Advertisement

ಶಂಕಿತ ಉಗ್ರರ ಸಂಪರ್ಕ ಹೊಂದಿದ್ದ ಮತ್ತೋರ್ವ ಯುವಕನ ಬಂಧನ

09:36 AM Sep 26, 2022 | Team Udayavani |

ಶಿವಮೊಗ್ಗ: ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ಸಂಪರ್ಕ ಹೊಂದಿದ್ದ ಮತ್ತೋರ್ವನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಶಬ್ಬೀರ್ ನನ್ನು ಶಿವಮೊಗ್ಗ ವಿಶೇಷ ಪೊಲೀಸರ ತಂಡವು ವಶಕ್ಕೆ ಪಡೆದಿದೆ.

ಬಂಧಿತ ಶಂಕಿತ ಉಗ್ರರ ಸಂಪರ್ಕ ಹೊಂದಿರುವ ಹಿನ್ನಲೆಯಲ್ಲಿ ಶಬ್ಬೀರ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಕಮರಿಗೆ ಬಿದ್ದ ಟೆಂಪೋ ಟ್ರಾವೆಲರ್; ಏಳು ಮಂದಿ ಪ್ರವಾಸಿಗರ ಸಾವು, ಹತ್ತು ಜನರಿಗೆ ಗಾಯ

ವಾರದ ಹಿಂದೆ ಉಗ್ರ ಸಂಘಟನೆಯ ನಂಟು ಹಿನ್ನೆಲೆಯಲ್ಲಿ ಶಿವಮೊಗ್ಗ ಸಿದ್ದೇಶ್ವರ ನಗರದ ಯಾಸೀನ್, ತೀರ್ಥಹಳ್ಳಿಯ ಶಾರಿಕ್ ಮತ್ತು ಮಂಗಳೂರಿನ ಮಾಜ್ ನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next