Advertisement
ದಿನದ ಮಹತ್ವ1947ರಲ್ಲಿ ಭಾರತ ಸ್ವತಂತ್ರವಾದ ಸುಮಾರು ಒಂದೂ ವರೆ ವರ್ಷಗಳ ಬಳಿಕ 1949ರ ಜ.15ರಂದು ಬ್ರಿಟಿಷರ ಆಳ್ವಿಕೆಯಿಂದ ಭಾರತೀಯ ಭೂಸೇನೆಗೆ, ಭಾರತೀಯ ಮುಖ್ಯಸ್ಥರಿಗೆ ಸೇನಾ ಆಡಳಿತವನ್ನು ಹಸ್ತಾಂತರಿ ಸಲಾಯಿತು. ಈ ದಿನದ ನೆನಪಿಗಾಗಿ ಪ್ರತೀ ವರ್ಷ ಈ ದಿನವನ್ನು ಭಾರತೀಯ ಸೇನಾ ದಿನವೆಂದು ಆಚರಿಸಲಾಗುತ್ತಿದೆ.
1949ರಲ್ಲಿ ಭಾರತಕ್ಕೆ ಸಂಪೂರ್ಣ ವಾಗಿ ಅಧಿಕಾರ ಹಸ್ತಾಂತರವಾದಾಗ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ವತಂತ್ರ ಭಾರತದ ಸೇನೆಯ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡರು. ಕರ್ನಾಟಕದ ಕೊಡಗಿನವರಾದ ಕಾರ್ಯಪ್ಪ ಅವರು ಸುಮಾರು 3 ದಶಕಗಳ ಕಾಲ ಸೇವಾವಧಿಯಲ್ಲಿದ್ದರು. ಸ್ಯಾಮ್ ಮಾಣಿಕ್ ಷಾರವರ ಅನಂತರ ಫೀಲ್ಡ್ ಮಾರ್ಷಲ್ ಪಡೆದ ಎರಡನೇ ಜನರಲ್ ಇವರು. ಸಶಸ್ತ್ರ ಪಡೆಗಳ ಮುಖ್ಯಸ್ಥ
2019ರಲ್ಲಿ ದೇಶದ ಮೂರು ಸಶಸ್ತ್ರ ಪಡೆಗಳಿಗೆ ಮುಖ್ಯಸ್ಥರನ್ನು ನೇಮಿಸಲಾಯಿತು. 2021ರಲ್ಲಿ ವಿಮಾನ ದುರಂತದಲ್ಲಿ ಅವರ ನಿಧನದ ಬಳಿಕ 2022ರಲ್ಲಿ
ಜ| ಅನಿಲ್ ಚೌವ್ಹಾಣ್ ಅವರನ್ನು ನೇಮಿಸಲಾಯಿತು.
Related Articles
ಸೇನಾದಿನದ ಅಂಗವಾಗಿ ಜ.15ರಂದು ಮಹಾರಾಷ್ಟ್ರದ ಪುಣೆಯಲ್ಲಿ ಭಾರತೀಯ ರಕ್ಷಣ ಪಡೆ ಗಳಿಂದ ವಿಶೇಷ ಪರೇಡ್, ಸೇನಾ ಶಕ್ತಿ ಪ್ರದರ್ಶನ, ಸೇನಾ ಮಾಹಿತಿಗಳ ವಸ್ತು ಪ್ರದರ್ಶನ ನಡೆಯ ಲಿದೆ. ಇದೇ ಪ್ರಪ್ರಥಮ ಬಾರಿಗೆ ಭಾರತೀಯ ಸೇನೆಯ ಹೊಸ ತಂತ್ರಜ್ಞಾನದ ರೋಬೋಟಿಕ್ಸ್ ಮ್ಯೂಲ್ಸ್‌ಗಳು ಹಾಗೂ ಸಂಪೂರ್ಣ ಮಹಿಳಾ ಎನ್‌ಸಿಸಿ ಕೆಡೆಟ್‌ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
Advertisement
ಅತೀ ದೊಡ್ಡ ರಕ್ಷಣ ಪಡೆ14 ಲಕ್ಷಕ್ಕೂ ಹೆಚ್ಚಿನ ಸೇನಾ ವೀರರನ್ನು ಹೊಂದಿರುವ ಭಾರತದ ಸೇನೆ ಪ್ರಪಂಚದ ಅತೀ ದೊಡ್ಡ ರಕ್ಷಣ ಪಡೆ ಹೊಂದಿರುವ ರಾಷ್ಟ್ರಗಳ ಪೈಕಿ ಚೀನ ಬಳಿಕ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಅತೀ ಶಕ್ತಿಯುತ ಸೇನಾ ಪಡೆಯಲ್ಲಿ 5ನೇ ಸ್ಥಾನ ಹಾಗೂ ಅತೀ ದೊಡ್ಡ ಸೇನಾ ಬಜೆಟ್ ಹೊಂದಿರುವ ಮೂರನೇ ರಾಷ್ಟ್ರ ಭಾರತವಾಗಿದೆ.