Advertisement

Mangaluru: ಎಂಡಿಎಂಎ ಮಾದಕ ವಸ್ತು ಹೊಂದಿದ ಇಬ್ಬರು ಆರೋಪಿಗಳ ಸೆರೆ

11:52 AM Jun 09, 2023 | Team Udayavani |

ಮಂಗಳೂರು: ಮಾದಕ ವಸ್ತುವಾದ ಎಂಡಿಎಂಎ (Methylene dioxy methamphetamine) ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

Advertisement

ಫರಂಗಿಪೇಟೆ ಮಹಮ್ಮದ್ ಆಶ್ರಫ್ ಯಾನೆ ಚೋಟಾ ಆಶ್ರಫ್ (43 ವ), ಪೆರ್ಮನ್ನೂರು ನಿವಾಸಿ ದಾವೂದ್ ಫರ್ವೆಝ್ (36 ವ) ಬಂಧಿತ ಆರೋಪಿಗಳು.

ಆರೋಪಿಗಳಿಬ್ಬರು ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎ ಮಾದಕ ವಸ್ತುವನ್ನು ಕಾರಿನಲ್ಲಿ ಖರೀದಿಸಿಕೊಂಡು ಮಂಗಳೂರಿಗೆ ಬಂದು ನಗರದ ನೆಹರೂ ಮೈದಾನ ಪರಿಸರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ ರವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು 55.5 ಗ್ರಾಂ ತೂಕದ ರೂ. 2,77,500 ಮೌಲ್ಯದ ಎಂಡಿಎಂಎ ಮಾದಕ ವಸ್ತು, ಎರಡು ಮೊಬೈಲ್ ಫೋನ್ ಗಳು, 3230ರೂ ನಗದು, ಮಾರುತಿ ಬೆಲೆನೊ ಕಾರು, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಇದು ಯಾವ ರೀತಿಯ ಪ್ರೀತಿ? ರಾಹುಲ್ ‘ಮೊಹಬ್ಬತ್ ಕಿ ದುಕಾನ್’ ಹೇಳಿಕೆಗೆ ಸ್ಮೃತಿ ತಿರುಗೇಟು

ಈ ಬಗ್ಗೆ ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Advertisement

ಆರೋಪಿಗಳ ಪೈಕಿ ಮೊಹಮ್ಮದ್ ಅಶ್ರಫ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣೆ ಹಾಗೂ ಬಂಟ್ವಾಳ ಠಾಣೆಯಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ದಾವೂದ್ ಪರ್ವೇಸ್ ವಿರುದ್ದ ಮಂಗಳೂರು ಉತ್ತರ, ಮಂಗಳೂರು ಗ್ರಾಮಾಂತರ, ಕಾರ್ಕಳ, ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಒಟ್ಟು 6 ಗಾಂಜಾ ಪ್ರಕರಣಗಳು ದಾಖಲಾಗಿರುತ್ತದೆ.

ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಸುದೀಪ್ ಎಂ ವಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next