Advertisement

ರಕ್ಷಣಾ ಬಜೆಟ್‌: ಸೇನೆಗೆ ಅಸಮಾಧಾನ, ಆಧುನೀಕರಣಕ್ಕೆ ಸಾಲದು

11:32 AM Mar 14, 2018 | Team Udayavani |

ಹೊಸದಿಲ್ಲಿ : ಚೀನ ತನ್ನ ಮಿಲಿಟರಿ ಖರ್ಚು ವೆಚ್ಚಗಳನ್ನು ಭಾರೀ ಪ್ರಮಾಣಕ್ಕೆ ಏರಿಸಿರುವ ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಆಧುನೀಕರಣದ ಬಗ್ಗೆ ಹೊಂದಿದ್ದ ನಿರೀಕ್ಷೆಗಳು ಈಗ ಹುಸಿಯಾಗಿವೆ; 2018-19ರಲ್ಲಿ  ರಕ್ಷಣಾ ಬಜೆಟ್‌ನಲ್ಲಿ ಒದಗಿಸಲಾಗಿರುವ ಹಣವು ಅಪರ್ಯಾಪ್ತವಾಗಿದೆ ಎಂದು ಉಪ ಸೇನಾ ಮುಖ್ಯಸ್ಥ ಲೆ| ಜ| ಶರತ್‌ ಚಂದ್‌ ಅವರು ವಿಷಾದಿಸಿದ್ದಾರೆ. 

Advertisement

ಸರಕಾರ ಒದಗಿಸಿರುವ ರಕ್ಷಣಾ ಬಜೆಟ್‌ ಮೊತ್ತ ಅಪರ್ಯಾಪ್ತವಾಗಿರುವುದರ ಫ‌ಲವಾಗಿ ಅನೇಕ ಮೇಕ್‌ ಇನ್‌ ಇಂಡಿಯಾ ಯೋಜನೆಗಳು ಅರ್ಧದಲ್ಲೇ ಕೊನೆಗೊಳ್ಳಬಹುದು ಎಂಬ ಭಯವನ್ನು ಲೆ| ಜ| ಶರತ್‌ ಚಂದ್‌ ಅವರು ಸಂಸದೀಯ ಮಂಡಳಿಯ ಮುಂದೆ ವ್ಯಕ್ತಪಡಿಸಿದ್ದಾರೆ. 

ಭಾರತೀಯ ಸೇನೆಯ ಆಧುನೀಕರಣಕ್ಕೆಂದು ಒದಗಿಸಲಾಗಿರುವ 21,388 ಕೋಟಿ ರೂ.ಗಳು ಅಪರ್ಯಾಪ್ತವಾಗಿವೆ. ಈಗ ಚಾಲ್ತಿಯಲ್ಲಿರುವ 125 ಯೋಜನೆಗಳು, ತುರ್ತು ಖರೀದಿಗಳು ಮತ್ತು ಇತರ ಆವಶ್ಯಕತೆಗಳನ್ನು ಪೂರೈಸುವುದಕ್ಕೇ 29,033 ಕೋಟಿ ರೂ.ಗಳು ಬೇಕಾಗಿರುವಾಗ ರಕ್ಷಣಾ ಬಜೆಟ್‌ ನಲ್ಲಿ ಕೊಡಲಾಗಿರುವ 21,388 ಕೋಟಿ ರೂ.ಗಳು ಯಾವುದಕ್ಕೂ ಸಾಲದು ಎಂದು ಲೆ| ಜ| ಶರತ್‌ ಚಂದ್‌ ಸಂಸದೀಯ ಮಂಡಳಿಗೆ ಸ್ಪಷ್ಟಪಡಿಸಿದ್ದಾರೆ. 

2018-19ರ ರಕ್ಷಣಾ ಬಜೆಟ್‌ ನಮ್ಮ ನಂಬಿಕೆ ಮತ್ತು ಆಶಯಗಳನ್ನು ನುಚ್ಚುನೂರು ಮಾಡಿವೆ. ಈಗಾಗಲೇ ನಾವೇನಾದರೂ ಮಾಡಿರುವ ಸಣ್ಣ ಪುಟ್ಟ ಸಾಧನೆಗಳಿಗೆ ಕೂಡ ಇದರಿಂದ ಹಿನ್ನಡೆಯಾಗಿದೆ ಎಂದವರು ವಿಷಾದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next