Advertisement
“ಓರ್ವ ನ್ಯಾಯಮೂರ್ತಿ ಮಾತನಾಡಬೇಕಾದ ಕಟ್ಟಕಡೆಯ ವ್ಯಕ್ತಿ ಪತ್ರಕರ್ತನಾಗಿರಬೇಕು’ ಎಂದು ಹಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ಎ. ದೇಸಾಯಿ ಅವರು ಹೇಳಿದ್ದರು. ಆದರೆ ಆ ಮಾತುಗಳನ್ನು ಮೀರುವಂತೆ ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯ ಮೂರ್ತಿಗಳು, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಇಲ್ಲಿ ಪತ್ರಕರ್ತರು ನ್ಯಾಯಮೂರ್ತಿಗಳ ಪ್ರತಿಕ್ರಿಯೆಗಳನ್ನು ಕೇಳುವ ಪರಿಪಾಠಕ್ಕೆ ಹೊರತಾಗಿ ನ್ಯಾಯಮೂರ್ತಿಗಳೇ ಮಾಧ್ಯಮ ಮಂದಿಯನ್ನು ಕರೆದು ಮಾತನಾಡಿದರು.
ಈ ವಿಚಾರದಲ್ಲಿ ಮಾಧ್ಯಮವನ್ನು ಸ್ವಲ್ಪ ದೂರ ಇಟ್ಟೇ ನ್ಯಾಯ ಮೂರ್ತಿಗಳು ಮಾತನಾಡಿದರೂ ಒಂದು ವಿಚಾರವನ್ನಂತೂ ಉಲ್ಲೇಖೀಸಬೇಕು, ಅವರ ತೀರ್ಪುಗಳು ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಬೇಕಾದರೆ ಪತ್ರಿಕೆಗಳ ನೆರವೇ ಬೇಕು. ಇಲ್ಲದೇ ಹೋದರೆ ತೀರ್ಪುಗಳು ಕೇವಲ ಕಾನೂನು ವರದಿಗಳಲ್ಲಿ, ವಕೀಲರಿಗೆ, ಕಾನೂನು ಶಿಕ್ಷಕರಿಗೆ, ಅರ್ಜಿದಾರರಿಗೆ, ಆಯಾ ಕಾನೂನಿಗೆ ಮಾತ್ರ ಸೀಮಿತವಾಗಿಬಿಡುತ್ತದೆ.
Related Articles
Advertisement
ಹಾಗೆಯೇ 1973ರಲ್ಲೂ ದೇಶಾದ್ಯಂತ ಸದ್ದು ಮಾಡಿದ ಕೇಶವಾನಂದ ಭಾರತಿ ಪ್ರಕರಣದಲ್ಲೂ ಮುಖ್ಯ ನ್ಯಾಯಮೂರ್ತಿ.ಎಸ್.ಎಂ.ಸಿಖೀ ಅವರ ನೇತೃತ್ವದ 13 ಮಂದಿಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ನ್ಯಾಯಾಲಯ ವರದಿಗಾರಿಕೆಯ ಮಾಧ್ಯಮ ಮಂದಿ ಅತ್ಯುತ್ತಮವಾಗಿ ವರದಿ ಮಾಡಿದ್ದರು.
ಕೆಲ ಪತ್ರಕರ್ತರು ಅನಪೇಕ್ಷಿತ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದೇ ಮಾಧ್ಯಮದ ಬಗೆಗೆ ಇರುವ ಹೆದರಿಕೆಗೆ ಕಾರಣ.ಭಾರತೀಯ ಮಾಧ್ಯಮಗಳು ನ್ಯಾಯಾಂಗವನ್ನು ಕಡಿಮೆ ಎಂಬಂತೆ ಚಿತ್ರಿಸಿದ್ದಿಲ್ಲ. ಆದರೆ ಕೆಲವು ವಕೀಲರು ತಮ್ಮ ಕೇಸು
ಗಳು ವಜಾಕ್ಕೆ ಅರ್ಹವಾದರೂ, ಹಾಗೆ ಮಾಡಿದ್ದಕ್ಕೆ ನ್ಯಾಯಾ ಧೀಶರನ್ನೇ ದೂರಿದ್ದಿದೆ. ಕೆಲ ಸಮಯದ ಹಿಂದೆ ತೀವ್ರ ಕುತೂ
ಹಲ ಮೂಡಿಸಿದ್ದ ವಾಣಿಜ್ಯ ತೆರಿಗೆ ಅಧಿಕಾರಿ ತನ್ನ ಪತ್ನಿಯನ್ನೇ ಕೊಲೆಗೈದ ಆರೋಪದ ಪ್ರಕರಣದ ವಿಚಾರಣೆ ಬೆಂಗಳೂರಿನ ಮೇಯೋ ಹಾಲ್‌ನ ಕೋರ್ಟ್ ಕಟ್ಟಡದಲ್ಲಿ ನಡೆಯುತ್ತಿತ್ತು. ನ್ಯಾಯಾಧೀಶರು ಆರೋಪಿ ಯನ್ನು ಖುಲಾಸೆಗೊಳಿಸುವು
ದಾಗಿ ಘೋಷಿಸಿದಾಗ ನನ್ನ ಪಕ್ಕದಲ್ಲೇ ನಿಂತಿದ್ದ ಸಾರ್ವಜನಿಕ ರೊಬ್ಬರು, ಇದರಲ್ಲಿ “ಅಡೆjಸ್ಟ್‌ಮೆಂಟ್’ ಇದೆ ಎಂದು ಹೇಳಿದ್ದರು. ಈ ವೇಳೆ ನ್ಯಾಯಾಧೀಶರು ಅವರತ್ತ ದುರುಗುಟ್ಟಿ ನೋಡುತ್ತ ತೀರ್ಪು ನೀಡಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ವಕೀಲ ದುಷ್ಯಂತ್ ದವೆ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಟಿವಿ ಚರ್ಚೆಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಇದೇ ವೇಳೆ ಅವರು ಪೂರ್ವಗ್ರಹ ಪೀಡಿತರಾಗಿ ಸಿಬಿಐ ನ್ಯಾಯಾಧೀಶ ಬಿ.ಎಚ್.ಲೋಯಾ ಅವರ ಸಾವಿನ ಕುರಿತ ವಿಚಾರಣೆ ನಡೆಸುತ್ತಿದ್ದ ಮತ್ತೋರ್ವ ನ್ಯಾಯಾಧೀಶ ಅರುಣ್ ಮಿಶ್ರಾ ಅವರ ಬಗ್ಗೆಯೂ ಆರೋಪ ಮಾಡಿದ್ದರು. 2017ರ ನವೆಂಬರ್‌ನಲ್ಲಿ ಉತ್ತರ ಪ್ರದೇಶ ಮೆಡಿಕಲ್ ಕಾಲೇಜು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಿಶ್ರಾ ಅವರು ಎದುರು ನಡೆದುಕೊಂಡ ರೀತಿಯನ್ನು ಯಾರೂ ಮರೆಯಲಿಕ್ಕಿಲ್ಲ. ನ್ಯಾಯಾಂಗ ನಿಂದನೆಯ ಆರೋಪಕ್ಕೆ ನಾವು ಅರ್ಹರಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳುತ್ತಿದ್ದರೂ, ಭೂಷಣ್ ಅದನ್ನೇ ಹೇಳುತ್ತ ನಿಂತಿದ್ದರು. ನಮ್ಮ ಸುಪ್ರೀಂ ಕೋರ್ಟ್‌ನಲ್ಲಿ ಏನಾಗಿತ್ತೋ ಅಂತಹುದೇ ಮಾದರಿಯದ್ದು ಬಾಂಗ್ಲಾದೇಶದಲ್ಲೂ ಆಗಿತ್ತು. ಆದರೆ ನಮ್ಮ ನ್ಯಾಯಾಂಗದ ದರ್ಜೆ, ಸ್ಥಾನಮಾನಗಳು ಮತ್ತು ಅವುಗಳಿರುವ ಗೌರವ, ಇರುವ ಸ್ವಾತಂತ್ರ್ಯಗಳಿಗೆ ಅವುಗಳನ್ನು ಹೋಲಿಸುವುದು ಸಾಧ್ಯವಿಲ್ಲ. ಬಾಂಗ್ಲಾದಲ್ಲಿ ಮೊದಲ ಹಿಂದೂ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುರೇಂದ್ರ ಕುಮಾರ್ ಸಿನ್ಹಾ ಅವರು ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡಬೇಕಾಯ್ತು. ಇದಕ್ಕೆ ಕಾರಣ ಉಳಿದ ಐದು ನ್ಯಾಯಮೂರ್ತಿಗಳು ಅವರೊಂದಿಗೆ ಕೂರಲು ನಿರಾಕರಿಸಿದ್ದು. ಸಿನ್ಹಾ ಅವರ ವಿರುದ್ಧ ಇವರು ಭ್ರಷ್ಟಾಚಾರದ, ದುರ್ನಡತೆಯ ಆರೋಪಗಳನ್ನು ಮಾಡಿದ್ದರು. ಆದರೆ ನಿಜಕ್ಕೂ ಇದರ ಹಿಂದಿನ ಸತ್ಯವೆಂದರೆ ಸಿನ್ಹಾ ಅವರು ನ್ಯಾಯಾಧೀಶರಿಗೆ ವಾಗ್ಧಂಡನೆ ವಿಧಿಸುವ ಸಂಸತ್ತಿನ ಅಧಿಕಾರವನ್ನು ವಾಪಸ್ ಪಡೆಯುವ ತೀರ್ಪು ನೀಡಿದ್ದು ಮತ್ತು ಅದು ಖಲೀದಾ ಮುಜೀಬ್ ಸರಕಾರದ ಕೆಂಗಣ್ಣಿಗೆ ಕಾರಣವಾಗಿತ್ತು. ರಾಜಕೀಯ ವಾಸನೆ
ನ್ಯಾಯಮೂರ್ತಿಗಳು ಸಂಪ್ರದಾಯ ಮುರಿದು ಮಾಧ್ಯಮ ಗೋಷ್ಠಿ ಕರೆಯುವುದಕ್ಕಿಂತಲೂ ಹೆಚ್ಚಿಗೆ ಪ್ರಮುಖವಾದದ್ದು ಅವರಿಗಿರುವ ಸಚಿವರು/ರಾಜಕಾರಣಿಗಳೊಂದಿಗಿನ ಸಂಪರ್ಕ. ದೀಪಕ್ ಮಿಶ್ರಾ ವಿರುದ್ಧ ಆರೋಪ ಮಾಡಿದ್ದವರಲ್ಲಿ ಓರ್ವರಾಗಿದ್ದ ನ್ಯಾ| ಚಲಮೇಶ್ವರ್ ಅವರು ತಮ್ಮ ನಿವಾಸಕ್ಕೆ ಕಮ್ಯುನಿಸ್ಟ್ ನಾಯಕ ಡಿ.ರಾಜಾ ಅವರನ್ನು ಬರಮಾಡಿ ಸ್ಪಷ್ಟ ತಪ್ಪೆಸಗಿದರು. ಅವರು ಕನಿಷ್ಠ ರಾಜಾ ಬಳಿ ಫೋನಲ್ಲಾದರೂ ಮಾತನಾಡಬಹುದಿತ್ತು. ಇಷ್ಟಕ್ಕೂ ರಾಜಾ ಅವರು ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಪ್ರತಿನಿಧಿಯಾಗಿಯೇ ನ್ಯಾ|ಗಳ ಮನೆಗೆ ಹೋಗಿದ್ದರೆಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಆದರೆ ಒಂದು ವೇಳೆ ಕೆಳಹಂತದ ನ್ಯಾಯಾ ಧೀಶರೇನಾದರೂ ಹೀಗೆಯೇ ರಾಜಕಾರಣಿಯೊಬ್ಬರನ್ನು ಭೇಟಿ ಯಾಗಿದ್ದೇ ಆದಲ್ಲಿ, ಕೂಡಲೇ ಹೈಕೋರ್ಟ್ ಆ ನ್ಯಾಯಾಧೀಶರನ್ನು ವಜಾಗೊಳಿಸುತ್ತಿತ್ತು. ನ್ಯಾಯಾಧೀಶರು ಯಾರೇ ಆಗಿದ್ದರೂ ಸಂಪ್ರದಾಯವನ್ನು ಪಾಲಿಸುವವರಾಗಿರಬೇಕು. ಆದರೆ ಅಪರೂಪ ದಲ್ಲೇ ಅಪರೂಪದ ಪ್ರಕರಣವಾದ್ದರಿಂದ ನ್ಯಾಯಾಧೀಶರು ಮಾಧ್ಯಮ ಗೋಷ್ಠಿ ಕರೆದಿದ್ದನ್ನು ಸ್ವಾಗತಿಸಬೇಕಾಗುತ್ತದೆ. ರಾಜಾ ಅವರು ನ್ಯಾಯಾಧೀಶರನ್ನು ಭೇಟಿಯಾಗಿದ್ದಕ್ಕೆ ಸಿಪಿಐ(ಮಾರ್ಕ್ಸಿಸ್ಟ್) ಕೂಡ ಅಸಹನೆ ವ್ಯಕ್ತಪಡಿಸಿದೆ. ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಲಾಭವನ್ನು ಪಡೆಯಲು ಚಿಂತಿಸಿದ್ದು, ಅದು ಮೃತ ನ್ಯಾ. ಲೋಯಾ ಅವರ ಪುತ್ರ, ತಂದೆಯ ಸಾವಿನಲ್ಲಿ ಸಂಶಯವಿಲ್ಲ ಎಂದು ಹೇಳಿದ್ದರೂ ಅದನ್ನು ಒಪ್ಪಿಕೊಂಡಿಲ್ಲ. ಹಾಗೆಯೇ ಮಿಶ್ರಾ ಅವರನ್ನು ಭೇಟಿ ಮಾಡಲು ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಯತ್ನಿಸಿದ್ದೂ ತಪ್ಪು. ಆದರೆ ಭೇಟಿಗೆ ಯತ್ನಿಸಿದ್ದನ್ನು ಅವರು ನಿರಾಕರಿಸಿದರು ಎಂದು ಹೇಳಲಾಗಿದೆ. ಮೂಗು ತೂರಿಸುವ ಸರಕಾರ
