Advertisement
ಹುತಾತ್ಮ ಯೋಧ ಮಹೇಶನ ಕಥೆಯನ್ನು ಕೇಳಿದರೇ ಎಂಥವರದು ಕರಳು ಚುರುಕ್ ಎನ್ನುವಂತಿದೆ. ಕೇವಲ 25ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮ ಯೋಧನ ಬಾಳಲ್ಲಿ ನಡೆದ ವಿಧಿಯಾಟಕ್ಕೆ ಪಟ್ಟಣದ ಜನತೆಯು ಮಮ್ಮಲ ಮರುಗತ್ತಿದ್ದರೇ, ಕುಟುಂಬಸ್ಥರು, ಸಂಬಂಧಿಕರು ಕಣ್ಣಿರ ಕಡಲಲ್ಲಿ ಮುಳುಗಿದ್ದಾರೆ.
ಹುತಾತ್ಮ ಯೋಧ ಚಿಕ್ಕಂದಿನಲ್ಲೇ 13 ವರ್ಷದವರಿಂದಾಗಲೇ ತಂದೆಯನ್ನು ಕಳೆದುಕೊಂಡ ನತದೃಷ್ಟ. ತಂದೆಯ ಸಾವಿನ ನಂತರ ತಾಯಿ ಶಾರದಾ ಅವರ ಕೂಲಿ ಕೆಲಸ ಮಾಡುತ್ತಾ ಮಗನನ್ನು ಪಿಯುಸಿವರೆಗೆ ಶಿಕ್ಷಣ ಕೊಡಿಸಿದ್ದಾರೆ. ಮಹೇಶನ ಶೈಕ್ಷಣಿಕ ಬದುಕಿಗೆ ತಾಯಿಯ ಸಹೋದರರಾದ ಮಾವಂದಿರು, ಅಜ್ಜಿ(ತಾಯಿಯ ತಾಯಿ)ಯು ಮಹೇಶನ ಶಿಕ್ಷಣ ಮತ್ತು ಜೀವನಕ್ಕೆ ಸಹಕಾರ ನೀಡಿದ್ದಾರೆ. 6 ವರ್ಷಗಳ ಹಿಂದೆ ದೇಶ ಸೇವೆಗೆ :
ಅತ್ಯಂತ ಸೌಮ್ಯಸ್ವಭಾವದ ಮಹೇಶ ತಾಯಿ ಮತ್ತು ಮಾವಂದಿರ ಆಶ್ರಯದಲ್ಲಿ ಬೆಳೆದ. ಚಿಕ್ಕಂದಿನಿಂದಲೇ ದೇಶಸೇವೆ ಮಾಡುವ ಸಂಕಲ್ಪದೊಂದಿಗೆ ಪ್ರಯತ್ನಿಸಿ ತನ್ನ 19ನೇ ವಯಸ್ಸಿನಲ್ಲಿಯೇ ಬೆಳಗಾವಿ 11ನೇ ಮರಾಠಾ ಲೈಟ್ ಇನ್ಪೆಂಟರಿ ರೆಜಿಮೆಂಟ್ನ ಸೈನಿಕನಾಗಿ ಆಯ್ಕೆಯಾಗಿ ಸೇವೆ ಕಳೆದ 6 ವರ್ಷಗಳಿಂದ ದೇಶಸೇವೆಯಲ್ಲಿದ್ದನು.
