Advertisement

ಈ ಬಾರಿಯಾದರೂ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

04:49 PM Mar 30, 2023 | Team Udayavani |

ಮುಂಬೈ: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭಾಗವಾಗಿದ್ದಾರೆ, ಆದರೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಇನ್ನೂ ಒಂದೇ ಒಂದು ಪಂಡ್ಯವಾಡಿಲ್ಲ. 2022 ರಲ್ಲಿ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಅವರಿಗೆ ಅವಕಾಶ ನೀಡಿರಲಿಲ್ಲ. ಐಪಿಎಲ್ 2023 ಕ್ಕೆ ಮುಂಚಿತವಾಗಿ ತಂಡದೊಂದಿಗೆ ಅಭ್ಯಾಸ ನಡೆಸುತ್ತಿರುವ ಅರ್ಜುನ್ ಬಗ್ಗೆ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.

Advertisement

ಅರ್ಜುನ್ ಈ ಬಾರಿಯಾದರೂ ಅವಕಾಶ ಪಡೆಯುತ್ತಾರೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್, “ಒಳ್ಳೆಯ ಪ್ರಶ್ನೆ. ಆಶಾಭಾವನೆ ಇರಲಿ” ಎಂದಷ್ಟೇ ಹೇಳಿದರು.

ಇದನ್ನೂ ಓದಿ:ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…

ತಂಡದ ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ಅವರು ಮಾತನಾಡಿ, “ಅರ್ಜುನ್ ತಮ್ಮ ಬೌಲಿಂಗ್‌ನಿಂದ ಹಲವರನ್ನು ಮೆಚ್ಚಿಸಿದ್ದಾರೆ, ಅವರು ಸಿದ್ಧರಾಗಿದ್ದರೆ. ಅವರನ್ನು ಆಯ್ಕೆಗೆ ಖಂಡಿತವಾಗಿ ಪರಿಗಣಿಸಲಾಗುವುದು” ಎಂದರು.

ವರ್ಷಾಂತ್ಯದಲ್ಲಿ ಭಾರತ ಏಕದಿನ ವಿಶ್ವಕಪ್ ಆಡಲಿರುವುದರಿಂದ ಪಂದ್ಯಾವಳಿಯ ಅವಧಿಯಲ್ಲಿ ರೋಹಿತ್‌ ಗೆ ಕೆಲವು ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆಯ ಬಗ್ಗೆಯೂ ಬೌಚರ್ ಮಾತನಡಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next