ಭೋಪಾಲ್: ಮಧ್ಯಪ್ರದೇಶ ಮೂಲದ ಉದ್ಯಮಿಯೊಬ್ಬರು ತಮ್ಮ ಮಗಳಿಗೆ 1 ಕೋಟಿ ರೂ. ವೆಚ್ಚದಲ್ಲಿ ಮದುವೆ ಮಾಡಿಸುವಂತೆ ವಿಡಿಯೋದಲ್ಲಿ ಹೇಳಿ, ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಭಾಗೇಶ್ವರ ಧಾಮದ ಭಕ್ತರಾಗಿದ್ದ ಸಂಜಯ್ ಸೇಟ್, ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ವಿಡಿಯೋ ಮಾಡಿಕೊಂಡಿದ್ದು, ಅದರಲ್ಲಿ ತಮ್ಮಿಂದ ಹಣ ಪಡೆದುಕೊಂಡವರು, ತಮ್ಮ ಮಗಳ ಮದುವೆ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ. ಜತೆಗೆ 50 ಲಕ್ಷದಿಂದ 1 ಕೋಟಿ ರೂ. ವೆಚ್ಚದಲ್ಲಿ ಮಗಳ ಮದುವೆ ಮಾಡುವಂತೆ ಮನವಿ ಮಾಡಿದ್ದು, ಮಗಳ ಅಕೌಂಟ್‌ನಲ್ಲಿ 29 ಲಕ್ಷ ರೂ.ಹಣ ಹಾಗೂ ಒಡವೆಗಳನ್ನು ಇಟ್ಟಿರುವುದಾಗಿ ತಿಳಿಸಿದ್ದಾರೆ.
ಭಾಗೇಶ್ವರ ಧಾಮದ ಗುರೂಜಿಗಳಿಗೆ ಕ್ಷಮೆಯಾಚಿಸಿದ ಸೇಟ್, ಮುಂದಿನ ಜನ್ಮವಿದ್ದರೆ ತಮ್ಮ ಶಿಷ್ಯನಾಗಿ ಹುಟ್ಟುವೆ ಎಂದು ಪತ್ರ ಬರೆದಿದ್ದಾರೆ. ಹೆಂಡತಿಗೆ ಶೂಟ್ ಮಾಡಿ, ಬಳಿಕ ತಾವು ಗುಂಡು ಹಾರಿಸಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಸುರತ್ಕಲ್: ಕೆಲಸಕ್ಕೆಂದು ತೆರಳಿ ನಾಪತ್ತೆಯಾದವಳು ವಿವಾಹವಾಗಿ ಪತ್ತೆ!