Related Articles
ಸೈನಿಕನಾಗಿ ಮೂರು ವರ್ಷಗಳ ಸೇವೆಯ ನಂತರ 18-01-2024 ರಂದು ಲಕ್ಷ್ಮೀ ಅವರೊಂದಿಗೆ ವಿವಾಹವಾಗಿದ್ದರು.ಇನ್ನು ಮಕ್ಕಳಿಲ್ಲ. ಗಂಡ-ಹೆಂಡತಿ ಸುಖವಾಗಿ ನೂರಾರು ವರ್ಷ ಬಾಳಿ ಬದುಕಬೇಕಾಗಿದ್ದ ಮಹೇಶ-ಲಕ್ಷ್ಮೀ ಜೋಡಿಯ ಮೇಲೆ ಅದ್ಯಾವ ಕೆಟ್ಟದೃಷ್ಟಿ ಬಿತ್ತೋ ಗೊತ್ತಿಲ್ಲ. ಮದುವೆಯಾಗಿ ಕೇವಲ ಮೂರು ವರ್ಷಗಳಲ್ಲಿಯೇ ಅಗಲಿದ ಪತಿಯನ್ನು ನೆನಸಿಕೊಂಡು ಗೋಳಾಡುತ್ತಿರುವ ಹೆಂಡತಿ ಸ್ಥಿತಿಯನ್ನು ಕಂಡು ಮಹಿಳೆಯರು ಕಣ್ಣಿರಿಡುತ್ತಿದ್ದಾರೆ. ದೇಶ ಸೇವೆಯ ಮಾಡುತ್ತಿರುವ ಹೆಮ್ಮೆಯ ಯೋಧನ ಕೈಹಿಡಿದ ಲಕ್ಷ್ಮೀ ಚಿಕ್ಕವಯಸ್ಸಿನಲ್ಲೇ ಯೋಧ ಗಂಡನನ್ನು ಕಳೆದುಕೊಂಡದ್ದು ಅತಿ ದು:ಖದ ಸಂಗತಿ.
Advertisement
ಪತ್ನಿ ಮರಳಿ ಮನೆಗೆ -ಪತಿ ಸಾವಿನ ಮನೆಗೆ: ಸೈನಿಕನಾಗಿ ಪತ್ನಿಯೊಂದಿಗೆ ಹಿಮಾಚಲ ಪ್ರದೇಶದಲ್ಲಿ ವಾಸವಾಗಿದ್ದರು. ಮಹೇಶ ತಮ್ಮ ರೆಜಿಮೆಂಟ್ನ ತಂಡದೊಂದಿಗೆ ಕಾಶ್ಮೀರಕ್ಕೆ ಕರ್ತವ್ಯ ನಿಯೋಜನೆಯಾದ್ದರಿಂದ ಪತ್ನಿಯನ್ನು ಮರಳಿ ಮಹಾಲಿಂಗಪುರಕ್ಕೆ ಕಳಿಸಿ, ಮಹೇಶ ಕಾಶ್ಮೀರಕ್ಕೆ ತರಳಿದ್ದರು. ಪತ್ನಿ ಲಕ್ಷ್ಮೀಯು ಡಿ.24ರ ಮಂಗಳವಾರ ಮುಂಜಾನೆ ಮಹಾಲಿಂಗಪುರದ ಮನೆಗೆ ಮರಳಿ ಬಂದಿದ್ದಾರೆ. ಬುಧವಾರ ಮುಂಜಾನೆ ವೇಳೆಗೆ ಪತಿಯು ಹುತಾತ್ಮರಾದ ಸುದ್ದಿಯು ಬರಸಿಡಿಲು ಬಡಿದಂತಾಗಿದೆ. ಇತ್ತ ಪತ್ನಿ ಲಕ್ಷ್ಮೀ ಮನೆಗೆ ಬಂದರೇ, ಅತ್ತ ಯೋಧ ಮಹೇಶ ಸೇನಾ ವಾಹನ ಅಪಘಾತದಲ್ಲಿ ಮರಳಿ ಬಾರದ ಸಾವಿನ ಮನೆಗೆ ತೆರಳಿದ್ದಾರೆ. ಕೇವಲ 25 ವರ್ಷದ ಸೈನಿಕ ಮಹೇಶನ ಬಾಳಲ್ಲಿ ನಡೆದ ವಿಧಿಯಾಟಕ್ಕೆ ಪಟ್ಟಣದ ಜನತೆಯು ಮಮ್ಮಲ ಮರಗುತ್ತಿದ್ದಾರೆ.