ದೇಹ ದಂಡಿಸಿ, ಕಸರತ್ತು ಮಾಡುವ ಹಲವು ವಿಡಿಯೋಗಳು ಜಾಲತಾಣಗಳಲ್ಲಿ ನೆಟ್ಟಿಗರ ಮನಸೆಳೆಯುವುದನ್ನು ನೋಡುತ್ತಲೇ ಇರುತ್ತೀವಿ. ಆದರೆ, ಇಲ್ಲೊಬ್ಬ ವ್ಯಕ್ತಿ ದೇಹ ದಂಡಿಸಿದ ರೀತಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವುದು ಮಾತ್ರವಲ್ಲದೇ, ಅದರಿಂದಲೇ ಗಿನ್ನೆಸ್ ದಾಖಲೆ ಕೂಡ ಸೃಷ್ಟಿಯಾಗಿಬಿಟ್ಟಿದೆ.
Advertisement
ಹೌದು, ಅರ್ಮೇನಿಯಾದ ಅಥ್ಲೀಟ್ ಹಮಾಜಾಸ್ ಲೊಯಾನ್, ಹೆಲಿಕಾಪ್ಟರ್ನ ಕಂಬಿ ಹಿಡಿದು, 1 ನಿಮಿಷದಲ್ಲಿ 32 ಪುಶ್ಅಪ್ಗಳ ನ್ನು ಮಾಡುವ ಮೂಲಕ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಅರೆ ವ್ಹಾ ಎಂದಿದ್ದಾರೆ. ಇದಕ್ಕೂ ಮುನ್ನ ಬೆಲ್ಜಿಯಂನ ವ್ಯಕ್ತಿ ನಿಮಿಷದಲ್ಲಿ 25 ಪುಶ್ಅಪ್ ಮಾಡಿದ್ದರು.