Advertisement

ವಕೀಲರಿಂದ ಚಿನ್ನಾಭರಣ ದೋಚಿದ್ದ ತೃತೀಯ ಲಿಂಗಿಗಳು ಸೇರಿ ಐವರ ಬಂಧನ  

08:44 PM Sep 29, 2022 | Team Udayavani |

ಕುಣಿಗಲ್ : ವಕೀಲರೊಬ್ಬರ ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆ ನಡೆಸಿ, ನಗದು ಸೇರಿದಂತೆ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ತೃತೀಯ ಲಿಂಗಿಗಳು ಸೇರಿದಂತೆ ಐವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

Advertisement

ಬೆಂಗಳೂರಿನ ದಾಬಸ್‌ಪೇಟೆ ವಾಸಿ, ತೃತೀಯ ಲಿಂಗಿಗಳಾದ ನವ್ಯ (37), ಅನುಶ್ರೀ (30), ಕೀರ್ತನ (22), ಸುಖ್ಯ (23) ಹಾಗೂ ಕಾರು ಚಾಲಕ ಹರ್ಷ (20) ಬಂಧಿತ ಆರೋಪಿಗಳು.

   ಏನಿದು ಘಟನೆ
ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೊಡ್ಡಜಾಲಹಳ್ಳಿ ಗ್ರಾಮದ ಹಾಲಿ ಬೆಂಗಳೂರಿನ ಮೂಡಲಪಾಳ್ಯ ವಾಸಿ ವಕೀಲ ಗಣೇಶ್ ಅವರು ಪಿತೃಪಕ್ಷ ಹಬ್ಬಕ್ಕೆ ಊರಿಗೆ ಬಂದು ಹಬ್ಬ ಮುಗಿಸಿಕೊಂಡು ಕಾರಿನಲ್ಲಿ ಕುಣಿಗಲ್ ಬೈಪಾಸ್ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿರಬೇಕಾದರೆ, ಇಲ್ಲಿನ ಗವಿಮಠ ಸೇತುವೆ ಬಳಿ ತೃತೀಯ ಲಿಂಗಿಗಳು ಅಪಘಾತವಾದಂತೆ ನಟಿಸಿ ರಸ್ತೆಯಲ್ಲಿ ಬಿದ್ದವರಂತೆ ನಾಟಕವಾಡಿ  ಸಹಾಯಕ್ಕೆ ಬಂದಾಗ  ಕಣ್ಣಿಗೆ ಕಾರದ ಪುಡಿ ಎರಚಿ ಅವರ ಬಳಿ ಇದ್ದ 20 ಗ್ರಾಂ ಬ್ರಾಸ್‌ಲೈಟ್, ಒಂದು ಉಂಗುರ ಹಾಗೂ ಕಾರಿನಲ್ಲಿ ಇದ್ದ ಮೂರು ಉಂಗುರಗಳನ್ನು ಮತ್ತು 30 ಸಾವಿರ ಹಣ ಸೇರಿದಂತೆ ಒಟ್ಟು ಐದು ಲಕ್ಷ ರೂ ಬೆಲೆ ಬಾಳುವ ಚಿನ್ನ ಕಸಿದುಕೊಂಡು ಪರಾರಿಯಾಗಿದ್ದರು ಎಂದು ವಕೀಲ ಗಣೇಶ್ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಐವರನ್ನು ಬಂದಿಸಿದ್ದಾರೆ, ಆರೋಪಿಗಳಿಂದ ಚಿನ್ನಾಭರಣವನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತನಿಖೆಗೆ ಆಗ್ರಹ :

Advertisement

ತೃತೀಯ ಲಿಂಗಿಗಳು ಎಂದು ಯಾರಿಗೂ ದ್ರೂಹ ಮಾಡುವವರಲ್ಲ, ಮದುವೆ ಮುಂಜಿಗಳಿಗೆ ತೆರಳಿ ಶುಭ ಹಾರೈಸುತ್ತೇವೆ, ಜನರಿಂದ ಹಣ ಬೇಡಿ ಜೀವನ ಮಾಡುವ ಪ್ರಾಮಾಣಿಕರು ಆದರೆ ಕುಣಿಗಲ್ ಪಟ್ಟಣದ ಹೊರ ವಲಯದ ಗವಿಮಠ ಸೇತುವೆ ಸಮೀಪ ನಡೆಯಿತು ಎನ್ನಲಾದ ಘಟನೆ ಸಂಬಂಧ ಸಂಪೂರ್ಣ ಮಾಹಿತಿ ತಿಳಿದಿಲ್ಲ, ಈಗ ನಾವು ಕಷ್ಟದಲ್ಲಿ ಇದ್ದೇವೆ ಆದರೂ ತೃತೀಯ ಲಿಂಗಿಗಳ ಘಟನೆಯಲ್ಲಿ ಯಾವುದೇ ಪಾತ್ರ ಇಲ್ಲ, ಬೇರೆ ಕಾರಣಗಳು ಅಲ್ಲಿ ನಡೆದಿರ ಬಹುದು. ಈ ಸಂಬಂಧ ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬೀಳಲಿದೆ ಪೊಲೀಸ್ ಇಲಾಖೆ ಮೇಲೆ ನಮಗೆ ಅಪಾರ ವಿಶ್ವಾಸ ಇದೆ ಎಂದು ಹೆಸರು ಹೇಳಲು ಇಚ್ಛಿಸದ ತೃತೀಯ ಲಿಂಗಿಗಳು  ತಮ್ಮ ಅಳಲು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next