ಕೇರಳ: ಇಡೀ ಭಾರತದ ಬಹುತೇಕ ಕಡೆ ಕ್ರಿಕೆಟ್ ಮನೆಮಾತು. ವಿಚಿತ್ರವೆಂದರೆ ಪ.ಬಂಗಾಳ, ಕೇರಳಗಳಲ್ಲಿ ಮಾತ್ರ ಪರಿಸ್ಥಿತಿ ಉಲ್ಟಾ. ಇಲ್ಲಿ ಫುಟ್‌ಬಾಲ್ ಮನೆಮಾತು! ಕತಾರ್‌ನಲ್ಲಿ ವಿಶ್ವಕಪ್ ಫುಟ್‌ಬಾಲ್ ನಡೆಯುತ್ತಿದ್ದರೂ, ಇಲ್ಲಿ ಅಭಿಮಾನಿಗಳು ಗಲಾಟೆ ಮಾಡಿಕೊಳ್ಳುತ್ತಾರೆ. ತಮ್ಮದೇ ತಂಡಗಳನ್ನಿಟ್ಟುಕೊಂಡು ಪರವಿರೋಧ ಹೊಡೆದಾಡಿಕೊಳ್ಳುತ್ತಾರೆ.
ಇದೀಗ ಕೇರಳದ ಕೊಲ್ಲಂ ಜಿಲ್ಲೆಯ ಸಕ್ತಿಕುಲಂಗರ ಪ್ರದೇಶದಲ್ಲಿ ಹೊಡೆದಾಟವೊಂದು ನಡೆದಿದೆ. ಅದಕ್ಕೆ ನಿರ್ದಿಷ್ಟ ಕಾರಣವೇನೆಂದು ತಿಳಿದುಬಂದಿಲ್ಲ. ಆ ಊರಿನ ಅರ್ಜೆಂಟೀನ-ಬ್ರೆಝಿಲ್ ಅಭಿಮಾನಿಗಳ ನಡುವೆ ದೊಣ್ಣೆಯೇಟುಗಳು ವಿನಿಮಯವಾಗಿವೆ.
ಎರಡೂ ಬಣಗಳ ವ್ಯಕ್ತಿಗಳು ಅರ್ಜೆಂಟೀನ, ಬ್ರೆಝಿಲ್ ಜೆರ್ಸಿಗಳನ್ನು ಹಿಡಿದಿರುವುದು ನೀವು ಕಾಣಬಹುದು! ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.