Advertisement

ಜೋಳದ ಬೆಳೆಗೆ ಸೈನಿಕ ಹುಳುವಿನ ಕಾಟ

03:45 PM Jun 14, 2022 | Team Udayavani |

ದೇವನಹಳ್ಳಿ: ಜೋಳದ ಬೆಳೆಗಳಿಗೆ ಸೈನಿಕ ಹುಳುವಿನ ಕಾಟದಿಂದ ಜಿಲ್ಲೆಯ ರೈತರಲ್ಲಿ ಆತಂಕ ಮೂಡಿದೆ.

Advertisement

ಪ್ರತಿವರ್ಷವೂ ಸೈನಿಕ ಹುಳುವಿನ ಕಾಟ ಜೋಳಕ್ಕೆ ಬರುತ್ತಿರುವುದರಿಂದ ರೈತರು ಹಕೋಟಿಗೆ ತರಲು ಔಷಧಿ ಸಿಂಪಡನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಯಾವ ರೀತಿ ಔಷಧಿಗಳನ್ನು ಸಿಂಪಡಿಸಿದರೆ ಸೈನಿಕ ಹುಳು ಹುಳು ತಡೆಯಲು ಸಾಧ್ಯ ಎಂದು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ನಂಬಿ ರೈತರು ಜೀವನ ಸಾಗಿಸುತ್ತಿದ್ದಾರೆ. ಜೋಳದ ಹಸಿ ಮೇವನ್ನು ಹಸುಗಳಿಗೆ ನೀಡುತ್ತಾರೆ. ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಗಳಲ್ಲಿ ನೀರು ಕೊರೆಸಿದರು ಸಾವಿರದ ಐನೂರು ಅಡಿ ಹೋದರು ಸಹ ನೀರು ಸಿಗದ ಪರಿಸ್ಥಿತಿಯಿದೆ. ಅದರಲ್ಲೂ ರೈತರು ಇರುವ ಕೊಳವೆಬಾವಿಗಳ ಕಡಿಮೆ ನೀರಲ್ಲಿ ಜೋಳ ಬೆಳೆ ಇತರೆ ವಸ್ತುಗಳನ್ನು ಬೆಳೆಯುತ್ತಿದ್ದಾರೆ. ಜೋಳ ಬೆಳೆಗೆ ಸೈನಿಕ ಸೈನಿಕ ಕಾಟದಿಂದ ರೈತರು ಕಂಗಾಲಾಗಿದ್ದಾರೆ.

ಹೈನುಗಾರಿಕೆಯಿಂದ ಆರ್ಥಿಕ ಸುಧಾರಣೆ: ತೀವ್ರಬರಗಾಲದಿಂದ ಕಂಗೆಟ್ಟಿದ್ದ ರೈತರು, ಹೈನುಗಾರಿಕೆಯಿಂದ ಆರ್ಥಿಕಮಟ್ಟ ಸುಧಾರಣೆ ಮಾಡಿಕೊಳ್ಳಲು ಮುಂದಾಗಿದ್ದು, ಈ ಹಿಂದೆ ಬಿದ್ದಿದ್ದ ಮಳೆಯಿಂದಾಗಿ ಸಂತಸಗೊಂಡಿದ್ದ ರೈತರು, ಭೂಮಿ ಉಳುಮೆ ಮಾಡಿ, ಜೋಳದ ಬೆಳೆಯನ್ನು ನಾಟಿ ಮಾಡಿದ್ದಾರೆ. ಮೇವಿನ ಬೆಳೆಯು ಕಟಾವಿನ ಹಂತಕ್ಕೆ ಬರುವಷ್ಟರಲ್ಲಿ ಈಗ ಸೈನಿಕ ಹುಳುವಿನ ಕಾಟ ಶುರುವಾಗಿದೆ. ಇದರಿಂದ ರಾಸುಗಳಿಗೆ ಮೇವು ಲಭ್ಯವಾಗುವುದು ಕಷ್ಟಕರವಾಗಿದ್ದು, ಸಂಪೂರ್ಣವಾಗಿ ಬೆಳೆ ನಾಶವಾಗುತ್ತಿದೆ. ತೋಟಗಳಿಗೆ ರಸಗೊಬ್ಬರಗಳನ್ನು ಹೊರತುಪಡಿಸಿ, ಬೇರೇನೂ ಹಾಕಿಲ್ಲ. ಈಗ ಸೈನಿಕ ಹುಳುವಿನ ನಾಶಕ್ಕೆ ರಾಸಾಯನಿಕ ಔಷಧಿಗಳನ್ನು ಸಿಂಪಡಣೆ ಮಾಡಿದರೆ, ರಾಸುಗಳ ಮೇವುಗಳಿಗೆ ತೊಂದರೆಯಾಗಲಿದೆ ಎನ್ನುವ ಆತಂಕ ಕಾಡುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಬೆಳೆ ಸಂಪೂರ್ಣ ನಾಶ: ಹಸಿರು ಮೇವಿಗಾಗಿ ರೈತರು, ತಮ್ಮ ತೋಟಗಳಲ್ಲಿ ನಾಟಿ ಮಾಡಿರುವ ಜೋಳದ ಬೆಳೆಗಳಿಗೆ ಸೈನಿಕ ಹುಳಗಳು ಬಿದ್ದಿದ್ದು, ಜೋಳದ ಗರಿಗಳು ಮತ್ತು ಸಸಿಗಳ ಸುಳಿಗಳನ್ನು ತಿಂದು ಹಾಕುತ್ತಿದ್ದು, ಬೆಳೆಗಳೆಲ್ಲಾ ಸಂಪೂರ್ಣವಾಗಿ ನಾಶವಾಗುತ್ತಿವೆ ಎಂದು ತಿಳಿದು ಬಂದಿದೆ.

