Advertisement

ಎಂಟು ಮಂದಿ ಅಡಿಕೆ ಕಳ್ಳರ ಬಂಧನ

06:00 AM Mar 08, 2018 | |

ಪುತ್ತೂರು: ಮಹಮ್ಮದ್‌ ಶಭಾಝ್  ಮಾಲಕತ್ವದ ಕೋಡಿಂ ಬಾಡಿಯ ಅಡಿಗೆ ಗೋದಾಮಿನ ಬಾಗಿಲು ಮುರಿದು ಜ. 26ರಂದು 2, 145 ಕೆಜಿ ಅಡಿಕೆ ಕಳವು ಮಾಡಿದ್ದ  8 ಮಂದಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಬೆಳ್ತಂಗಡಿ ಪಿಲ್ಚಾಂಡಿಕಲ್ಲು ನಿವಾಸಿ ಮಹಮ್ಮದ್‌ ರಫೀಕ್‌, ಕುವೆಟ್ಟು ಗ್ರಾಮದ  ಮಹಮ್ಮದ್‌ ಇಸಾಕ್‌, ಪಡಂಗಡಿ ನಿವಾಸಿ ಹಮೀದ್‌ ಯಾನೆ ಕುಂಞಿ ಮೋನು ಜಾಫ‌ರ್‌, ಕುವೆಟ್ಟು ಗ್ರಾಮದ ಶಿವಾಜಿನಗರ ನಿವಾಸಿ ಉಮ್ಮರ್‌ ಫಾರೂಕ್‌, ಬೆಳ್ತಂಗಡಿಯ ಪಿಲ್ಚಾಂಡಿಕಲ್ಲು ನಿವಾಸಿ ಎಚ್‌. ಇರ್ಷಾದ್‌, ಮೂಡಬಿದರೆ ಕೋಟೆಬಾಗಿಲು ನಿವಾಸಿ ಮಹಮ್ಮದ್‌ ರಫೀಕ್‌, ಬೆಳ್ತಂಗಡಿ ಬದ್ಯಾರ್‌ ನಿವಾಸಿ ಉಮ್ಮರ್‌ ಕುನಿ, ಉಡುಪಿಯ ಬಾಯಾರು ಬೆಟ್ಟು ನಿವಾಸಿ ವಿಜಯ ಶೆಟ್ಟಿ ಬಂಧಿತರು. ಪುತ್ತೂರು, ಸುಳ್ಯ, ಮಡಿಕೇರಿಯಲ್ಲಿ ಇನ್ನಷ್ಟು ಅಡಿಕೆ ಕಳವು ನಡೆಸಲು ತೆರಳುತ್ತಿದ್ದಾಗ ಇವರನ್ನು ಚಿಕ್ಕಮುಟ್ನೂರು ಗ್ರಾಮದ ದಾರಂದಕುಕ್ಕು ಸಮೀಪ ಬಂಧಿಸಲಾಗಿದೆ.  ಇವರು ಕುಖ್ಯಾತ ಅಡಿಕೆ ಕಳ್ಳ ಹಮೀದ್‌ ಪಡಂಗಡಿಯ ಸಹಚರರು ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌, ಉಪನಿರೀಕ್ಷಕರಾದ ಎಂ.ವಿ. ಚೆಲುವಯ್ಯ ಮತ್ತು ಅಜಯ್‌ ಕುಮಾರ್‌ ನೇತೃತ್ವದಲ್ಲಿ  ಇವರನ್ನು ಬಂಧಿಸಲಾಗಿದೆ. ಉಪ್ಪಿನಂಗಡಿ ಕಡೆಯಿಂದ  ಬಂದ ನಂಬರ್‌ ಪ್ಲೇಟ್‌ ರಹಿತ ರಿಟ್ಸ್‌ ಹಾಗೂ ಪಲ್ಸರ್‌ ಬೈಕ್‌ ಬಗ್ಗೆ ಶಂಕೆಗೊಂಡು  ನಿಲ್ಲಿಸಿದಾಗ ದರೋಡೆ ಸಂಚು ಮತ್ತು ಅದಕ್ಕಾಗಿ ಸಾಗಿಸುವ ವಸ್ತುಗಳು ಕಂಡುಬಂದವು.

Advertisement

Udayavani is now on Telegram. Click here to join our channel and stay updated with the latest news.

Next