Advertisement

ವಲಸೆ ಕಾರ್ಮಿಕರು ತವರಿಗೆ ತೆರಳಲು ವ್ಯವಸ್ಥೆ: ಮೇಯರ್‌

04:46 AM May 23, 2020 | Lakshmi GovindaRaj |

ಬೆಂಗಳೂರು: ವಲಸೆ ಕಾರ್ಮಿಕರು ಅವರ ಊರುಗಳಿಗೆ ತಲುಪುವ ನಿಟ್ಟಿನಲ್ಲಿ ಪಾಲಿಕೆ ಸಹಕಾರ ನೀಡುತ್ತಿದೆ ಎಂದು ಮೇಯರ್‌ ಎಂ. ಗೌತಮ್‌ ಕುಮಾರ್‌ ತಿಳಿಸಿದರು.  ಬಿಬಿಎಂಪಿಯಿಂದ ವಲಸೆ ಕಾರ್ಮಿಕರಿಗೆ ವಸತಿ ಹಾಗೂ ಊಟದ  ವ್ಯವಸ್ಥೆ ಮಾಡಿರುವ ಅರಮನೆ ಮೈದಾನಕ್ಕೆ ಮೇಯರ್‌ ಎಂ. ಗೌತಮ್‌ಕುಮಾರ್‌ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಾದ್ಯಂತ ವಲಸೆ ಕಾರ್ಮಿಕರು ಅವರ ಊರುಗಳಿಗೆ ಹೋಗುವುದಕ್ಕೆ ಸಮಸ್ಯೆ  ಎದುರಿಸುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ. ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರು ಅವರ ಊರುಗಳಿಗೆ ಹೋಗುವ ನಿಟ್ಟಿನಲ್ಲಿ ಯಾವುದೇ ಸಮಸ್ಯೆಯಾಗದಂತೆ ಪಾಲಿಕೆ ವ್ಯವಸ್ಥೆ ಮಾಡಿದೆ ಎಂದರು. ಬಿಬಿಎಂಪಿಯಿಂದ ವಲಸೆ ಕಾರ್ಮಿಕರಿಗೆ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ, ಅರಮನೆ ಮೈದಾನದ ಟೆನ್ನಿಸ್‌ ಪೆವಿಲಿಯನ್‌, ಯಲಹಂಕದ ಮ್ಯಾನೊ³ ಕನ್ವೆನನ್‌ ಸೆಂಟರ್‌ ಹಾಗೂ ಮಹದೇವಪುರ  ವಲಯದ  ವೈಟ್ಫೀಲ್ಡ್‌ ವ್ಯಾಪ್ತಿಯಲ್ಲಿನ ಕೆಟಿಪಿಎಲ್‌ನಲ್ಲೂ ವಲಸೆ ಕಾರ್ಮಿಕರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಒಡಿಶಾ, ,ಬಿಹಾರ, ಉತ್ತರ ಪ್ರದೇಶ, ತ್ರಿಪುರ ಸೇರಿದಂತೆ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಇಲ್ಲಿದ್ದು, ಇವರನ್ನು  ಅವರ ಊರುಗಳಿಗೆ ರೈಲುಗಳ ಮೂಲಕ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತಿದೆ. ಕಾಲ್ನಡಿಗೆಯಲ್ಲಿ ಊರುಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರನ್ನು ಮನವೊಲಿಸಿ ಈ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಯಲಹಂಕದ  ಮ್ಯಾನೊ ಕನ್ವೆಷನ್‌ ಸೆಂಟರ್‌ 350 ಜನ, ಅರಮನೆ ಮೈದಾನದ ಟೆನ್ನಿಸ್‌ ಪೆವಿಲಿಯನ್‌ನಲ್ಲಿ 400ಜನ ವಲಸೆ ಕಾರ್ಮಿಕರಿದ್ದು, ಇವರನ್ನು ಅವರ ಊರುಗಳಿಗೆ ಸಾಧ್ಯವಾದಷ್ಟು ಬೇಗ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಒಟ್ಟು ಐದು ಸಾವಿರ ಜನ ವಲಸೆ ಕಾರ್ಮಿಕರಿಗೆ ಆಶ್ರಯ ವ್ಯವಸ್ಥೆ ಮಾಡಲಾಗಿತ್ತು. ಇದರಲ್ಲಿ 4,500 ಜನ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿಕೊಡಲಾಗಿದೆ ಎಂದು  ದಾಸರಹಳ್ಳಿ ವಲಯದ ಜಂಟಿ ಆಯುಕ್ತ ಕೆ. ನರಸಿಂಹ ಮೂರ್ತಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next