Advertisement
ಸಾಲ ನೀಡಿಕೆಯ ಮೇಲಿನ ಸರಾಸರಿ ಬಡ್ಡಿ ಮತ್ತು ಠೇವಣಿ ಮೇಲಿನ ಸರಾಸರಿ ಬಡ್ಡಿಯ ನಡುವಿನ ವ್ಯತ್ಯಾಸವನ್ನು ಬ್ಯಾಂಕಿನ ಪರಿಭಾಷೆಯಲ್ಲಿ ನೆಟ್ ಮಾರ್ಜಿನ್ ಎನ್ನುತ್ತಾರೆ. ಇದು ಹೆಚ್ಚಾದರೆ ಬ್ಯಾಂಕಿನ ಲಾಭ ಹೆಚ್ಚಾಗುತ್ತದೆ. ಕಡಿಮೆಯಾದರೆ ಲಾಭದ ಮೇಲೆ ಒತ್ತಡ ಬೀಳುತ್ತದೆ. ಬ್ಯಾಂಕಿನ ನಿರ್ವಹಣಾ ವೆಚ್ಚವನ್ನು ಬ್ಯಾಂಕುಗಳು ಈ ಮಾರ್ಜಿನ್ ನಿಂದಲೇ ಸರಿದೂಗಿಸುವುದು. ಬ್ಯಾಂಕುಗಳ ನಿರ್ವಹಣೆಗೆ ಸರ್ಕಾರದಿಂದ ಯಾವುದೇ ಅನುದಾನ ದೊರಕುವುದಿಲ್ಲ. ರಿಸರ್ವ್ ಬ್ಯಾಂಕ್ ಲೆಕ್ಕಾಚಾರದ ಪ್ರಕಾರ ಕನಿಷ್ಠ ಶೇ. 3ರಷ್ಟು ಮಾರ್ಜಿನ್ ಅನಿವಾರ್ಯ. ಠೇವಣಿಗಾಗಲೀ ಅಥವಾ ಸಾಲಕ್ಕಾಗಲೀ ಬ್ಯಾಂಕುಗಳು ತಮ್ಮ ಬಡ್ಡಿದರವನ್ನು ನಿಗದಿ ಮಾಡುವಾಗ ಈ ಅಂಶವನ್ನು ಸದಾ ಗಮನದಲ್ಲಿ ಇಟ್ಟುಕೊಳ್ಳುತ್ತವೆ.
ಬ್ಯಾಂಕ್ ಬಡ್ಡಿದರದ ಏರಿಳಿತದ ಲಾಭ ಗ್ರಾಹಕರಿಗೆ ದೊರಕುವಂತೆ, ಬದಲಾಗುವ ಬಡ್ಡಿದರ(floating rate of interest) ಚಾಲ್ತಿಯಲ್ಲಿ ಬಂದಿದೆ. ಇದರ ಪ್ರಕಾರ ಬ್ಯಾಂಕಿನ ಮೂಲ ದರ ( base rate) ಬದಲಾದಂತೆ, ಸಾಲದ ಮೇಲಿನ ಬಡ್ಡಿದರವೂ ಏರಿಳಿತ ಕಾಣುತ್ತದೆ. ಠೇವಣಿ ಮೇಲಿನ ಬಡ್ಡಿದರವೂ ಸಾಲದ ಮೇಲಿನ ಬಡ್ಡಿದರದಂತೆ ಮುಖ್ಯವಾಗಿ ಬೇಡಿಕೆ ಮತ್ತು ಪೂರೈಕೆ ಮೇಲೆ ಅವಲಂಭಿತವಾಗಿರುತ್ತದೆ. ಹಾಗೆಯೇ ಇದು ಬ್ಯಾಂಕ್ ತಡೆದುಕೊಳ್ಳಬಹುದಾದ cost of funds ಮೇಲೂ ಇರುತ್ತದೆ. ಸಾಲದ ಬೇಡಿಕೆ ಹೆಚ್ಚಾದಾಗ, loanable funds ಬೇಕಾದಾಗ, ಬ್ಯಾಂಕುಗಳು ಠೇವಣಿ ಮೇಲಿನ ಬಡ್ಡಿ ದರ ಏರಿಸಿ funds mobilise ಮಾಡುತ್ತವೆ. ಸಾಲದ ಬೇಡಿಕೆ ಕಡಿಮೆಯಾದಾಗ, ಬ್ಯಾಂಕುಗಳಿಗೆ ಹೆಚ್ಚಿನ funds ಅವಶ್ಯಕತೆ ಇರುವುದಿಲ್ಲ. ಅಂತೆಯೇ ಬ್ಯಾಂಕುಗಳು ಠೇವಣಿ ಮೇಲಿನ ಬಡ್ಡಿದರವನ್ನು ಕೊಂಚ ತಗ್ಗಿಸುತ್ತವೆ. ಸ್ಪರ್ದಾತ್ಮಕ ದರದ ಮೂಲಕ, ಹೆಚ್ಚು ಠೇವಣಿಯನ್ನು ಆಕರ್ಷಿಸುವದು ಮತ್ತು cost of funds ಅನ್ನು ಲೆಕ್ಕಾಚಾರದೊಳಗೆ ಇಡುವುದು, ಈ ಎರಡು ಅಂಶಗಳು ಬ್ಯಾಂಕಿನಲ್ಲಿ ಠೇವಣಿ ಮೇಲಿನ ಬಡ್ಡಿದರವನ್ನು ನಿರ್ದೇಶಿಸುತ್ತವೆ. ಹೇಗೆಂದರೆ ಹಾಗೇ ನಿಗದಿ ಇಲ್ಲ
ಬ್ಯಾಂಕುಗಳು ಮನಬಂದಂತೆ ಬಡ್ಡಿದರವನ್ನು ನಿಗದಿಗೊಳಿಸುವಂತಿಲ್ಲ. ರಿಸರ್ವ್ ಬ್ಯಾಂಕ್‌ನ ಹದ್ದಿನ ಕಣ್ಣು ಸದಾ ನೋಡುತ್ತಿರುತ್ತದೆ. ಕೆಲವು ಸರ್ಕಾರದ ಯೋಜನೆಗಳ ಹೊರತಾಗಿ ಮೂಲ ದರಕ್ಕಿಂತ ಕಡಿಮೆದರದಲ್ಲಿ ಸಾಲ ಕೊಡುವಂತಿಲ್ಲ. ಹಾಗೆಯೇ ಮಾರುಕಟ್ಟೆ ಆಧರಿತ ದರಕ್ಕಿಂತ ಹೆಚ್ಚು ದರವನ್ನು ಠೇವಣಿಗೆ ಕೊಡುವಂತಿಲ್ಲ. ಇದು ವಾಸ್ತವದಲ್ಲಿ ಒಂದು ರೀತಿಯ ನಿಯಂತ್ರಿತ liberalization ಎನ್ನಬಹುದೇನೋ? ಬಡ್ಡಿದರ ನಿಗದಿ ಬ್ಯಾಂಕುಗಳಿಗೆ ಒಂದು ರೀತಿಯ ರಕ್ಷಣಾತ್ಮಕ ಆಟ. ಠೇವಣಿಯಾಗಲಿ ಅಥವಾ ಸಾಲವಾಗಲಿ, ಅವುಗಳ ಮೇಲೆ ಬಡ್ಡಿದರ ನಿಗದಿ ಮಾಡುವಾಗ ಬ್ಯಾಂಕುಗಳ ಆದ್ಯತೆ ತಮ್ಮ ಹಣಕಾಸು ಸ್ಥಿತಿಗತಿ ನೋಡಿಕೊಳ್ಳುತ್ತವೆ. ಗ್ರಾಹಕರ ಅನುಕೂಲ ಮತ್ತು ಅವರಿಗೆ ದೊರಕುವ ಲಾಭ ನಂತರದ ಆದ್ಯತೆ. ಪ್ರತಿ ಬಾರಿ ರೆಪೋದರ ಇಳಿಸಿದಾಗಲೂ ರಿಸರ್ವ್ ಬ್ಯಾಂಕ್, ಸರ್ಕಾರ, ಗ್ರಾಹಕರು,ವಾಣಿಜ್ಯೋಧ್ಯಮ ಸಂಘಗಳು ಮತ್ತು ಮಾದ್ಯಮಗಳು ಸಾಲದ ಮೇಲಿನ ಬಡ್ಡಿದರವನ್ನು ಇಳಿಸುವಂತೆ ಒತ್ತಾಯ ಮಾಡುತ್ತವೆ. ರಿಸರ್ವ್ ಬ್ಯಾಂಕ್ ಕೂಡಾ ಅದೇ ನಿರೀಕ್ಷೆಯಲ್ಲಿ ರೆಪೋ ದರವನ್ನು ಕಡಿಮೆ ಮಾಡುತ್ತದೆ. ಆದರೆ, ಯಾವ ಬ್ಯಾಂಕೂ ಅಷ್ಟು ಸುಲಭವಾಗಿ ಬಡ್ಡಿದರವನ್ನು ಕಡಿಮೆಮಾಡುವುದಿಲ್ಲ. ಬ್ಯಾಂಕಿನಲ್ಲಿ ಬಡ್ಡಿದರ ನಿಗದಿಮಾಡುವ ಪ್ರಕ್ರಿಯೆ ಸುದೀರ್ಘವಾಗಿದ್ದು,ಹಲವು ಹತ್ತು ಕೋನಗಳಲ್ಲಿ ವಿಶ್ಲೇಷಿಸಿ, ಹಲವು ಹತ್ತು ಅಂಶಗಳನ್ನು ಪರಿಗಣಿಸಿ ಲೆಕ್ಕಹಾಕಬೇಕಾಗುತ್ತದೆ.
Related Articles
Advertisement