ಅಡ್ವೆಂಚರ್ ರೈಡ್ ಗೊತ್ತಲ್ವಾ? ಥೀಮ್ ಪಾರ್ಕುಗಳಲ್ಲಿ ಜೇಂಟ್ ವೀಲ್, ಟೊರ ಟೊರಾ ಮುಂತಾದವು ಇರುತ್ತವೆ. ಯಾವತ್ತಾದರೂ ರೋಲರ್ ಕೋಸ್ಟರ್‌ನಲ್ಲಿ ಕೂತಿದ್ದೀರಾ? ಹಾವಿನಂತೆ ಬಳುಕುವ ಹಳಿಗಳ ಮೇಲೆ ಏರುತ್ತಾ ಇಳಿಯುತ್ತಾ ಎದೆಯನ್ನು ಝಲ್ಲೆನಿಸುವ ರೋಲರ್ ಕೋಸ್ಟರ್‌ನಲ್ಲಿ ಕೂರಲು ಅನೇಕರು ಹಿಂಜರಿಯುತ್ತಾರೆ. ಆದರೆ ನಿಜವಾಗಿಯೂ ರೋಲರ್ ಕೋಸ್ಟರ್‌ನಲ್ಲಿ ಕೂರದೆ ಅದೇ ಅನುಭವವನ್ನು ಪಡೆಯುವುದು ಸಾಧ್ಯ ಅಂತ ಹೇಳಿದರೆ ನಂಬುತ್ತೀರಾ? ನಂಬದಿದ್ದರೆ ವಿ.ಆರ್. ರೂಮ್‌ಗೆ ಬನ್ನಿ. ವಿ.ಆರ್ ಎಂದರೆ ವರ್ಚುವಲ್ ರಿಯಾಲಿಟಿ. ಇಲ್ಲಿ ಎಲೆಕ್ಟ್ರಾನಿಕ್ ಕನ್ನಡಕವನ್ನು ಕಣ್ಣಿಗೆ ಕಟ್ಟಿ ಹೊಸದೊಂದು ಲೋಕಕ್ಕೆ ಒಯ್ಯುತ್ತಾರೆ. ಇಲ್ಲಿನ ರೋಲರ್ ಕೋಸ್ಟರ್ ಅನುಭವವನ್ನು ಪಡೆದವರು ಅದರ ನೈಜತೆಗೆ ಬೆರಗಾಗಿದ್ದಾರೆ, ಬೆಚ್ಚಿ ಬಿದ್ದಿದ್ದಾರೆ. ಇಂಥ ಹಲವು ಬಗೆಗಳು ಈ ರೂಮ್‌ನಲ್ಲಿವೆ. ನಾಲ್ಕು ಗೋಡೆಯ ಮಧ್ಯ ಕೂತು ವಿಶಾಲ ಪ್ರಪಂಚವನ್ನು ನೋಡೋದು ಒಂದದ್ಭುತ ಅನುಭವ.
ಡೈನೋಸಾರ್ ಜೊತೆ ಆಟ
ವಿಡಿಯೋ ಗೇಮ್ಸ್ ಪ್ರಿಯರು ಇಲ್ಲಿನ ಡೈನೋಸಾರ್ ಗೇಮನ್ನು ಪ್ರಯತ್ನಿಸಬಹುದು. ಇದು ವರ್ಚುವಲ್ ರಿಯಾಲಿಟಿ ಗೇಮ್. ಡಿಜಿಟಲ್ ಪರದೆಯ ಮುಂದೆ ಕುಳಿತು ಗೇಮ್ ಆಡಿದಂತಲ್ಲ ವರ್ಚುವಲ್ ಗೇಮ್ ಆಡುವುದು. ಇಲ್ಲಿ ಆಟಗಾರ ಅಕ್ಷರಶಃ ವಿಡಿಯೋ ಗೇಮಿನ ಒಳಗೆ ಇರುವ ಅನುಭವ ಪಡೆಯುತ್ತಾನೆ. ಹೀಗಾಗಿ ಥ್ರಿಲ್ಲಿಂಗ್ ಹೆಚ್ಚು ಎನ್ನುವುದು ಆಡಿದವರ ಅಭಿಪ್ರಾಯ.
ದರ: 359ರೂ. ನಿಂದ ಶುರು
ಎಲ್ಲಿ?: #3, 1ನೇ ಮಹಡಿ, ಕೋರಮಂಗಲ ಗ್ರೀನ್‌ಲೀಫ್ ಎಕ್ಸ್‌ಟೆನÒನ್, ಕೋರಮಂಗಲ 4ನೇ ಹಂತ