Advertisement

ನೆಹರೂ ಮ್ಯೂಸಿಯಂ ಸಮಿತಿಗೆ ಅರ್ನಾಬ್‌ 

06:00 AM Nov 04, 2018 | Team Udayavani |

ಹೊಸದಿಲ್ಲಿ: ನೆಹರು ಮ್ಯೂಸಿಯಂ ಹಾಗೂ ಲೈಬ್ರರಿ ಸೊಸೈಟಿಗೆ ಕೇಂದ್ರ ಸರಕಾರವು ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಸೇರಿದಂತೆ ನಾಲ್ವರು ಸದಸ್ಯರನ್ನು ನೇಮಿಸಿದೆ. ನವದಿಲ್ಲಿಯಲ್ಲಿರುವ ನೆಹರು ಮ್ಯೂಸಿಯಂನಲ್ಲಿ ಎಲ್ಲ ಪ್ರಧಾನಿಗಳ ಮ್ಯೂಸಿಯಂ ಅನ್ನು ನಿರ್ಮಿಸಬೇಕೆಂಬ ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ವಿರೋಧಿಸಿದ್ದ ನಾಲ್ವರ ಬದಲಿಗೆ ಇವರನ್ನು ನೇಮಿಸಲಾಗಿದೆ.

Advertisement

ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್‌, ಬಿಜೆಪಿ ಸಂಸದ ವಿನಯ್‌ ಸಹಸ್ರಬುದ್ಧೆ ಐಜಿಎನ್‌ಸಿಎ ಮುಖ್ಯಸ್ಥ ರಾಮ್‌ ಬಹಾದುರ್‌ ರೈ ಕೂಡ ಸಮಿತಿಗೆ ಸದಸ್ಯರಾಗಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಬಳಿಕ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಎಂ.ಜೆ.ಅಕºರ್‌ ಈ ಸಮಿತಿಯ ಉಪಾಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ.

ಆರ್ಥಿಕ ತಜ್ಞ ನಿತಿನ್‌ ದೇಸಾಯಿ, ಪ್ರೊಫೆಸರ್‌ ಉದಯನ್‌ ಮಿಶ್ರಾ, ಮಾಜಿ ಹಿರಿಯ ಅಧಿಕಾರಿ ಬಿ.ಪಿ ಸಿಂಗ್‌ ಹಾಗೂ ಪ್ರತಾಪ್‌ ಭಾನು ಮೆಹ್ತಾ ಅವರ ಸ್ಥಾನಕ್ಕೆ ಈ ಹೊಸ ಸದಸ್ಯರು ನೇಮಕಗೊಂಡಿದ್ದಾರೆ. ಹೊಸದಾಗಿ ನೇಮಕವಾದ ಸದಸ್ಯರು 2020ರ ವರೆಗೆ ಕಾರ್ಯನಿರ್ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next