Advertisement

ಪತ್ನಿ ಹತ್ಯೆಗೈದು ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಲೆಫ್ಟಿನೆಂಟ್ ಕರ್ನಲ್

02:11 PM Jan 09, 2023 | Team Udayavani |

ಚಂಡಿಗಢ: ಭಾರತೀಯ ಸೇನೆಯ ಅಧಿಕಾರಿ, ಲೆಫ್ಟಿನೆಂಟ್ ಕರ್ನಲ್ ವೊಬ್ಬರು ತನ್ನ ಪತ್ನಿಯನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್‌ನ ಫಿರೋಜ್‌ಪುರ ಭಾನುವಾರ ರಾತ್ರಿ (ಜ.8 ರಂದು) ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ದಂಪತಿಗೆ ವೈವಾಹಿಕ ಸಮಸ್ಯೆಗಳಿದ್ದವು. ಹಲವು ಬಾರಿ ಸಂಬಂಧದಲ್ಲಿ ಗಲಾಟೆಗಳಾಗುತ್ತಿದ್ದವು. ದಂಪತಿ ವೈವಾಹಿಕ ವಿಚಾರದಲ್ಲಿ ಕೌನ್ಸಿಲಿಂಗ್‌ ಸೆಷನ್ಸ್‌ ಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿ ಹಲ್ಲೆಗೆ ಯತ್ನ; ನಾಳೆ ಸಾಗರ ಟೌನ್‌ ಬಂದ್

ಲೆಫ್ಟಿನೆಂಟ್ ಕರ್ನಲ್ ಪತ್ನಿಯ ಪ್ರಾಣವನ್ನು ತೆಗೆದಿರುವುದಾಗಿ ಡೆತ್‌ ನೋಟ್‌ ನಲ್ಲಿ ಬರೆದಿದ್ದಾರೆ. ಹೆಂಡತಿಯ ದೇಹ ಮನೆಯಲ್ಲಿ ಪತ್ತೆಯಾಗಿದ್ದು, ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅಧಿಕಾರಿಯ ದೇಹ ಪತ್ತೆಯಾಗಿದೆ.

ಸೇನೆ ಮತ್ತು ಪಂಜಾಬ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next