Advertisement

ಅಡಕೆ ಬೆಳೆಗಾರರಿಗಿಲ್ಲ ಬೆಲೆ ಏರಿಕೆ ಲಾಭ

02:26 PM Sep 08, 2021 | Team Udayavani |

„ಎಚ್‌.ಕೆ. ನಟರಾಜ

Advertisement

ದಾವಣಗೆರೆ : ಅಡಕೆ ದರ ದಿನದಿಂದ ದಿನಕ್ಕೆ ಗಗನಮುಖೀಯಾಗುತ್ತಿರುವುದು ಬಯಲುಸೀಮೆಯ ಅಡಕೆ ಬೆಳೆಗಾರರಲ್ಲಿಖುಷಿಮೂಡಿಸಿದೆಯಾದರೂಮಾರಾಟ ಮಾಡಲು ರೈತರ ಬಳಿ ಸಾಕಷ್ಟು ಅಡಕೆಯೇ ಇಲ್ಲ. ಹೀಗಾಗಿ ಗಗನಮುಖೀ ದರ ಬಹುತೇಕ ರೈತರ ಪಾಲಿಗೆ ದೊರಕದಂತಾಗಿದೆ.

ಜಿಲ್ಲೆಯ 50,000 ಎಕರೆ ಇಳುವರಿ ಪ್ರದೇಶ ಸೇರಿದಂತೆ ಒಟ್ಟು 75,000 ಎಕರೆ ಅಡಕೆ ಬೆಳೆಯುವ ಪ್ರದೇಶವಿದೆ. ಪ್ರಸ್ತುತ ಹಂಗಾಮು ಇಲ್ಲದ ಸಮಯ ಇದಾಗಿದ್ದು, ಹಳೆ ಅಡಕೆ ದಾಸ್ತಾನು ಎಲ್ಲ ರೈತರ ಬಳಿ ಇಲ್ಲ. ಕೆಲವೇ ಕೆಲವು ದೊಡ್ಡ ರೈತರ ಬಳಿ ಮಾತ್ರ ಒಂದಿಷ್ಟು ಹಳೆ ಅಡಕೆಯಿದ್ದು ಈ ಸಮಯದಲ್ಲಿ ಹಳೆ ರಾಶಿ ಅಡಕೆ ಕ್ವಿಂಟಲ್‌ಗೆ ಗರಿಷ್ಠ 60,500 ರೂ.ಗೆ ಮಾರಾಟವಾಗಿದೆ. ಹೊಸ ಅಡಕೆ ದೊಡ್ಡ ಪ್ರಮಾಣದಲ್ಲಿ ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ. ಮಾರುಕಟ್ಟೆಗೆ ಒಂದಿಷ್ಟು ಹೊಸ ಅಡಕೆ ಬಂದಿದೆಯಾದರೂ ಅದರ ಪ್ರಮಾಣ ತೀರಾ ನಗಣ್ಯ. ಬಂದಿರುವ ಒಂದಿಷ್ಟು ಹೊಸ ಅಡಕೆ ಕ್ವಿಂಟಲ್‌ಗೆ ಗರಿಷ್ಠ 59 ಸಾವಿರ ರೂ. ವರೆಗೂ ಮಾರಾಟವಾಗಿದೆ.

ಜಿಲ್ಲೆಯ ಬಹುತೇಕ ರೈತರು ಬೆಳೆದ ಅಡಕೆ ಇನ್ನೂ ತೋಟದಲ್ಲಿಯೇ ಇದೆ. ಮಳೆ-ತಂಪು ವಾತಾವರಣ ಮುಂದುವರೆದಿರುವುದರಿಂದ ಅಡಕೆ ಮಾರುಕಟ್ಟೆಗೆ ಬರಲು ಇನ್ನೂ ಒಂದರಿಂದ ಒಂದೂವರೆ ತಿಂಗಳಾದರೂ ಬೇಕು. ಇನ್ನು ಹೆಚ್ಚಿನ ದರದ ಆಸೆಗೆ ಬಿದ್ದು ಹಸಿ ಬಿಸಿ ಕಟಾವು ಮಾಡಿ ಮಾರುಕಟ್ಟೆಗೆ ತಂದರೆ ಗುಣಮಟ್ಟ ಇಲ್ಲದ ಕಾರಣಕ್ಕೆ ತಿರಸ್ಕಾರಗೊಳ್ಳುವ ಭಯವೂ ರೈತರನ್ನು ಕಾಡುತ್ತಿದೆ. ಅಡಕೆ ಇಲ್ಲದ ಸಮಯದಲ್ಲಿ ಹೆಚ್ಚಾಗಿರುವ ಈ ದರ ಮುಂದೆ ಮಾರುಕಟ್ಟೆಗೆ ಅಡಕೆ ಬಂದಾಗ ಇನ್ನಷ್ಟು ಏರಿಕೆಯಾಗುತ್ತದೆಯೋ ಇಳಿಕೆಯಾಗುತ್ತದೆಯೋ ಎಂಬ ಆತಂಕ ಬೆಳೆಗಾರರಲ್ಲಿ ಸೃಷ್ಟಿಯಾಗಿದೆ.

