Advertisement

ಕಣದಲ್ಲಿ “ಸ್ಕ್ಯಾಮ್‌’ಸುಂಟರಗಾಳಿ!

03:45 AM Feb 05, 2017 | Team Udayavani |

ಮೇರs…/ಲಕ್ನೋ :  ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ ಸ್ಕ್ಯಾಮ್‌ (SCAM) ಸುಂಟರಗಾಳಿ ಎದ್ದಿದೆ! ಇಲ್ಲಿ ಬಿಜೆಪಿ ಆರೋಪಿಸಿರುವ ಸ್ಕ್ಯಾಮ್‌ ಬೇರೆ, ಎಸ್ಪಿ ವಿಶ್ಲೇಷಿಸಿದ ಸ್ಕ್ಯಾಮ್‌ ಬೇರೆ! “ಬಿಜೆಪಿ ಸ್ಕ್ಯಾಮ್‌ (SCAM) ವಿರುದ್ಧ ಹೋರಾಡಲಿದೆ. ಇಲ್ಲಿ ಸ್ಕ್ಯಾಮ್‌ ಎನ್ನುವುದು ಹಗರಣದೊಂದಿಗೆ ಭಾಗಿ ಆದ ಸಮಾಜವಾದಿ ಪಾರ್ಟಿ (ಎಸ್‌), ಕಾಂಗ್ರೆಸ್‌ (ಸಿ), ಅಖೀಲೇಶ್‌ ಯಾದವ್‌ (ಎ), ಮಾಯಾವತಿ (ಎಂ)’!- ಇದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿರುವ ಸ್ಕ್ಯಾಮ್‌. ಇದಕ್ಕೆ ಪ್ರತಿಕ್ರಿಯೆಯಾಗಿ ಅಖೀಲೇಶ್‌ ಹೇಳಿರುವ ಸ್ಕ್ಯಾಮ್‌, “ಸೇವ್‌ ದಿ ಕಂಟ್ರಿ ಫ‌ಮ್‌ ಅಮಿತ್‌ ಆ್ಯಂಡ್‌ ಮೋದಿ’!

Advertisement

ಎಸ್ಪಿ ಮತ್ತು ಅಖೀಲೇಶ್‌ ಯಾದವ್‌ರನ್ನು ಒಡೆದು ನೋಡುವ ಪ್ರಯತ್ನ ಮಾಡಿರುವ ಮೋದಿ, ತಮ್ಮ ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ಹಗರಣಗಳ ಮಾಲೆಯನ್ನು ಬಿಚ್ಚಿಟ್ಟರು. 

ಉ.ಪ್ರ.ದಲ್ಲಿನ ಗೂಂಡಾ ದೌರ್ಜನ್ಯ, ಪೊಲೀಸ್‌ ಇಲಾಖೆಯ ವೈಫ‌ಲ್ಯಗಳನ್ನು ಖಂಡಿಸಿದ್ದಲ್ಲದೆ, “ಉತ್ತರ ಪ್ರದೇಶಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲೂ ಸಿದ್ಧ. ಏಕೆಂದರೆ, ಈ ರಾಜ್ಯವೇ ನನ್ನನ್ನು ಪ್ರಧಾನಮಂತ್ರಿ ಮಾಡಿದ್ದು’ ಎಂದು ವಾರಾಣಸಿಯ ಗೆಲುವನ್ನು ಸ್ಮರಿಸಿದರು.

ಹಗರಣವೇನು?: “ಅಖೀಲೇಶ್‌ ಸರ್ಕಾರ ಬಡವರ ಆರೋಗ್ಯ ಕಲ್ಯಾಣಕ್ಕೆ 4 ಸಾವಿರ ಕೋಟಿ ರೂಪಾಯಿ ತೆರೆದಿಟ್ಟಿತ್ತು. ಆದರೆ, ಅದರಲ್ಲಿ 250 ಕೋಟಿಯನ್ನೂ ಖರ್ಚು ಮಾಡಲಿಲ್ಲ. ಮತ್ತೆ ಅದೇ ಮೊತ್ತವನ್ನು 7 ಸಾವಿರ ಕೋಟಿ ರೂಪಾಯಿಗೆ ಏರಿಸಿತು. ಅದರಲ್ಲೂ 280 ಕೋಟಿ ರೂ.ವರೆಗೂ ಅವರು ಚಿಕಿತ್ಸೆ ನೀಡಲಿಲ್ಲ. ಉಳಿದ ಹಣ ಎಲ್ಲಿಗೆ ಹೋಯಿತೆಂದು ಜನರಿಗೂ ಗೊತ್ತಾಗಲಿಲ್ಲ’ ಎಂದು ಆರೋಪಿಸಿದರು.

