Advertisement

ಅಗತ್ಯ ಸಾಮಗ್ರಿ ವಿತರಣೆಗೆ ವ್ಯವಸ್ಥೆ: ಡಿಸಿ

11:48 AM Mar 30, 2020 | Suhan S |

ದಾವಣಗೆರೆ: ಹಳೆ ಪಿಬಿ ರಸ್ತೆಯ ಖಾಲಿ ಜಾಗದಲ್ಲಿ ಬೀಡು ಬಿಟ್ಟಿರುವ ಹುಮನಾಬಾದ್‌ ಮೂಲದ ಕುಟುಂಬಗಳಿಗೆ ಭಾನುವಾರ ದಾವಣಗೆರೆಯ ಜೈನ್‌ ಫ್ರೆಂಡ್ಸ್‌ ಗ್ರೂಪ್‌ನಿಂದ ಪಡಿತರ ವಿತರಣೆ ಮಾಡಲಾಯಿತು. 5

Advertisement

ಕೆಜಿ ಅಕ್ಕಿ, ತಲಾ 1 ಕೆಜಿ ಹಿಟ್ಟು, ಬೇಳೆ, ಸಕ್ಕರೆ, 1 ಲೀಟರ್‌ ಎಣ್ಣೆ, 200 ಗ್ರಾಂ ಟೀಪುಡಿ, ಉಪ್ಪಿನ ಪಾಕೆಟ್‌, ಪೇಸ್ಟ್‌, ಬ್ರಷ್‌, 100 ಗ್ರಾಂ ಖಾರದಪುಡಿ, ಓಆರ್‌ಎಸ್‌ ಪುಡಿ… ಒಳಗೊಂಡಂತೆ 15 ಸಾಮಗ್ರಿಗಳ ಕಿಟ್‌ ಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ, ಕೊರೊನಾ ವೈರಸ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ ಡೌನ್‌ ಮಾಡಿರುವ ಸಂದರ್ಭದಲ್ಲಿ ಯಾರೂ ಸಹ ಉಪವಾಸದಿಂದ ಇರಬಾರದು ಎಂದು ಜಿಲ್ಲಾಡಳಿತ ಅಗತ್ಯ ಸಾಮಗ್ರಿ ವಿತರಿಸುವ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

ದಾವಣಗೆರೆಯ ಜೈನ್‌ ಫ್ರೆಂಡ್ಸ್‌ ಗ್ರೂಪ್‌ನಿಂದ ಒಂದು ಕುಟುಂಬಕ್ಕೆ ಒಂದು ವಾರಕ್ಕೆ ಆಗುವಷ್ಟು ಅಗತ್ಯ ಸಾಮಗ್ರಿ ವಿತರಣೆ ಮಾಡಲಾಗಿದೆ. ಬಡವರು, ನಿರ್ಗತಿಕರು, ಅಸಹಾಯಕರೊಂದಿಗೆ ಸರ್ಕಾರ, ಜಿಲ್ಲಾಡಳಿತ, ದಾವಣಗೆರೆಯ ಜೈನ್‌ ಫ್ರೆಂಡ್ಸ್‌ ಗ್ರೂಪ್‌ನಂತಹ ಸಂಘ-ಸಂಸ್ಥೆಗಳು ಇವೆ. ಮುಂದೆಯೂ ಇದ್ದೇ ಇರುತ್ತವೆ ಎಂದು ಧೈರ್ಯ ತುಂಬಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆ ಮಾಹಿತಿ ಪ್ರಕಾರ 200ಕ್ಕೂ ಹೆಚ್ಚು ನಿರ್ಗತಿಕ ಕುಟುಂಬಗಳಿವೆ. ಆ ಎಲ್ಲಾ ಕುಟುಂಬಗಳಿಗೆ ಜಿಲ್ಲಾಡಳಿತ ಅಗತ್ಯ ಸಾಮಗ್ರಿ ವಿತರಣೆಗೆ ವ್ಯವಸ್ಥೆ ಮಾಡಿದೆ. ದಾವಣಗೆರೆಯಲ್ಲಿನ 2 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರಿಗೂ ಸಹ ಅಗತ್ಯ ಸಾಮಗ್ರಿ ಒದಗಿಸಲಾಗುವುದು ಎಂದು ತಿಳಿಸಿದರು.

Advertisement

ಯಾವುದೇ ಸಂಘ-ಸಂಸ್ಥೆಗಳು ನೆರವಿಗೆ ಮುಂದಾದಲ್ಲಿ ಅರ್ಹರಿಗೆ ಅವುಗಳನ್ನು ತಲುಪಿಸುವ ವ್ಯವಸ್ಥೆಯನ್ನ ಜಿಲ್ಲಾಡಳಿತ ಮಾಡಲಿದೆ. ಹಣಕ್ಕಿಂತಲೂ ಅತೀ ಅಗತ್ಯವಾಗಿರುವ ಅಕ್ಕಿ, ಬೇಳೆ, ಬೆಲ್ಲ ಇತರೆ ಅವಶ್ಯಕ ವಸ್ತುಗಳನ್ನು ದಾನಿಗಳ ನಗರ ದಾವಣಗೆರೆಯ ಜನರು ನೀಡಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೌಂಟರ್‌ನಲ್ಲೂ ನೀಡಬಹುದು. ಇಲ್ಲವೇ ಇಂತಹ ಪ್ರದೇಶದಲ್ಲಿ ವಿತರಣೆ ಮಾಡುತ್ತೇವೆ ಎಂದರೆ ಅಲ್ಲಿಯೂ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮೇಯರ್‌ ಬಿ.ಜಿ. ಅಜಯ್‌ ಕುಮಾರ್‌, ಜೈನ್‌ ಫ್ರೆಂಡ್ಸ್‌ ಗ್ರೂಪ್‌ನ ರಮಣ್‌ಲಾಲ್‌ ವಿ. ಸಂಘವಿ, ವಿಕಾಸ್‌ಕುಮಾರ್‌ ಸಂಘವಿ, ಕೆ.ಬಿ. ಪ್ರಕಾಶ್‌, ಧನ್‌ಪಾಲ್‌, ಕುಮಾರ್‌ ಪಾಲ್‌, ರಾಜೇಶ್‌, ಭರತ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ಉಪ ವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್‌ ಪಿ. ಮುದಜ್ಜಿ, ತಹಶೀಲ್ದಾರ್‌ ಜಿ. ಸಂತೋಷ್‌ಕುಮಾರ್‌, ಪ್ರಭುಸ್ವಾಮಿ, ಕಾರ್ಮಿಕಾಧಿಕಾರಿ ಇಬ್ರಾಹಿಂ ಸಾಬ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next