Advertisement

ಕಾನ್ಪುರ್: ರಷ್ಯಾ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಸೇನಾ ಅಧಿಕಾರಿ, ದೂರು ದಾಖಲು

05:40 PM Dec 14, 2020 | Nagendra Trasi |

ಕಾನ್ಪುರ್: ಕಂಟೋನ್ಮೆಂಟ್ ಪ್ರದೇಶದಲ್ಲಿ ಸೇನಾ ಅಧಿಕಾರಿಯೊಬ್ಬ ರಷ್ಯಾ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಡಿಸೆಂಬರ್ (2020) 10ರಂದು ನಡೆದಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸರ ಬಳಿ ಅಪರಾಧ ದಂಡ ಸಂಹಿತೆ ಕಾಯ್ದೆ 161ರ ಪ್ರಕಾರ ಹೇಳಿಕೆ ದಾಖಲಿಸಿರುವುದಾಗಿ ವರದಿ ತಿಳಿಸಿದೆ.

Advertisement

ಈ ಹಿಂದೆಯೂ ಆರೋಪಿ ಅಧಿಕಾರಿ ರಷ್ಯಾ ಮಹಿಳೆಗೆ ಕಿರುಕುಳ ನೀಡಲು ಪ್ರಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.

ಕಾನ್ಪುರ್ ಎಎಸ್ ಪಿ ನಿಖಿಲ್ ಪಾಠಕ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಧಿಕಾರಿ ಕರ್ನಲ್ ನೀರಜ್ ಗೆಹ್ಲೋಟ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ 48 ಗಂಟೆಯಿಂದ ಆರೋಪಿ ಕರ್ನಲ್ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ. ಏತನ್ಮಧ್ಯೆ ಪೊಲೀಸ್ ತಂಡ ಮತ್ತು ಕಣ್ಗಾವಲು ಪಡೆ ಆರೋಪಿಯ ಬಂಧನಕ್ಕೆ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ವರದಿ ವಿವರಿಸಿದೆ.

ಇದನ್ನೂ ಓದಿ:ಯಳಂದೂರಿನಲ್ಲೂ ‘ಪಂಚಲಿಂಗ ದರ್ಶನ’: ಐತಿಹ್ಯ ಸಾರುವ 450 ವರ್ಷಗಳ ‘ಬಳೇಮಂಟಪ’

Advertisement

ಡಿಸೆಂಬರ್ 10ರಂದು ನಗರದಲ್ಲಿರುವ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಅಧಿಕಾರಿಗಳ ಮೆಸ್ ಗೆ ಊಟಕ್ಕಾಗಿ ರಷ್ಯಾ ಮಹಿಳೆಯನ್ನು ಆರೋಪಿ ಅಧಿಕಾರಿ ಆಹ್ವಾನಿಸಿದ್ದು, ನಂತರ ಆಕೆ ಮೇಲೆ ಅತ್ಯಾಚಾರ ಎಸಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next