Advertisement

ಗೋವಾದಲ್ಲಿ ಅಭ್ಯಾಸ ಆರಂಭಿಸಿದ ಅರ್ಜುನ್‌ ತೆಂಡುಲ್ಕರ್‌

10:33 PM Aug 15, 2022 | Team Udayavani |

ಪಣಜಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ದೇಶಿ ಕ್ರಿಕೆಟ್‌ನಲ್ಲಿ ಮುಂಬಯಿ ತೊರೆದು ಗೋವಾ ತಂಡವನ್ನು ಪ್ರತಿನಿಧಿಸುವುದು ಖಾತ್ರಿಯಾಗಿದೆ. ಅವರು ಈಗಾಗಲೇ ಗೋವಾ ಪರ ಅಭ್ಯಾಸ ಆರಂಭಿಸಿದ್ದು, ದೇಶಿ ಕ್ರಿಕೆಟ್‌ ಪಂದ್ಯಾವಳಿಗೆ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

Advertisement

ಅಭ್ಯಾಸದ ವೀಡಿಯೋ ಒಂದನ್ನು ಅರ್ಜುನ್‌ ತೆಂಡುಲ್ಕರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ಗೋವಾ ಕ್ರಿಕೆಟ್‌ ಮಂಡಳಿಯ ಟ್ರೇನಿಂಗ್‌ ಕ್ಯಾಂಪ್‌ನಲ್ಲಿ ನಡೆಸುತ್ತಿರುವ ಅಭ್ಯಾಸದ ದೃಶ್ಯಾವಳಿಯಾಗಿದೆ.

2022-23ರ ಸೀಸನ್‌ನಲ್ಲಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಜೂನಿಯರ್‌ ತೆಂಡುಲ್ಕರ್‌ ಅವರ ಯೋಜನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next