Advertisement

ಆಸೀಸ್ ವಿರುದ್ಧ ಗೆದ್ದಅರ್ಜೆಂಟೀನಾ: ಕ್ವಾರ್ಟರ್ ಫೈನಲ್ ಗೆ ಮೆಸ್ಸಿ ಪಡೆ

08:46 AM Dec 04, 2022 | Team Udayavani |

ದೋಹಾ: ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಕತಾರ್ ಫುಟ್ಬಾಲ್ ವಿಶ್ವಕಪ್ 2022ರ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅರ್ಜೆಂಟೀನಾ 2-1 ಅಂತರದ ಗೆಲುವು ಸಾಧಿಸಿತು.

Advertisement

ಅಹಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ ಪರ ನಾಯಕ ಲಿಯೋನೆಲ್ ಮೆಸ್ಸಿ 35ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲಿ, ಆಸ್ಟ್ರೇಲಿಯಾದ ಗೋಲ್‌ಕೀಪರ್ ಮ್ಯಾಥ್ಯೂ ರಿಯಾನ್ ಅವರ ತಪ್ಪಿನ ಅವಕಾಶ ಪಡೆದ ಜೂಲಿಯನ್ ಅಲ್ವಾರೆಜ್ ಗೋಲು ಗಳಿಸಿ ಅರ್ಜೆಂಟೀನಾ ತಂಡಕ್ಕೆ 2-0 ಮುನ್ನಡೆಯನ್ನು ಒದಗಿಸಿದರು.

ಇದನ್ನೂ ಓದಿ:ಮಿವಿ ವಾಚ್‌ ಮಾಡೆಲ್‌ ಇ; ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ವಾಚ್‌ ಬಿಡುಗಡೆ

ಆದರೆ 77 ನೇ ನಿಮಿಷದಲ್ಲಿ ಅರ್ಜೆಂಟೀನಾ ಆಟಗಾರ ಎಂಜೊ ಫೆರ್ನಾಡೆಜ್ ಅವರು ಆಸ್ಟ್ರೇಲಿಯಾಗೆ ಒಂದು ಗೋಲು ಹೊಡೆದು ತಪ್ಪು ಮಾಡಿದರು. ಕ್ರೇಗ್ ಗುಡ್ವಿನ್ ಬಾಕ್ಸ್‌ನ ಅಂಚಿನಿಂದ ಹೊಡದ ಚೆಂಡು ಗೋಲು ಪೋಸ್ಟಿಗೆ ಹೋಯಿತು. ಕೊನೆಯಲ್ಲಿ 2-1 ಅಂತರ ಉಳಿಸಿಕೊಂಡ ಅರ್ಜೆಂಟೀನಾ ಪಂದ್ಯ ಗೆದ್ದು, ಕ್ವಾರ್ಟರ್ ಫೈನಲ್ ತಲುಪಿತು.

ಅರ್ಜೆಂಟೀನಾ ತಂಡವು ಕ್ವಾರ್ಟರ್ ಫೈನಲ್ ನಲ್ಲಿ ನೆದರ್ಲ್ಯಾಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಡಿಸೆಂಬರ್ 10ರಂದು ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next