ದರ ಏರಿಕೆ ಹಾದಿ: ಕೆಲ ವರ್ಷಗಳ ಕಾಲ ಅಡಕೆ ದರದಲ್ಲಿ ಸ್ಥಿರತೆ ಕಾಯ್ದುಕೊಂಡು ಬರಲಾಗಿತ್ತು. ಕಳೆ‌ದ ಎರಡೂವರೆ ತಿಂಗಳಿಂದ ಅಡಕೆ ದರ ಏರಿಕೆಯತ್ತ ಸಾಗಿದೆ. 35 ರಿಂದ 38 ಸಾವಿರ ಗಡಿಯಲ್ಲಿದ್ದ ಅಡಕೆ ದರ ಒಮ್ಮೆಲೆ 43,000 ರೂ., 45,000 ರೂ., 47,000 ರೂ., 49,000 ರೂ., 51,000 ರೂ., 56,000 ರೂ., 57,000ರೂ., 59,000 ರೂ. ಹೀಗೆ ಏರುತ್ತ ಸಾಗಿ ಈಗ 60,500 ರೂ. ಆಗಿದೆ. ಈ ದರ ದಾಖಲೆಯ ದರವಂತೂ ಅಲ್ಲ. ಏಕೆಂದರೆ 2013ರಲ್ಲಿ ಅಡಕೆ ದರ ಕ್ವಿಂಟಲ್‌ಗೆ 80,000 ರೂ.ಗೆ ಏರಿತ್ತು. ಆದರೆ ಈ ರೀತಿಯ ದಿಢೀರ್‌ ದರ ಏರಿಕೆ ಹೆಚ್ಚು ರೈತರಿಗೆ ಲಾಭ ತಂದುಕೊಡುವುದಿಲ್ಲ. ಈ ರೀತಿಯ ಏರಿಕೆ ಒಮ್ಮೆಲೆ ಇಳಿಕೆಗೂ ಕಾರಣವಾಗಬಹುದು. ಆಗ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಅಡಕೆ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು ಎಂಬುದು ಅನುಭವಿ ರೈತರ ಅಭಿಪ್ರಾಯ.

Advertisement

ದರ ಏರಿಕೆ ತಾತ್ಕಾಲಿಕ: ಈಗ ಏರಿಕೆ ಕಂಡಿರುವ ಅಡಕೆ ದರ ತಾತ್ಕಾಲಿಕ ಹಾಗೂ ಕೃತಕ ಎಂಬುದು ಹಲವು ಮಾರುಕಟ್ಟೆ ಪರಿಣತ ರೈತರ ಅಭಿಪ್ರಾಯವಾಗಿದೆ. ಮಾರುಕಟ್ಟೆಯಲ್ಲಿ ಇಳುವರಿ ಕೊರತೆ ಇದ್ದಾಗ ಹಾಗೂ ಭಾರೀ ಬೇಡಿಕೆಯಿದ್ದಾಗ ದರ ಏರಿಕೆ ಸಾಮಾನ್ಯ. ಆದರೆ ಪ್ರಸ್ತುತ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಟ್ರೇಡಸ್‌ ìಗಳಿಂದ ದೊಡ್ಡ ಪ್ರಮಾಣದ ಬೇಡಿಕೆಯೇ ಇಲ್ಲ. ಹೀಗಿದ್ದಾಗ್ಯೂ ದರ ಏರಿಕೆ ಕಂಡಿದೆ ಎಂದರೆ ಇದರ ಹಿಂದೆ ಬೇರೆನೋ ಷಡ್ಯಂತ್ರ ಇರಬಹುದು. ಖರೀದಿದಾರರು ತಮ್ಮಲ್ಲಿ ದಾಸ್ತಾನು ಇರುವ ಅಡಕೆಗೆ ಹೆಚ್ಚಿನ ದರ ಪಡೆಯುವ ಹುನ್ನಾರ ಅಡಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಮಾರುಕಟ್ಟೆಯ ನಾಡಿಮಿಡಿತ ಬಲ್ಲ ಪರಿಣತರು.

ಗೇಣಿ ಕೊಟ್ಟವರಲ್ಲಿ ತಳಮಳ: ಬಯಲುಸೀಮೆ ಭಾಗದಲ್ಲಿ ಹೆಚ್ಚಿನ ರೈತರು ತಮ್ಮ ಅಡಕೆ ತೋಟವನ್ನು ಗೇಣಿ, ಗುತ್ತಿಗೆಗೆ ಕೊಡುತ್ತಾರೆ. ಗೇಣಿ ಅಥವಾ ಗುತ್ತಿಗೆ ಕೊಡುವಾಗ ಅಡಕೆ ದರ35 ಸಾವಿರ ರೂ.ಗಳ ಆಸುಪಾಸು ಇತ್ತು.ಈಗದರಹೆಚ್ಚಾಗಿದ್ದರಿಂದ ತೋಟದ ಮಾಲೀಕರು ಗೇಣಿ, ಗುತ್ತಿಗೆ ಪಡೆದವರಿಂದ ಹೆಚ್ಚಿನ ಹಣ ನಿರೀಕ್ಷಿಸುತ್ತಿದ್ದಾರೆ. ಇತ್ತ ಗೇಣಿ, ಗುತ್ತಿಗೆ ಪಡೆದವರು ದರ ಇಳಿಕೆಯಾಗಿದ್ದರೆ ತೋಟದ ಮಾಲೀಕರು ತಮಗಾಗುವ ನಷ್ಟ ಭರಿಸುತ್ತಿದ್ದರೇ ಎಂದು ವಾದಕ್ಕಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next