Advertisement
ಸಾಮಾನ್ಯ ಅಗತ್ಯಗಳಾದ ಸಬ್‌ಮರೀನ್, ಯುದ್ಧನೌಕೆ, ಶಸ್ತ್ರಾಸ್ತ್ರಗಳು, ಡಿಸ್ಟ್ರಾಯರ್‌ಗಳ ಜತೆಗೆ ಇತರ ಅತ್ಯಾಧುನಿಕ ಅಸ್ತ್ರಗಳೂ ಅಗತ್ಯವಿರುತ್ತವೆ. ಆಧುನಿಕ ಸನ್ನಿವೇಶದಲ್ಲಿ ಡ್ರೋನ್‌ಗಳು ಅತ್ಯಂತ ಮಹತ್ವದ್ದಾಗಿವೆ. ಸದ್ಯ ಸೇನೆ ಬಳಿ ಇಸ್ರೇಲ್‌ನಿಂದ ಆಮದು ಮಾಡಿ ಕೊಂಡ 200 ಡ್ರೋನ್‌ಗಳಿವೆ. ಇನ್ನೊಂದೆಡೆ ಡಿಆರ್‌ಡಿಒ ಘಾತಕ್ ಡ್ರೋನ್ ಅಭಿವೃದ್ಧಿ ಪಡಿಸುತ್ತಿದೆ. ಈ ವೈಶಿಷ್ಟéದ 30ಕ್ಕೂ ಹೆಚ್ಚು ಡ್ರೋನ್‌ಗಳು ಸೇನೆಗೆ ಬೇಕಾಗುತ್ತವೆ. ಅಲ್ಲದೆ ಸ್ಪೈ ಡ್ರೋನ್‌ಗಳೂ ಅಗತ್ಯವಿರುತ್ತವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅರುಣಾಚಲ ಪ್ರದೇಶದ ಭಾರತ- ಚೀನ ಗಡಿಯಿಂದ 100 ಕಿ.ಮೀ ದೂರದಲ್ಲಿರುವ ಕಾಮ್ಲೆ ಜಿಲ್ಲೆಯಲ್ಲಿ ಸಂಶಯಾಸ್ಪದ ವಸ್ತುವೊಂದು ಸಿಕ್ಕಿದ್ದು, ಅದರಲ್ಲಿ ಚೀನೀ ಅಕ್ಷರಗಳು ಇರುವುದು ಸ್ಥಳೀಯರ ಆತಂಕವನ್ನು ಹೆಚ್ಚಿಸಿದೆ. ಬಟ್ಟೆಯಂಥ ವಸ್ತುವಿನಿಂದ ಸುತ್ತಲಾಗಿದ್ದ ಸ್ವಲ್ಪ ಸುಟ್ಟಿರುವ ಬಿಳಿ ಪೆಟ್ಟಿಗೆ ಮರದ ಮೇಲೆ ಸಿಲುಕಿತ್ತು. ಇದರ ಮೇಲೆ ಚೀನೀ ಅಕ್ಷರಗಳಿದ್ದವು. ಈ ಕುರಿತು ಮರ ಕಡಿಯುವವರು ಮಾಹಿತಿ ನೀಡಿದರು. ಪೆಟ್ಟಿಗೆಯಲ್ಲಿ ವಿಮಾನಗಳಲ್ಲಿ ಬಳಸುವ ಬ್ಯಾಟರಿ, ಹವಾಮಾನ ಇಲಾಖೆಯಲ್ಲಿ ಬಳಕೆಯಾಗುವಂಥ ವಸ್ತುಗಳು ಇದ್ದವು ಎಂದು ಪೊಲೀಸರು ಹೇಳಿದ್ದಾರೆ.