾನೆ. ಈತನ ವಿರುದ್ಧ ಸಂಜಯನಗರ, ತುಮಕೂರು ಡೌನ್‌, ಹನುಮಂತನಗರ, ಎಲೆಕ್ಟ್ರಾನಿಕ್‌ ಸಿಟಿ, ಚಂದ್ರಾಲೇಔಟ್‌, ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ, ಕಳ್ಳನ ಪ್ರಕರಣಗಳಲ್ಲಿ ದಾಖಲಾಗಿದ್ದು,ಜೈಲಿಗೂ ಹೋಗಿದ್ದ.

ಮತ್ತೂಬ್ಬ ಆರೋಪಿ ಹರೀಶ್‌ ವಿರುದ್ಧ ರಾಮಮೂರ್ತಿನಗರ ಹಾಗೂ ಪರಪ್ಪನ ಅಗ್ರಹಾರ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ, ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿದ್ದ. ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ಬಳಿಕವೂ ಕೃತ್ಯ ಮುಂದುರಿಸಿದ್ದಾರೆ. ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಹಲವು ವರ್ಷಗಳಿಂದ ಮನೆಗಳವು, ದ್ವಿಚಕ್ರವಾಹನ ಕಳವು, ಸುಲಿಗೆ, ಕಳ್ಳತನ ಸೇರಿದಂತೆ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರ ಬಂಧನದಿಂದ ಸಂಜಯನಗರ, ಸದಾಶಿವನಗರ, ಹೆಣ್ಣೂರು, ಗಂಗಮ್ಮನಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮನೆಗಳವು, ದ್ವಿಚಕ್ರವಾಹನ ಕಳವು ಸೇರಿ ಒಟ್ಟು ಆರು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next