Advertisement

ಗೋವಾ ಪರ ಆಡಲಿದ್ದಾರೆ ಅರ್ಜುನ್‌ ತೆಂಡುಲ್ಕರ್‌

08:45 PM Aug 11, 2022 | Team Udayavani |

ಮುಂಬೈ: ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮುಂಬೈಯನ್ನು ತೊರೆದು ಗೋವಾ ಪರ ದೇಶಿ ಕ್ರಿಕೆಟ್‌ ಆಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಮುಂಬೈ ಕ್ರಿಕೆಟ್‌ ಮಂಡಳಿಯ ನಿರಾಕ್ಷೇಪಣಾಪತ್ರದ ನಿರೀಕ್ಷೆಯಲ್ಲಿದ್ದಾರೆ.

Advertisement

22 ವರ್ಷದ ಅರ್ಜುನ್‌ ತೆಂಡುಲ್ಕರ್‌ ಎಡಗೈ ಪೇಸ್‌ ಬೌಲರ್‌ ಆಗಿದ್ದು, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದರು. ಆದರೆ ಕಳೆದ ಋತುವಿನಲ್ಲಿ ಅವರಿಗೆ ಆಡುವ ಅವಕಾಶವೇ ಸಿಕ್ಕಿರಲಿಲ್ಲ. ಅವರಿನ್ನೂ ರಣಜಿ ಪಂದ್ಯವಾಡಿಲ್ಲ.

ಆದರೆ ಮುಂಬೈ ಪರ 2020-21ರಲ್ಲಿ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಎರಡು ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. 19 ವಯೋಮಿತಿ ತಂಡದ ಪರ ಶ್ರೀಲಂಕಾ ವಿರುದ್ಧ 2 ಟೆಸ್ಟ್‌ ಪಂದ್ಯಗಳಲ್ಲೂ ಆಡಿದ್ದರು. ಆದರೆ ಪ್ರಸಕ್ತ ಋತುವಿನಲ್ಲಿ ಮುಂಬೈ ತಂಡದಿಂದ ಕೈಬಿಟ್ಟದ್ದು ಅರ್ಜುನ್‌ಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next