ಸಿಪಾಯಿ ದಂಗೆ ಉಲ್ಲೇಖ:  “1857ರಲ್ಲಿ ಇದೇ ಮೇರs…ನಲ್ಲಿ ಮೊದಲ ಸ್ವಾತಂತ್ರÂ ಸಂಗ್ರಾಮ ನಡೆಯಿತು. ಆಗ ಇಲ್ಲಿನ ಜನ ಬ್ರಿಟಿಷರ ವಿರುದ್ಧ ಹೋರಾಡಿದರು. ಈಗ ಬಡತನದ ವಿರುದ್ಧ ಹೋರಾಡುತ್ತಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಯುವಕರಿದ್ದರೂ ಯಾಕೆ ಈ ರಾಜ್ಯದಲ್ಲಿ ನಿರುದ್ಯೋಗವಿದೆ?’ ಎಂದು   ಅಖೀಲೇಶ್‌ ಸರ್ಕಾರದ ವೈಫ‌ಲ್ಯವನ್ನು ತೆರೆದಿಟ್ಟರು.

Advertisement

“ಉತ್ತರ ಪ್ರದೇಶದ ಆರು 6 ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬು ಬೆಳೆಯ ಹಣವನ್ನೇ ಕೊಟ್ಟಿಲ್ಲ. ಕಾರ್ಖಾನೆಯ ಮಾಲೀಕರ ವಿರುದ್ಧವೇಕೆ ಯುಪಿ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ? ಜನ ಬಿಜೆಪಿಯನ್ನು ಬೆಂಬಲಿಸಿದರೆ ಕೇವಲ 14 ದಿನಗಳಲ್ಲಿ ಮಾಲೀಕರಿಂದ ರೈತರಿಗೆ ಹಣ ಪಾವತಿಸುವಂತೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಅಖೀಲೇಶ್‌ ತಿರುಗೇಟು
ಮೋದಿ ಅವರ ಆರೋಪಗಳಿಗೆ ಪ್ರತ್ಯುತ್ತರ ನೀಡಿದ ಅಖೀಲೇಶ್‌, “ನನಗೆ ಉತ್ತರ ಪ್ರದೇಶ ಬಿಟ್ಟರೆ ಬೇರೆ ಅಧಿಕಾರದತ್ತ ಗಮನವಿಲ್ಲ. ಪ್ರಧಾನಿ ಆಗುವ ಬಯಕೆಯೂ ನನಗಿಲ್ಲ. ದೆಹಲಿಯಿಂದ ದೂರವಿದ್ದಷ್ಟು ನಾನು ಖುಷಿಯಲ್ಲಿರುತ್ತೇನೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಸೋಲು ತ್ತೇನೆಂಬ ಭಯದಿಂದ ಮೋದಿ ವಾರಾಣಸಿಯ ಕಣದಲ್ಲಿ ಸ್ಪರ್ಧಿಸಿದ್ದರು. ಮೊದಲು ಈ ದೇಶದ ಜನ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಎಂಬ ಅಪಾಯಕಾರಿ ಮುಖಗಳಿಂದ ಪಾರಾಗಬೇಕು’ ಎಂದು ಕರೆಕೊಟ್ಟರು.

ಮತ್ತೂಮ್ಮೆ ರಮೇಶ್‌ ಜಾರಕಿಹೊಳಿ ಪ್ರಸ್ತಾಪ
ಈ ಹಿಂದೆ ಉ.ಪ್ರ. ಚುನಾವಣಾ ಭಾಷಣದಲ್ಲಿ ರಮೇಶ್‌ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದ 150 ಕೋಟಿ ರೂಪಾಯಿ ಬಗ್ಗೆ ಮೋದಿ ಪ್ರಸ್ತಾಪಿಸಿದ್ದರು. ಪುನಃ ಮೇರs…ನಲ್ಲೂ, “ಅಪನಗದೀಕರಣವನ್ನು ವಿರೋಧಿಸಿದ್ದ ಕಾಂಗ್ರೆಸ್‌ಗೆ ನಾನೊಂದು ಪ್ರಶ್ನೆ ಕೇಳುತ್ತೇನೆ, ನಿಮ್ಮದೇ ಕರ್ನಾಟಕ ಸರ್ಕಾರದ ಒಬ್ಬ ಸಚಿವರ ಮನೆಯಲ್ಲಿ 150 ಕೋಟಿ ರೂಪಾಯಿ ಪತ್ತೆಯಾಗಿದೆ. ಯಾಕೆ ನೀವು ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಿಲ್ಲ?’ ಎಂದು ಕೇಳಿದ್ದಾರೆ. 
 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next