ಕಂಡ್ಲೂರು: ಸ್ವಂತ ವೆಬ್‌ಸೈಟ್ ಸುದ್ದಿತಾಣ ನಡೆಸುತ್ತಿದ್ದ ಪತ್ರಕರ್ತ ಕಿರಣ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯುಷ್ ವೈದ್ಯರ ಕ್ಲಿನಿಕ್‌ಗಳಿಗೆ ತೆರಳಿ ಶೂಟಿಂಗ್ ಮಾಡಿ ಅಲ್ಲಿ ಇದ್ದ ರೋಗಿಗಳ ಬಳಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೆಲವು ಆಯುಷ್ ವೈದ್ಯರು ನಕಲಿ ವೈದ್ಯರು ಎಂದು ಪ್ರಚಾರ ಮಾಡುತ್ತಾನೆ. ವೈಯಕ್ತಿಕ ದ್ವೇಷದಿಂದ ಹೀಗೆ ಮಾಡುತ್ತಿದ್ದು ವೈದ್ಯಕೀಯ ಸೇವೆಗೆ ಅಡ್ಡಿ ಉಂಟು ಮಾಡುತ್ತಿದ್ದಾನೆ ಎಂದು ಬೈಂದೂರು, ಕುಂದಾಪುರ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಡಾ| ಚಂದ್ರಶೇಖರ ಶೆಟ್ಟಿ, ಡಾ| ರಾಜೇಶ್, ಡಾ| ರವೀಂದ್ರ ಅವರು ನೀಡಿದ ದೂರಿನಂತೆ ಕೇಸು ದಾಖಲಾಗಿತ್ತು.