ದಾವಣಗೆರೆ: ಬೈಕ್ ಕಳ್ಳತನದ ಆರೋಪ ದಡಿ ಮೂವರನ್ನು ಬಂಧಿಸಿರುವ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳಿಂದ 4 ಲಕ್ಷ ರೂ. ಬೆಲೆ ಬಾಳುವ 10 ಬೈಕ್ ವಶಪಡಿಸಿಕೊಂಡಿದ್ದಾರೆ. ಜಾಲಿ ನಗರ ಶಿವಾಲಿ ಬಾರ್ ಹಿಂಭಾ ಗದ ನಿವಾಸಿ ನವೀನ್‌ಕುಮಾರ್ (21), ಭಾರತ್ ಕಾಲೋನಿ 13ನೇ ತಿರುವಿನ ನಿವಾಸಿ ರಾಘು (20) ಬಂಧಿತರು. ಇನ್ನೋರ್ವ ಬಾಲಕನಾಗಿದ್ದಾನೆ.
ತಾಲೂಕಿನ ಆನಗೋಡು ಗ್ರಾಮದ ಮನೆಯೊಂದರ ಮುಂದಿದ್ದ ಬೈಕ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದವರನ್ನು ವಿಚಾರಿಸಿದಾಗ, ಅವರು ಪೆಟ್ರೋಲ್ ಕಳ್ಳತನ ಮಾಡಲು ಬಂದಿದ್ದಾಗಿ ಹೇಳಿದರು.
ಆದರೆ, ಠಾಣೆಗೆ ಕರೆತಂದು ಮತ್ತೂಮ್ಮೆ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ದಾವಣಗೆರೆಯ ಕೆಟಿಜೆ ನಗರ, ವಿದ್ಯಾನಗರ, ಚಿತ್ರದುರ್ಗ, ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಕುಮಾರ ಪಟ್ಟಣಂ, ಶಿವಮೊಗ್ಗ ಮುಂತಾದ ಕಡೆ ಬೈಕ್ ಕಳ್ಳತನ ಮಾಡಿದ್ದನ್ನು ಮಾಹಿತಿ ನೀಡಿದ್ದಾರೆ.
ಗ್ರಾಮಾಂತರ ಉಪ-ವಿಭಾಗದ ಡಿಎಸ್‌ಪಿ ಮಂಜುನಾಥ್ ಗಂಗಲ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಚ್.ಗುರುಬಸವರಾಜ, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಶಿವಕುಮಾರ್, ಎಎಸ್‌ಐ ಜೋವಿತ್ ರಾಜ್, ಸಿಬ್ಬಂದಿ ಚಂದ್ರಶೇಖರ್, ವಿಶ್ವನಾಥ, ಪ್ರಕಾಶ್, ಜಯ್ಯಪ್ಪ, ಅಣ್ಣಯ್ಯ, ಮಾರುತಿ ಕಾರ್ಯಾಚರಣೆಯಲ್ಲಿ ಭಾಗಿ ಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.
60 ಸಾವಿರ ನಗದು, ಬೆಳ್ಳಿ ವಸ್ತು ಕಳ್ಳತನ
ದಾವಣಗೆರೆ: ರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು 60 ಸಾವಿರ ನಗದು, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ. ಆಶಾ ರುದ್ರೇಶಪ್ಪ ಎಂಬುವರ ಮನೆಯಲ್ಲಿ ಈ ಕೃತ್ಯ ಎಸಗಲಾಗಿದೆ. ಪಟ್ಟಣ ನಂದಿ ಸಹಕಾರ ಸಂಘದಲ್ಲಿ ಕೆಲಸ ಆಶಾ ಪಿಗ್ಮಿ ಸಂಗ್ರಹಿಸಿದ್ದ 43 ಸಾವಿರ, ತಮ್ಮ ಸ್ವಂತ 17 ಸಾವಿರ ರೂ. ಬೀರುವಿನಲ್ಲಿಟ್ಟು ಕೆಲಸಕ್ಕೆ ಹೋಗಿದ್ದರು. ಇತ್ತ ಮಕ್ಕಳು ಸಹ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಮನೆಗೆ ನುಗ್ಗಿರುವ ಕಳ್ಳರು ಹಣದ ಜೊತೆಗೆ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.