Advertisement

ರೈಲು ಪ್ರಯಾಣಿಕರ ಯೋಗ ಕ್ಷೇಮ ವಿಚಾರಿಸಿದ ಲೆ. ಜನರಲ್‌

09:51 PM Jan 12, 2022 | Team Udayavani |

ಶ್ರೀನಗರ: ಭಾರತೀಯ ಸೇನೆಯ ಉತ್ತರ ಕಮಾಂಡ್‌ನ‌ ಕಮಾಂಡರ್‌ ಆಗಿರುವ ಲೆಫ್ಟಿನೆಂಟ್‌ ಜನರಲ್‌ ಯೋಗೇಶ್‌ ಕುಮಾರ್‌ ಜೋಶಿ ಬುಧವಾರ ರೈಲು ಪ್ರಯಾಣ ಮಾಡಿದ್ದಾರೆ.

Advertisement

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಿಂದ ಕಾಜಿಯಾಬಾದ್‌ವರೆಗೆ ರೈಲು ಪ್ರಯಾಣ ಮಾಡಿದ ಅವರು, ರೈಲಿನಲ್ಲಿದ್ದ ಪ್ರಯಾಣಿಕರನ್ನು ಮಾತನಾಡಿಸಿ, ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ.

ಸೇನೆಯ ಮುಖ್ಯ ಹುದ್ದೆಯಲ್ಲಿರುವ ಅಧಿಕಾರಿ ಈ ರೀತಿ ರೈಲಿನಲ್ಲಿ ಬಂದು ಮಾತನಾಡಿಸಿದ್ದನ್ನು ಕಂಡು ಪ್ರಯಾಣಿಕರು ಆಶ್ಚರ್ಯ ಮತ್ತು ಸಂತೋಚ ವ್ಯಕ್ತಪಡಿಸಿದ್ದಾಗಿ ಸೇನೆಯ ವಕ್ತಾರರು ತಿಳಿಸಿದ್ದಾರೆ.

ಜ.ಯೋಗೇಶ್‌ ಕುಮಾರ್‌ ಅವರು ಕಳೆದ ವರ್ಷ ಕಾರ್ಗಿಲ್‌ ವಿಜಯ ದಿವಸಕ್ಕೆ ಬೈಕ್‌ ರ್‍ಯಾಲಿ ನಡೆಸಿ, ಅನೇಕರ ಗಮನ ಸೆಳೆದಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next