Advertisement

ಪೊನ್ನಂಪೇಟೆಯಲ್ಲಿ ತ್ರಿಶೂಲ ದೀಕ್ಷೆ,ಏರ್‌ ಗನ್‌ ತರಬೇತಿ; ಸಂಘ ಪರಿವಾರದ ನಡೆಗೆ ತೀವ್ರ ಆಕ್ಷೇಪ

11:33 AM May 16, 2022 | Team Udayavani |

ಪೊನ್ನಂಪೇಟೆ: ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ತನ್ನ ಕಾರ್ಯಕರ್ತರಿಗೆ ಪೊನ್ನಂಪೇಟೆಯ ಶಾಲಾ ಆವರಣವೊಂದರಲ್ಲಿ ತ್ರಿಶೂಲ ದೀಕ್ಷೆ ಹಾಗೂನಿರ್ಜನ ಪ್ರದೇಶವೊಂದರಲ್ಲಿ ಏರ್‌ ಗನ್‌ ತರಬೇತಿ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಹಿಂದೂ ಸಂಘಟನೆಗಳ ವತಿಯಿಂದ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಒಂದು ವಾರಗಳ ಕಾಲ ನಡೆದ ಶೌರ್ಯಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಕಾರ್ಯಕರ್ತರಿಗೆತ್ರಿಶೂಲ ವಿತರಿಸುತ್ತಿರುವ ಫೋಟೋ ಗಳು ಇದೀಗ ವೈರಲ್‌ ಆಗಿವೆ.

ಶಿಬಿರದ ಸಂದರ್ಭ ಏರ್‌ಗನ್‌ತರಬೇತಿ ನೀಡಿರುವ ಫೋಟೋಗಳೂ ಹರಿದಾಡುತ್ತಿವೆ. ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳ ವಿಶ್ವ ಹಿಂದೂ ಪರಿಷತ್‌ಮತ್ತು ಬಜರಂಗದಳದ 120ಕ್ಕೂಅಧಿಕ ಕಾರ್ಯಕರ್ತರು ಭಾಗಿಯಾಗಿರುವುದು ಖಾತ್ರಿಯಾಗಿದೆ.

ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್‌, ವಿಧಾನಪರಿಷತ್‌ ಸದಸ್ಯ ಸುಜ ಕುಶಾಲಪ್ಪ, ಹಿಂದೂ ಸಂಘಟನೆಗಳ ರಾಜ್ಯ ಮಟ್ಟದ ಪ್ರಮುಖರು ಪಾಲ್ಗೊಂಡು ಸಂದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೂ ಸಂಘಟನೆಗಳ ಪ್ರಮುಖರು ಹಿಂದೂ ಧರ್ಮ ಮತ್ತುಸ್ವಯಂ ರಕ್ಷಣೆ ಕುರಿತು ಬೌದ್ಧಿಕ್‌ನಲ್ಲಿ ವಿವರಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಇಂದು ಪೊಲೀಸ್‌ ದೂರು :  ತ್ರಿಶೂಲ ದೀಕ್ಷೆ ಮತ್ತು ಶಸ್ತ್ರಾಸ್ತ್ರ ತರಬೇತಿ ನೀಡಿರುವುದಕ್ಕೆ ಕೆಲವುಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಮಡಿಕೇರಿ ನಗರಸಭೆಸದಸ್ಯ ಅಮೀನ್‌ ಮೊಹಿಸಿನ್‌ಪ್ರತಿಕ್ರಿಯಿಸಿ, ಸಮಾಜದ ಸಾಮರಸ್ಯ ವನ್ನು ಕದಡಲು ಈ ರೀತಿಯತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಶಸ್ತ್ರಾಸ್ತ್ರ ತರಬೇತಿಗೆ ಕಾರಣವೇನು ಎಂದು ಪತ್ತೆಹಚ್ಚುವಂತೆ ಆಗ್ರಹಿಸಿ ಮೇ 16ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.

ಯಾರ ವಿರುದ್ಧವೂ ಅಲ್ಲ :  ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷಸುರೇಶ್‌ ಮುತ್ತಪ್ಪ ಮಾತನಾಡಿ,ಸುಮಾರು 20 ವರ್ಷಗಳ ಅನಂತರ ಕೊಡಗಿನಲ್ಲಿ ಹಿಂದೂ ಜಾಗೃತಿ ಶಿಬಿರ ನಡೆಸಲು ಅವಕಾಶ ದೊರೆತಿದೆ.ತ್ರಿಶೂಲ ಧಾರಣೆ ಪದ್ಧತಿ ಹಿಂದೂ ಸಂಪ್ರದಾಯವಾಗಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಬಹಳ ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ಏರ್‌ಗನ್‌ಮೂಲಕ ತರಬೇತಿ ನೀಡಲಾಗಿದ್ದು,ಇದು ಹಿಂದೂ ಧರ್ಮ ಮತ್ತು ಸ್ವಯಂ ರಕ್ಷಣೆಯ ಪಾಠವೇ ಹೊರತು ಯಾರ ವಿರುದ್ಧವೂ ನಡೆದ ಚಟುವಟಿಕೆ ಅಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಗುಪ್ತಚರ ಇಲಾಖೆಗೆ

ಮಾಹಿತಿ ಇಲ್ಲ :

ವಿಹಿಂಪ ಮತ್ತು ಬಜರಂಗದಳ ಪೊನ್ನಂಪೇಟೆ ಶಾಲೆಯ ಆವರಣದಲ್ಲಿ ಒಂದು ವಾರ ನಡೆಸಿದ ಶಿಬಿರದ ಬಗ್ಗೆ ಜಿಲ್ಲಾ ಗುಪ್ತಚರ ಇಲಾಖೆಗೆ ಮಾಹಿತಿ ಇಲ್ಲವೆಂದು ತಿಳಿದು ಬಂದಿದೆ. ಫೋಟೋಗಳು ವೈರಲ್‌ ಆದ ಅನಂತರವಷ್ಟೇ ಈ ಬಗ್ಗೆ ಅಧಿಕಾರಿ ಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next