Advertisement
ಮೈಸೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸದಸ್ಯರು ರಾಜ್ಯದಲ್ಲಿ ಬೇರೆ ಕಡೆಗಳಲ್ಲಿ ಬಡವರ ಆಸ್ಪತ್ರೆ ಬಿಲ್ ಪಾವತಿಸುವ ರಾಜ್ಯ ಸರ್ಕಾರ ಮೈಸೂರಿನಲ್ಲಿ ಮಾತ್ರ ಬಡವರ ಆಸ್ಪತ್ರೆ ವೆಚ್ಚ ಭರಿಸುತ್ತಿಲ್ಲ. ಮೈಸೂರಿನ ಬಡವರು ಏನು ಪಾಪ ಮಾಡಿದ್ದಾರೆ. ಇಂತಹ ಪರಿಸ್ಥಿತಿಗೆ ಬಿಜೆಪಿ ನೇತೃತ್ವದ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
Related Articles
Advertisement
ಹಾಗಾಗಿ ನಂತರ ಊಟದ ವಿರಾಮಕ್ಕೆ ಸಭೆ ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನದ ಬಳಿಕವೂ ಇದೇ ವಿಚಾರ ಪ್ರಸ್ತಾಪಿಸಲಾಯಿತು. ಹೀಗಾಗಿ ಅಭಿವೃದ್ಧಿ ಕುರಿತು ಚರ್ಚಿಸಬೇಕಾದ ವಿಚಾರಗಳ ಪ್ರಸ್ತಾಪವೇ ಆಗಲಿಲ್ಲ.
ಅನುದಾನ ನೀಡಲು ಮನವಿ: ಇದಕ್ಕೂ ಮುನ್ನ ನಡೆದ ಸಾಮಾನ್ಯ ವಿಷಯಗಳ ಕುರಿತ ಚರ್ಚೆಯಲ್ಲಿ ಕಳೆದ ಬಾರಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯವಾಗಿರುವಂತೆ ಪ್ರತಿ ವಾರ್ಡ್‌ಗಳ ಅಭಿವೃದ್ಧಿಗಾಗಿ 50 ಲಕ್ಷ ರೂ. ಬಿಡುಗಡೆ ಮಾಡುವಂತೆ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಮನವಿ ಮಾಡಿದರು. ಆಯುಕ್ತ ಗುರುದತ್ತ ಹೆಗ್ಡೆ ಪ್ರತಿಕ್ರಿಯಿಸಿ, ಪ್ರತಿ ವಾರ್ಡ್‌ಗೂ 50 ಲಕ್ಷ ರೂ. ನೀಡುವುದಾದರೆ ಒಟ್ಟು 32.50 ಕೋಟಿ ರೂ. ಬೇಕಾಗುತ್ತದೆ. ಸದ್ಯ ಪಾಲಿಕೆ ಆರ್ಥಿಕ ದುಸ್ಥಿತಿ ಎದುರಿಸುತ್ತಿದೆ. ಹಾಗಾಗಿ ಹಣ ಬಿಡುಗಡೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಮೇಯರ್ ತಸ್ನೀಂ, ಉಪ ಮೇಯರ್ ಶ್ರೀಧರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಇದ್ದರು.
ಸಭೆ ಮುಂದೂಡಿದರೂ ಮತ್ತೆ ಗದ್ದಲ ಮುಂದುವರಿಕೆ : ಆರೀಫ್ ಅವರು”ಕೆಟ್ಟ ಸರ್ಕಾರ’ಎಂಬ ಪದ ಬಳಸಿದ್ದರಿಂದ ತೀವ್ರ ಅಸಮಾಧಾನಗೊಂಡ ಬಿಜೆಪಿ ಸದಸ್ಯರು, ಸಭಾಂಗಣದ ಮುಂಭಾಗಕ್ಕೆ ಆಗಮಿಸಿ ಪ್ರತಿಭಟಿಸಿದರು. ಸರ್ಕಾರದ ವಿರುದ್ಧದ ಹೇಳಿಕೆ ವಾಪಸ್ ತೆಗೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಜೆಡಿಎಸ್, ಕಾಂಗ್ರೆಸ್ ಸದಸ್ಯರು ಆರಿಫ್ ಹುಸೇನ್ ಅವರ ಆರೋಪಕ್ಕೆ ದನಿಗೂಡಿಸಿದರು. ಕೋವಿಡ್ ವಿಚಾರದಲ್ಲಿ ಮೈಸೂರಿನಲ್ಲಿ ನಿರ್ಲಕ್ಷ್ಯ ಕಂಡು ಬಂದಿದೆ. ಬಡವರಿಗೆ ಚಿಕಿತ್ಸೆ ದೊರೆಯುತ್ತಿಲ್ಲ. ನಿತ್ಯವೂ ಜನ ಸಾಯುತ್ತಿದ್ದಾರೆ. ಹಾಗಾಗಿ ಆರಿಫ್ ಹುಸೇನ್ ಅವರ ಆರೋಪ ಸರಿ ಇದೆ. ಅದಕ್ಕೆಕ್ಷಮೆ ಕೇಳುವ ಅಗತ್ಯವಿಲ್ಲ ಎಂದರು. ಗದ್ದಲ ತಿಳಿಗೊಳಿಸಲು ಮೇಯರ್10 ನಿಮಿಷ ಸಭೆ ಮುಂದೂಡಿದರು. ಆದರೂ, ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿಲ್ಲ.