ಅಂದು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ಮಂತ್ರಿಗಳಾಗಿದ್ದ ಪಿ.ಶಿವಶಂಕರ್ ಮತ್ತು ಎಚ್.ಆರ್. ಭಾರದ್ವಾಜ್ ಅವರು ಉನ್ನತ ಕೋರ್ಟ್‌ನಲ್ಲಿ ತಮ್ಮ ಆಯ್ಕೆಯ ನ್ಯಾಯಾಧೀಶರ ನೇಮಕವನ್ನು ಮಾಡುವುದರ ವಿರುದ್ಧವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರ ನೇಮಕಾತಿಗಾಗಿ ಕೊಲಿಜಿಯಂ ವ್ಯವಸ್ಥೆಯನ್ನು ಹೊರತಂದಿತ್ತು. ಈ ಮೂಲಕ ನ್ಯಾಯಾಧೀಶರ ನೇಮಕದಲ್ಲಿ ರಾಜಕೀಯ ನುಸುಳುವುದನ್ನು ತಡೆದಿತ್ತು. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ತಮಗೆ ಬೇಕಾದಂತೆ ನ್ಯಾಯಾಂಗವನ್ನು ಬಳಸಿಕೊಂಡು ಸಂವಿಧಾನಕ್ಕೆ ಹಾನಿ ಎಸಗಿದೆ. ನ್ಯಾಯಾಂಗ ನೇಮಕಾತಿ ಆಯೋಗ ರದ್ದು ಬಳಿಕ ಕೊಲಿ
ಜಿಯಂ ವ್ಯವಸ್ಥೆ ಬಂದರೂ ಉನ್ನತ ಕೋರ್ಟ್‌ಗಳ ನ್ಯಾಯಾಧೀಶರು ಯಾಕಾಗಿ ಪ್ರಧಾನಿ, ಮುಖ್ಯಮಂತ್ರಿಗಳು, ಇತರ ಮಂತ್ರಿಗಳೊಂದಿಗೆ ಉತ್ತಮ ಸಂಬಂಧ ಹೊಂದಿರಲು ಬಯಸುತ್ತಾರೆ ಎನ್ನುವುದು ನಿಜಕ್ಕೂ ಅಚ್ಚರಿಯದ್ದು. ಬಹುಶಃ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇಮಕ ರಾಷ್ಟ್ರಪತಿಯವರ ಮೂಲಕ ಆಗುವುದರಿಂದ ಇರಬಹುದು. ಆದರೆ ಈ ವಿಚಾರ ಸುಳ್ಳು ಎಂಬಂತೆ ಪತ್ರಿಕಾಗೋಷ್ಠಿಗೆ ಬಂದ ನ್ಯಾ|ರಂಜನ್ ಗೊಗೋಯ್ ಅವರ ನಡೆಯನ್ನು ಶ್ಲಾ ಸಬೇಕು. ಹಿರಿತನದ ಆಧಾರದಲ್ಲಿ ಅವರೇ ಮುಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ. ಇಂದಿರಾಗಾಂಧಿಯವ ರಾದರೆ ಅಂತಹ ನ್ಯಾಯ ಮೂರ್ತಿ ಗಳನ್ನು ಹಿಂದಕ್ಕೆ ಸರಿಸುತ್ತಿದ್ದರು. ಈಗ ನರೇಂದ್ರ ಮೋದಿ ಯವರು ಏನು ಮಾಡಲಿದ್ದಾರೆ ಎಂಬುದು ಪ್ರಶ್ನಾರ್ಥಕ. ಅದೇನಿ ದ್ದರೂ, ನರೇಂದ್ರ ಮೋದಿಯವರ ಸರಕಾರ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗೆ ನೇಮಕಾತಿ ವಿಚಾರದಲ್ಲಿ ಕೊಲಿಜಿಯಂನೊಂದಿಗೆ ತಡಮಾಡದೇ ಸಹಕರಿಸಬೇಕಿದೆ. ಅಷ್ಟೊಂದು ಪ್ರಮಾಣದಲ್ಲಿ ಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಕೊರತೆ ಇದೆ ಎಂಬುದೇ ತೀರ ಅಪಮಾನಕರವಾಗಿದೆ. ಅರಕೆರೆ ಜಯರಾಮ್