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಸುರಿದ ಗುಡುಗು ಸಿಡಿಲ ಸಹಿತ ಅಬ್ಬರದ ಮಳೆಯು ಬಿಡುವು ಕೊಟ್ಟಿದೆ. ಬಿತ್ತನೆ ಕೆಲಸ ಆರಂಭಿಸಲು ರೈತರು ತಯಾರಿಮಾಡಿಕೊಳ್ಳು ತ್ತಿರುವಷ್ಟರಲ್ಲೇ ಈಗಾಗಲೇ ಬಿತ್ತನೆ ಮಾಡಿರುವ ಏಕದಳ ಹಾಗೂ ದ್ವಿದಳ ಬೆಳೆಗಳಿಗೆ ಸೈನಿಕ ಹುಳುಗಳ ಕಾಟ ಶುರುವಾಗಿದ್ದು, ಹಸಿಹುಲ್ಲು, ನಾಟಿ ಮಾಡಿರುವ ಪೈರುಗಳು, ಮೊಳಕೆಯೊಡೆದ ಸಸಿಗಳು ಹೀಗೆ ಹಸಿರಾಗಿ ಕಾಣಿಸುತ್ತಿರುವ ಎಲ್ಲವನ್ನೂ ತಿಂದು ಹಾಕಿ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.

Advertisement

ಜೋಳದ ಬೆಳೆಗೆ ಸೈನಿಕ ಹುಳು ಕಾಟದಿಂದ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿ ದ್ದೇವೆ. ಔಷಧಿ ಸಿಂಪಡನೆ ಮಾಡಿ, ಹುಳುಕಾಟಕ್ಕೆ ಕಡಿವಾಣ ಹಾಕಲಾಗುತ್ತಿದೆ. – ಮುನಿರಾಜು, ರೈತ

ಸೈನಿಕ ಹುಳುಗಳನ್ನು ನಾಶಪಡಿಸಲು ರೈತರು, ಎಮಾಮೆಕ್ಟಿನ್‌ ಬೆಂಝೊ ಎಟ್‌ 5ನ್ನು 100 ಗ್ರಾಂನ್ನು 200 ಲೀಟರ್‌ಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದ ರಿಂದ ಹುಳು ಸಾಯುತ್ತದೆ. ಮೇವಿಗೆ ಯಾವುದೇ ತೊಂದರೆಯಾಗುವುದಿಲ್ಲ. -ಕೆ.ಎಚ್‌.ವೀಣಾ, ಸಹಾಯಕ ನಿರ್ದೇಶಕಿ, ತಾಲೂಕು ಕೃಷಿ ಇಲಾಖೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next