Advertisement

ಮದುವೆಯಾಗುವುದಾಗಿ 28 ಲಕ್ಷ ವಂಚಿಸಿದ್ದವ ಅಂದರ್‌

12:55 PM Nov 30, 2019 | Team Udayavani |

ಹುಬ್ಬಳ್ಳಿ: ನಗರದ ಮಹಿಳೆಯೊಬ್ಬರಿಗೆ ಮದುವೆ ಯಾಗುವುದಾಗಿ ನಂಬಿಸಿ, ಅವರ ತಾಯಿಯಿಂದ ಅಂದಾಜು 28 ಲಕ್ಷ ರೂ. ಪಡೆದು ವಂಚಿಸಿದ್ದ ಮೈಸೂರಿನ ವ್ಯಕ್ತಿಯನ್ನು ಹಳೇಹುಬ್ಬಳ್ಳಿ ಪೊಲೀಸರು ಶುಕ್ರವಾರ ಬಂಧಿಸಿ 19 ಲಕ್ಷ ರೂ.ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಪುಟ್ಟಯ್ಯ ಊರ್ಫ್‌ ರಮೇಶ ಸಿದ್ದಮಾಧು ಎಂಬಾತನೆ ಬಂಧಿತನಾಗಿದ್ದಾನೆ.

Advertisement

ಪ್ರಕರಣದ ಹಿನ್ನೆಲೆ: ಹಳೇಹುಬ್ಬಳ್ಳಿ ಮಗಜಿಕೊಂಡಿ ಪ್ಲಾಟ್‌ನ ಜಾನಕಿಬಾಯಿ ಕುಂದಗೋಳ ಎಂಬುವರು ತಮ್ಮ ಮಗಳ ಮದುವೆಗಾಗಿ ವರನ ಹುಡುಕಾಟಕ್ಕಾಗಿ 2016ರಲ್ಲಿ ಮಾಸ ಪತ್ರಿಕೆಯೊಂದರ ವೈವಾಹಿಕ ಅಂಕಣದಲ್ಲಿ ಮಾಹಿತಿ ಕೊಟ್ಟಿದ್ದರು. ಅದನ್ನು ಪಡೆದ ಪುಟ್ಟಯ್ಯನು ತಾನು ಕೆಪಿಟಿಸಿಎಲ್‌ನ ಗುಂಡ್ಲುಪೇಟೆಯಲ್ಲಿ ಎಇಇ ಇದ್ದೇನೆ. ಅವಿವಾಹಿತನಾಗಿದ್ದು, ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳುತ್ತೇನೆಂದು ಪರಿಚಯ ಮಾಡಿಕೊಂಡಿದ್ದಾನೆ. ನಂತರ ತನಗೆ ಪ್ರಮೋಶನ್‌ ಆಗುವುದಿದೆ ಹಾಗೂ ಗುಂಡ್ಲುಪೇಟೆಯಿಂದ ಹುಣಸೂರಗೆ ವರ್ಗಾವಣೆ ಮಾಡಿಸಿಕೊಳ್ಳಲು ಮೇಲಧಿಕಾರಿಗಳಿಗೆ ಹಣ ಕೊಡಬೇಕೆಂದು ನಂಬಿಸಿದ್ದಾನೆ.

2016ರಿಂದ 2018ರ ವರೆಗೆ ಬ್ಯಾಂಕ್‌ ಖಾತೆಯ ಮೂಲಕ ತನ್ನ ಪರಿಚಯಸ್ಥರ ವಿವಿಧ ಬ್ಯಾಂಕ್‌ ಖಾತೆಗಳಿಗೆ 28,34,900 ರೂ. ಪಡೆದು, ಮದುವೆ ಮಾಡಿಕೊಳ್ಳದೆ, ಹಣ ವಾಪಸು ಕೊಡದೆ ವಂಚಿಸಿದ್ದ. ಈ ಕುರಿತು ಜಾನಕಿಬಾಯಿ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹಳೇಹುಬ್ಬಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಪುಟ್ಟಯ್ಯನನ್ನು ಬಂಧಿಸಿ 19 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next