Advertisement

ಸೇನಾಪಡೆಗಳ ಮುಖ್ಯಸ್ಥ ಸಮಿತಿ ಮುಖ್ಯಸ್ಥ ಹುದ್ದೆಗೆ ಜ|ನರವಾಣೆ

11:39 PM Dec 16, 2021 | Team Udayavani |

ಹೊಸದಿಲ್ಲಿ: ಭೂಸೇನೆಯ ಮುಖ್ಯಸ್ಥ ಜ| ಎಂ. ಎಂ. ನರವಾಣೆ ಅವರು ಸೇನಾಪಡೆಗಳ ಮುಖ್ಯಸ್ಥರ ಸಮಿತಿಯ ಮುಖ್ಯಸ್ಥ (ಚೀಫ್ ಆಫ್ ಸ್ಟಾಫ್ ಕಮಿಟಿ ಹೆಡ್‌) ಹುದ್ದೆಗೆ ನೇಮಕಗೊಂಡಿದ್ದಾರೆ.

Advertisement

ಡಿ.8ರಂದು ಕುನೂರ್‌ನಲ್ಲಿ ನಡೆದಿದ್ದ ಐಎಎಫ್ ಹೆಲಿಕಾಪ್ಟರ್‌ ದುರಂತದಲ್ಲಿ ಅಸುನೀಗಿದ್ದ ಜ| ಬಿಪಿನ್‌ ರಾವತ್‌ ಸ್ಥಾನಕ್ಕೆ ಅವರು ನೇಮಕಗೊಂಡಿದ್ದಾರೆ. ಇದರಿಂದಾಗಿ ಸದ್ಯ ತೆರವಾಗಿರುವ ರಕ್ಷಣ ಪಡೆಗಳ ಮುಖ್ಯಸ್ಥ ಹುದ್ದೆಗೆ ಜ| ನರವಾಣೆ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಸದ್ಯಕ್ಕೆ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರ ಪೈಕಿ ಜ| ನರವಾಣೆ ಅವರೇ ವಯಸ್ಸಿನಲ್ಲಿ ಹಿರಿಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next