Advertisement
ಕರುವೇಲು ನಿವಾಸಿ ಸುಂದರ ಎಂಬವರ ಪುತ್ರಿ ರೇವತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆಗೆ ಸಾಲ್ಮರದ ಯುವಕ ಶರತ್ ಎಂಬಾತನ ಜತೆ ಪ್ರೇಮಾಂಕುರವಾಗಿತ್ತು. ಮುಂದೆ ನಿಂತು ಮದುವೆ ಮಾಡಲು ತನ್ನವರೆಂದು ಯಾರೂ ಇಲ್ಲದ ಸ್ಥಿತಿಯಲ್ಲಿ ಅಸಹಾಯಕಳಾಗಿದ್ದ ಯುವತಿಗೆ ನೆರೆ ಮನೆಯ ಮುಸ್ಲಿಂ ಕುಟುಂಬ ಸಹಾಯಹಸ್ತ ಚಾಚಿದೆ. ಅಕ್ಕಪಕ್ಕದ ಮನೆಗಳಿಂದ ಅಡಿಕೆ ಸೋಗೆಗಳನ್ನು ತಂದು ಚಪ್ಪರ ಹಾಕಿದರು. ಕರವೇಲು ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಲತೀಫ್ ಎಂಬವರ ಮನೆಯಲ್ಲಿ ಮದುಮಗಳನ್ನು ಶೃಂಗರಿಸಿ, ಸಂಪ್ರದಾಯದಂತೆ ವಿವಾಹ ಶಾಸ್ತ್ರ ನೆರವೇರಿಸಲಾಯಿತು. ಮಂಗಲಸೂತ್ರ, ಮದುಮಗಳ ಎರಡು ಜತೆ ವಸ್ತ್ರ ಹಾಗೂ ಮದುವೆ ಅಂಗವಾಗಿ 150 ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಿದರು. ಈ ಎಲ್ಲ ಕಾರ್ಯಗಳಿಗೆ ತಗಲಿದ ವೆಚ್ಚವನ್ನು ಎಸ್‌ಡಿಎಂಸಿ ಅಧ್ಯಕ್ಷ ಲತೀಫ್, ಶಬೀರ್ ಕುಂಡಾಜೆ, ಕಬೀರ್ ಕುಂಡಾಜೆ, ಅನಿತಾ ಬೀಡಿ ಸಂಸ್ಥೆಯ ಪುತ್ತು ಮೋನು, ಅಶ್ರಫ್ ಭರಿಸಿ ಮದುವೆ ಕಾರ್ಯವನ್ನು ನೆರವೇರಿಸಿದರು. Advertisement
ಬಡ ಯುವತಿಗೆ ಮದುವೆ ಮಾಡಿಸಿದ ಮುಸ್ಲಿಂ ಬಂಧುಗಳು
06:33 AM Mar 20, 2019 | |
Advertisement
Udayavani is now on Telegram. Click here to join our channel and stay updated with the latest news.