Advertisement

ಗಾಲ್ವನ್‌ ವೀರರಿಗೆ ವಿಶೇಷ ಗೌರವ: ಲಡಾಖ್‌ನ ಪರ್ವತ ಪ್ರದೇಶಗಳಲ್ಲಿ ಬೈಕ್‌ ರ್‍ಯಾಲಿ

07:43 PM Jul 24, 2022 | Team Udayavani |

ನವದೆಹಲಿ: ಭಾರತೀಯ ಸೇನೆಯ ಬೈಕರ್‌ಗಳ ತಂಡವೊಂದು ಲಡಾಖ್‌ನ ಕಠಿಣ ಹಾಗೂ ಕಡಿದಾದ ಪರ್ವತಪ್ರದೇಶಗಳಲ್ಲಿ ಬೈಕ್‌ ಚಲಾಯಿಸುವ ಮೂಲಕ ಗಾಲ್ವಾನ್‌ ಹೀರೋಗಳಿಗೆ ವಿಶೇಷ ಗೌರವವನ್ನು ಸಲ್ಲಿಸಿದೆ.

Advertisement

ಗಾಲ್ವಾನ್‌ ಸಂಘರ್ಷದಲ್ಲಿ ಹುತಾತ್ಮರಾದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಾರ್ದರ್ನ್ ಕಮಾಂಡ್‌ ಯೋಧರು ನಂತರ ಶೈಲಾಕ್‌ ನದಿಯುದ್ದಕ್ಕೂ ಸಿಗುವ ಅಘಂ ಮತ್ತು ಖಲ್ಸಾರ್‌ ಗ್ರಾಮಗಳನ್ನು ದಾಟಿ 130 ಕಿ.ಮೀ. ದೂರದ ನುಬ್ರಾ ಕಣಿವೆಯನ್ನು ತಲುಪಿದರು.

2020ರ ಜೂನ್‌ನಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಸೈನಿಕರು ಮತ್ತು ಭಾರತದ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.

1993ರ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಜಯಭೇರಿಯ ಸ್ಮರಣಾರ್ಥ ಭಾರತೀಯ ಸೇನೆಯು ಸೋಮವಾರವೇ ಈ ಬೈಕ್‌ ರ್‍ಯಾಲಿ ಆರಂಭಿಸಿದೆ. ನವದೆಹಲಿಯಿಂದ ಲಡಾಖ್‌ನ ಕಾರ್ಗಿಲ್‌ ಯುದ್ಧ ಸ್ಮಾರಕದವರೆಗೆ ಈ ರ್‍ಯಾಲಿ ನಡೆಯಲಿದ್ದು, ಭೂಸೇನಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಬಿಎಸ್‌ ರಾಜು ಅವರು ಇದಕ್ಕೆ ಚಾಲನೆ ನೀಡಿದ್ದಾರೆ. 6 ದಿನಗಳ ಅವಧಿಯಲ್ಲಿ 30 ಯೋಧರ ತಂಡವು ಹರ್ಯಾಣ, ಪಂಜಾಬ್‌, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಅನ್ನು ಹಾದುಹೋಗಿ, ಜು.26ರಂದು ಕಾರ್ಗಿಲ್‌ ಯುದ್ಧ ಸ್ಮಾರಕವನ್ನು ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next