Advertisement

ಕೊತ್ತಂಬರಿ ಹಣಕ್ಕೆ ಕನ್ನ ಹಾಕಿದವರ ಬಂಧನ

08:52 PM Aug 04, 2022 | Team Udayavani |

ಸಿಂಧನೂರು: ಕೊತ್ತಂಬರಿ ಹಣವನ್ನು ತರುತ್ತಿದ್ದ ವ್ಯಕ್ತಿಯನ್ನು ಬೆದರಿಸಿ ಹಣ ಕಿತ್ತುಕೊಂಡಿದ್ದ ದರೋಡೆ ಕೋರರನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ರವಿ ಪೂಜಾರಿ, ಚೀಕಲಪರ್ವಿ ಗ್ರಾಮದ ವೀರಕುಮಾರ ನಾಯಕ ಮತ್ತು ರಮೇಶ ಮಡಿವಾಳ ಎಂಬ ಆರೋಪಿಗಳು ಬಂಧಿತರು.

ನಗರದ ಸುಕಾಲಪೇಟೆಯ ರೈತರ ಮಾನ್ವಿಯಲ್ಲಿ ಕೊತ್ತೂಂಬರಿ ಮಾರಾಟ ಮಾಡಿ 1 ಲಕ್ಷ ರೂ.ಗಳನ್ನು ತರುತ್ತಿದ್ದ ವೇಳೆ ಆತನನ್ನು ಹಿಂಬಾಲಿಸಿ ದರೋಡೆ ಕೋರರು ಹಣ ದೋಚಿದ್ದರು. ಸುಕಾಲಪೇಟೆ ನಿವಾಸಿ ಭೀಮಣ್ಣ ಜು.29ರಂದು ಕೊತ್ತಂಬರಿ ಮಾರಾಟ ಮಾಡಿ ಹಣವನ್ನು ತರುತ್ತಿದ್ದರು. ಇದನ್ನು ಗಮನಿಸಿದ ದರೋಡೆ ಕೋರರು ಕೊತ್ತಂಬರಿ ಮಾರಾಟ ಮಾಡಿ ಹಣ ತರುತ್ತಿದ್ದ ವ್ಯಕ್ತಿಯನ್ನು ಹಿಂಬಾಲಿಸಿದ್ದರು. ಜವಳಗೇರಾದ ಬಳಿ ಆತನನ್ನು ದ್ವಿಚಕ್ರ ವಾಹನದಲ್ಲಿ ಅಡ್ಡಗಟ್ಟಿ ಹಣವನ್ನು ದೋಚಿ ಪರಾರಿಯಾಗಿದ್ದರು.

ಬಳಗಾನೂರು ಪಿಎಸ್‌ಐ ವೀರೇಶ ಅವರಿಗೆ ಅಗತ್ಯ ಸೂಚನೆಗಳನ್ನು ನೀಡಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಪಿಐ ಉಮೇಶ್‌ ಕಾಂಬ್ಳೆ ಯಶಸ್ವಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next