Advertisement

ಪೆರ್ನೆ ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣ : ದರೋಡೆಕೋರರ ಬಗ್ಗೆ ಮಹತ್ವದ ಮಾಹಿತಿ ಲಭ್ಯ!

06:07 PM Nov 08, 2020 | sudhir |

ಉಪ್ಪಿನಂಗಡಿ: ಕಳೆದ ಅಕ್ಟೋಬರ್‌ 27 ರಂದು ನಡೆದ ಪೆರ್ನೆಯ ಅಡಿಕೆ ವ್ಯಾಪಾರಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು, ಯಾವುದೇ ಸಂಧರ್ಭದಲ್ಲೂ ದರೋಡೆಕೋರರ ಬಂಧನದ ಸಾಧ್ಯತೆಯ ವಿಶ್ವಾಸ ಮೂಡಿಸಿದೆ.

Advertisement

ಪೆರ್ನೆಯಲ್ಲಿ ಅಡಿಕೆ ಖರೀದಿ ವ್ಯಾಪಾರ ನಡೆಸುತ್ತಿದ್ದ ಪದೆಬರಿ ನಿವಾಸಿ ದೀಪಕ್‌ ಜಿ. ಶೆಟ್ಟಿಯವರು ಅಕ್ಟೋಬರ್ 27ರ ಮಂಗಳವಾರ ರಾತ್ರಿ 6:30ರ ಸುಮಾರಿಗೆ ಅಂಗಡಿ ಬಂದ್‌ ಮಾಡಿ ಅಡಿಕೆ ಮಾರಾಟ ಮಾಡಿದ 3.50 ಲಕ್ಷ ರೂಪಾಯಿ ಹಣದೊಂದಿಗೆ ತನ್ನ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಇವರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ದರೋಡೆಕೋರರು ದೀಪಕ್‌ ಶೆಟ್ಟಿಯವರ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ತಿವಿದು, ಅವರ ಕೈಯಲ್ಲಿದ್ದ ಹಣದ ಬ್ಯಾಗ್‌, ಒಂದೂವರೆ ಪವನ್‌ನ ಒಂದು ಚಿನ್ನದ ಸರ ಹಾಗೂ ಇವರಲ್ಲಿದ್ದ ಲಾವಾ ಕಂಪೆನಿಯ ಮೊಬೈಲ್‌ ಸೆಟ್‌ ಅನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ:ಭೀಮಾ ತೀರದ ಭೈರಗೊಂಡ ಮೇಲಿನ ದಾಳಿ ಪ್ರಕರಣ :ಪೊಲೀಸರಿಂದ ಮತ್ತೆ ನಾಲ್ವರ ಬಂಧನ

ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸ್‌ ಅಧಿಕಾರಿಗಳು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಮುಂದಾದರಾದರೂ ಘಟನೆ ಸಂಭವಿಸಿ 10 ದಿನಗಳು ಕಳೆದರೂ ದರೋಡೆಕೋರರ ಬಂಧನವಾಗದಿರುವುದು ವರ್ತಕ ಸಮೂಹದಲ್ಲಿ ಕಳವಳ ಮೂಡಿಸಿತ್ತು. ಈ ಬಗ್ಗೆ ಪೊಲೀಸ್‌ ತನಿಖೆ ಚುರುಕುಗೊಳಿಸಬೇಕೆಂದೂ ಉಪ್ಪಿನಂಗಡಿ ವರ್ತಕ ಸಂಘವು ಪೊಲೀಸ್‌ ಇಲಾಖೆಯನ್ನು ಅಗ್ರಹಿಸಿತ್ತು.

ಈ ಎಲ್ಲಾ ಬೆಳವಣಿಗೆಗಳ ನಡುವೆ ದರೋಡೆಕೋರರ ಸುಳಿವಿಗಾಗಿ ಶೋಧ ನಡೆಸಿದ ಪೊಲೀಸರಿಗೆ ಮಹತ್ವದ ಮಾಹಿತಿ ದೊರಕಿದ್ದು ಸದ್ಯದಲ್ಲೇ ಆರೋಪಿಗಳು ಪೋಲೀಸರ ಬಲೆಗೆ ಬೀಳಲಿದ್ದಾರೆ ಎನ್ನಲಾಗಿದೆ.

Advertisement

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್‌ ಉಪ್ಪಳಿಕೆ, ಪೊ›ಬೆಷನರಿ ಐಪಿಎಸ್‌ ರೋಹನ್‌ ಜಗದೀಶ್‌, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಈರಯ್ಯ ದಂತೂರು ಅವರ ನೇತೃತ್ವದಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರ ಪತ್ತೆದಾರಿ ತಂಡ ಅಹೋರಾತ್ರಿ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next