Advertisement

ಅಕ್ರಮ ಗಾಂಜಾ ಮಾರಾಟ ಯತ್ನ-ಮಾಲು ಸಹಿತ ಆರೋಪಿಯ ಬಂಧನ

12:06 PM Oct 14, 2021 | Team Udayavani |

ದಾಂಡೇಲಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಂಧಿಸಿದ ಘಟನೆ ಬುಧವಾರ ಸಂಜೆ ನಗರದ ಹಳಿಯಾಳ ರಸ್ತೆಯಲ್ಲಿರುವ ಲಯನ್ಸ್ ಶಾಲೆಯ ಹತ್ತಿರದ ಪಂಪ್ ಹೌಸಿಗೆ ಹೋಗುವ ದಾರಿಯಲ್ಲಿ ನಡೆದಿದೆ.

Advertisement

ಅಕ್ರಮವಾಗಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ನಗರದ 3ನಂ ಗೇಟ್ ಹತ್ತಿರದ ನಿವಾಸಿ ದೇವರಾಜ ಯಲ್ಲಪ್ಪ ಮುಶಾನಗೋಳ್ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ. ಬಂಧನದ ವೇಳೆಯಲ್ಲಿ ಈತನಲ್ಲಿದ್ದ 310 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ  ಅಬಕಾರಿ ಉಪಾಧೀಕ್ಷರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಮಹಾಂತೇಶ ಬಂಡಗರ, ಅಬಕಾರಿ ನಿರೀಕ್ಷಕರಾದ ಗಣೇಶ ನಾಯ್ಕ, ಪ್ರಶಾಂತ ಪಾಟೀಲ, ಅಬಕಾರಿ ಉಪ ನಿರೀಕ್ಷಕರಾದ ಜಿ.ವಿ.ವೈದ್ಯ, ಹಾಗೂ ಸಿಬ್ಬಂದಿಗಳಾದ ಟಿ.ಬಿ.ಮಲ್ಲಣ್ಣವರ, ವೈ.ಎಫ್.ಕೊಣ್ಣೂರು, ಎಂ.ಎಚ್.ಅನವಟ್ಟಿ, ಆನಂದ, ಸಂತೋಷ್, ಸಿದ್ದರಾಮ್, ಪ್ರವೀಣ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next