Advertisement
ಒಬ್ಬ ಹುಡುಗ ಆಸ್ಪತ್ರೆಗೆ ಸೇರಿರುತ್ತಾನೆ. ತೀವ್ರ ಅನಾರೋಗ್ಯ ಅನ್ನಿಸಿದಾಗ “ನಾನ್ನಿನ್ನು ಉಳಿಯಲ್ಲ, ಸಾಯುವುದು ಖಚಿತ’ ಅಂದುಕೊಂಡಿರುತ್ತಾನೆ. ಹುಡುಗನ ಜ್ವರ 102 ಡಿಗ್ರಿ ಇರುತ್ತದೆ. ಅದನ್ನು ಕೇಳಿದ ಹುಡುಗ ಬದುಕುವ ಆಸೆ ಕೈಚೆಲ್ಲಿ, ಖನ್ನನಾಗಿ, ಸಾಯುವ ದಿನಕ್ಕಾಗಿ ಕಾಯುತ್ತಾನೆ. ಅವನ ಮನಸ್ಸಿನಲ್ಲಿ, 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮೀರಿದರೆ ಸಾವು ನಿಕ್ಕಿ ಅನ್ನುವುದಿರುತ್ತದೆ. ಈಗ 102 ಡಿಗ್ರಿಗೆ ಏರಿದ ಜ್ವರದಿಂದ ಬದುಕುಳಿಯುವುದು ಸಾಧ್ಯವಿಲ್ಲ ಅಂದುಕೊಂಡಿರುತ್ತಾನೆ. ಬಹುಶಃ ಅವನಿಗೆ ತನ್ನ ತಪ್ಪು ತಿಳಿಯದಿದ್ದರೆ ಅದೇ ಯೋಚನೆಯಲ್ಲಿ ಸತ್ತುಹೋಗುತ್ತಿದ್ದ. ಕೊನೆಯಲ್ಲಿ ಅವರ ತಂದೆ ಯಾವುದೋ ಮಾತಿನ ಮಧ್ಯೆ, ನಿನ್ನದು 102 ಫ್ಯಾರನಿ, ಅದು ಸೆಲ್ಸಿಯಸ್ ಅಲ್ಲ ಅನ್ನುತ್ತಾರೆ. ಫ್ಯಾರನಿಟ್ ಮತ್ತು ಸೆಲ್ಸಿಯಸ್ ಬಗ್ಗೆ ತಿಳಿ ಹೇಳುತ್ತಾರೆ. ಹಾಗಾದರೆ ನನಗೆ ಸಾಯುವಷ್ಟು ಜ್ವರ ಇಲ್ಲ ತಾನೇ ಅಂದುಕೊಂಡು ಸಾವಿನ ಭಯವನ್ನು ಮರೆತು, ಆ ಹುಡುಗ ಬದುಕುತ್ತಾನೆ.
Related Articles
Advertisement
ಅದನ್ನು ಸೈಬರ್ ಕಾಂಡ್ರಿಯಾಅಂತಾರೆ!ಇಂದು ಬಹುತೇಕ ಯುವಕರು ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಾಕ್ಷಣ ಅಂತರ್ಜಾಲದ ಮೊರೆ ಹೋಗುತ್ತಾರೆ. ವೈದ್ಯರ ಬಳಿ ಹೋಗುವ ಮೊದಲು, ನನಗೆ ಏನಾಗಿಬರಬಹುದು ಅಂತ ಗೂಗಲ್ ಮಾಡುತ್ತಾರೆ. ಇನ್ನೊಂದಷ್ಟು ಜನ, ವೈದ್ಯರು ಏತಕ್ಕೆ ಮೆಡಿಸನ್ ಕೊಟ್ಟಿದ್ದಾರೆ ಅಂತ ಮಾತ್ರೆಯ ಹೆಸರನ್ನು ಗೂಗಲ್ ಮಾಡಿ ನೋಡುವುದುಂಟು. ಸ್ಕ್ಯಾನಿಂಗ್, ಎಕ್ಸರೇ ವರದಿಗಳು ಬಂದ ನಂತರ ಅದನ್ನು ವೈದ್ಯರಿಗೆ ತೋರಿಸುವ ಮೊದಲು ಗೂಗಲ್ ಮಾಡಿ, ಓಹೋ ಹೀಗೆಲ್ಲಾ ಆಗಿದೆಯಾ ಅಂತೆಲ್ಲ ಚೆಕ್ ಮಾಡುವ ಯುವಕರ ಸಂಖ್ಯೆ ಈಗ ಹೆಚ್ಚಾಗಿದೆ. ಏನಿದು ಕಾಯಿಲೆ ಏನಿದು? ಇದಕ್ಕೆ ಕಾರಣವೇನು? ಏನು ಪರಿಹಾರ? ಅನ್ನುವುದರ ಬಗ್ಗೆ ಹುಡುಕುತ್ತೇವೆ. ಆದರೆ ಅಲ್ಲಿಂದ ಮರಳುವಾಗ ತಲೆಯಲ್ಲಿ ವಿಚಿತ್ರ ಭಯವನ್ನು ಹೊತ್ತುಕೊಂಡು ಬರುತ್ತವೆ. ವೈದ್ಯರನ್ನು ಭೇಟಿಯಾಗಿದ್ದರೆ ಸುಲಭಕ್ಕೆ ವಾಸಿಯಾಗುತ್ತಿದ್ದ ಕಾಯಿಲೆಯ ಲಕ್ಷಣವನ್ನು ಮತ್ತಷ್ಟು ಬಲಗೊಳಿಸಿಕೊಂಡು ಕೊರಗುತ್ತೇವೆ. ನಮ್ಮ ಮನಸ್ಥಿತಿಯ ಮೇಲೆ ಬೀರುವ ಇಂತಹ ಪರಿಣಾಮವನ್ನು ಸೈಬರ್ ಕಾಂಡ್ರಿಯಅಂತಾರೆ. ನಿಮಗೆ ಗೊತ್ತಾ? ಶೇ. 58ರಷ್ಟು ಜನ ಕಳೆದ ವರ್ಷ ತಮ್ಮ ಆರೋಗ್ಯದ ಕಾರಣಕ್ಕೆ ಗೂಗಲ್‌ನಲ್ಲಿ ಹುಡುಕಾಟ ಮಾಡಿದ್ದಾರೆ. ಶೇ. 10ರಷ್ಟು ಜನ ಅನಾವಶ್ಯಕವಾಗಿ ಖಾಯಿಲೆಯ ಭಯವನ್ನು ಮೈಮೇಲೆ ಎಳೆದುಕೊಂಡು ಕೂತಿದ್ದಾರೆ. ಅವೆಲ್ಲವೂ ಮುಂದೆ ಒಂದು ದಿನ ಅಪಾಯಕಾರಿ ಮಟ್ಟಕ್ಕೆ ತಲುಪಿ ವ್ಯಕ್ತಿಯವನ್ನು ಖನ್ನತೆಗೆ ದೂಡಬಹುದು. ಹೈಪೋಕ್ರಾಂಡಿಯಾ
ಡಾಕ್ಟರ್ ಎಂಬುವನು ಸುಮ್ಮನೆ ಆದವನೇ? ಐದಾರು ವರ್ಷಗಳ ಶ್ರಮವಿರುತ್ತದೆ ನಿಮ್ಮನ್ನು ಮುಟ್ಟಿ ನೋಡಿ ಕೆಲವೊಂದು ಪರೀಕ್ಷೆಗಳನ್ನೊಡ್ಡಿ ಖಾಯಿಲೆಯನ್ನು ಗುರುತಿಸುಂಥ ಪ್ರಾವೀಣ್ಯತೆ ಸಂಪಾದಿಸಲು ಕೆಲವಾರು ದಿನಗಳನ್ನಾದ್ರೂತೆಗೆದುಕೊಂಡಿರುತ್ತಾರೆ. ಬರೀ ಒಂದು ಕ್ಷಣದಲ್ಲಿ ನಿಮ್ಮ ಕೆಲವು ರೋಗ ಲಕ್ಷಣಗಳಿಗೆ ಸಾವಿರ ವಿಷಯಗಳನ್ನು ಹರವುವ ಗೂಗಲ್ ಹೇಗೆ ನಿಮಗೆ ಆರೋಗ್ಯದ ದೃಷ್ಟಿಯಲ್ಲಿ ವಿಶ್ವಾನೀಯ ಸಲಹೆಗಾರನಾಗಲು ಸಾಧ್ಯ? ಗೂಗಲ್ ಮಾಡಿದಾಗ ನೂರಾರು ವಿಷಯಗಳು ಬರುತ್ತವೆ. ಅವುಗಳ ವಿಶ್ವಾಸಾರ್ಹತೆಯನ್ನು ನಾವು ಹೇಗೆ ಊಹಿಸಲು ಸಾಧ್ಯ? ಏನೂ ಗೊತ್ತಿಲ್ಲದ ನಮಗೆ ಅದರಿಂದ ಏನು ತಿಳಿದೀತು? ಅಂತರ್ಜಾಲದಲ್ಲಿ ಸಿಗುವ ಎಲ್ಲಾ ವಿಚಾರಗಳನ್ನು ಒಂದು ಮೆಡಿಕಲ್ ಸಂಸ್ಥೆ ಅಥವಾ ಖುದ್ದು ಡಾಕ್ಟರೇ ಬರೆದಿದ್ದು ಅಂತ ಹೇಗೆ ತೀರ್ಮಾನಿಸುತ್ತೀರಿ? ಡಾಕ್ಟರೇ ನಿಮ್ಮ ಭಯವನ್ನು ಇಲ್ಲವಾಗಿಸಿ ಧೈರ್ಯ ತುಂಬಿ ಕಳುಹಿಸುತ್ತಾರೆ. ಗೂಗಲ್ ನಿಮ್ಮ ಧೈರ್ಯವನ್ನು ಕಿತ್ತು ಭಯವನ್ನು ತುಂಬುತ್ತದೆ. ಅದನ್ನು ಹೈಪೋಕಾಂಡ್ರಿಯಾ ಅಂತಾರೆ. ಒಂದು ರೋಗದ ಲಕ್ಷಣ ಮತ್ತೂಂದು ರೋಗ ಲಕ್ಷಣವನ್ನೂ ಹೋಲಬಹುದು. ಆಗ ನಿಮ್ಮಲ್ಲಿ ದ್ವಂದ್ವ ಶುರುವಾಗಿ ಏನೂ ಇಲ್ಲದಿದ್ದರೂ ನಾನು ಯಾವುದೋ ಭೀಕರ ಖಾಯಿಲೆಗೆ ತುತ್ತಾಗಿದೀನಿ ಅಂತ ಅನ್ನಿಸಲು ಆರಂಭಿಸುತ್ತದೆ. ಅಂಥದೊಂದು ಭಯ ಮನಸ್ಸಿಗೆ ಹೊಕ್ಕ ಮೇಲೆ ವೈದ್ಯರ ಸಲಹೆಯೂ ಅಷ್ಟು ಬೇಗ ನಿಮ್ಮನ್ನು ಪಾರು ಮಾಡಲಾರದು. ಮನಸಿನ ವೈಚಿತ್ರವೇ ಅಂಥದ್ದು. ನೀವು ನಿತ್ಯ ರೋಗಿಗಳಾಗಿ ಅದೇ ಯೋಚನೆಯಲ್ಲೇ ದಿನ ಕಳೆಯಬೇಕಾಗುತ್ತದೆ. ಅಲ್ಲದೆ, ನಿಮ್ಮ ಖಾಯಿಲೆ ನಿಮ್ಮ ಈ ಮನಸಿನ ಕಾರಣದಿಂದ ಗುಣವಾಗಲು ಸಾಕಷ್ಟು ಸಮಯವನ್ನೂ ತೆಗೆದುಕೊಳ್ಳುತ್ತದೆ. ಅಲ್ಲಿ ಖಾಯಿಲೆಗೆ ಸಂಬಂಧಿಸಿದಂತೆ ತುಂಬಾ ಅಪಾಯಕಾರಿ ಸಲಹೆಗಳಿರುತ್ತವೆ. ವೈದ್ಯರ ಸಲಹೆ ಇಲ್ಲದೆ ಅದನ್ನು ಪ್ರಯತ್ನಿಸಲೇ ಬಾರದು. ಆದರೆ, ಗೂಗಲ್ ಡಾಕ್ಟರ್ ನಂಬಿ ಪ್ರಯತ್ನಗಳನ್ನು ಶುರುವಿಟ್ಟುಕೊಂಡು ಅತೀ ದೊಡ್ಡ ಎಡವಟ್ಟು ತಂದುಕೊಳ್ಳುತ್ತೀರಿ. ಗೂಗಲ್ಲೆ ಅಂತಿಮವಲ್ಲ. ಅದೊಂದು ಮಾಹಿತಿ ಕಣಜ ಅಷ್ಟೇ. ಅಲ್ಲಿರುವುದೆಲ್ಲಾ ನಿಜವಲ್ಲ. ಹಾಗಂತ, ಬರೀ ಸುಳ್ಳುಗಳೂ ಇವೆ ಅಂತಲ್ಲ! ಯಾವುದು ನಿಜ, ಯಾವುದು ಸುಳ್ಳು ಅಂತ ಸಾಮಾನ್ಯರಾದ ನಾವು ಹೇಗೆ ನಿರ್ಧರಿಸಲು ಸಾಧ್ಯ? ಅದಾಗ್ಯೂ ಗೂಗಲ್ ನಲ್ಲಿ ಹುಡುಕಾಡಲೇಬೇಕಾದ ಅನಿವಾರ್ಯತೆ ಇದ್ದರೆ ವೈದ್ಯರ ಸಹಾಯ ಪಡೆಯಿರಿ. ಕೆಲವು ನಿಶ್ಚಿತ ವೆಬ್‌ಸೈಟಿಗೆ ಮಾತ್ರ ಭೇಟಿ ಕೊಡಿ. ಅಲ್ಲಿ ಓದಿಕೊಂಡಿದ್ದನ್ನು ವೈದ್ಯರ ಬಳಿ ಚರ್ಚಿಸಿ. ವಿಚಾರವನ್ನು ಪೂರ್ತಿ ತಿಳಿದುಕೊಳ್ಳಲು ಪ್ರಯತ್ನಿಸಿ. ಅರೆ ಜ್ಞಾನ ಅಪಾಯಕಾರಿ. ಎಡವಟ್ಟು ತಿಳಿಯಿರಿ
ಖಾಯಿಲೆಗಳ ಲಕ್ಷಣಗಳನ್ನು ಇಟ್ಟುಕೊಂಡು ಗೂಗಲಿಂಗ್ ಮಾಡ್ತೀನಿ ಅಂತ ಕೂರುವುದು ಶುದ್ಧ ಮೂರ್ಖತನ. ಅದು ನಿಮ್ಮ ಆಲೋಚನೆಗಳನ್ನು ಎಲ್ಲಿಂದ ಎಲ್ಲಿಗೋ ತಳ್ಳಿಬಿಡಬಹುದು. ಇಂಟರ್‌ನೆಟ್ ನಲ್ಲಿರುವ ರಾಶಿ ರಾಶಿ ಮಾಹಿತಿಗಳಲ್ಲಿ ಬರೀ ತಪ್ಪೇ ತುಂಬಿ ಹೋಗಿದಾವಾ? ಇಲ್ಲ. ಅಲ್ಲೂ ಕೂಡ ಒಳ್ಳೆಯ ಮಾಹಿತಿಗಳು ನಿಮಗೆ ಸಿಕ್ಕುತ್ತವೆ. ಆದರೆ ನಿಮಗೆ ಹುಡುಕೋಕೆ ಬಬೇಕು ಅಷ್ಟೇ. ಎಷ್ಟೋ ಬಾರಿ ನಮಗೆ ನಮ್ಮ ಡಾಕ್ಟರ್‌ಗಳ ಮೇಲೆ ನಂಬಿಕೆಯೇ ಉಳಿಯುವುದಿಲ್ಲ. ಅವರು ಸರಿಯಾದದ್ದನ್ನೇ ಕೊಟ್ಟಿದ್ದಾರಾ ಅನ್ನುವ ಅಳುಕು ಉಳಿದು ಬಿಡುತ್ತದೆ. ಎಲ್ಲಾ ವೈದ್ಯರು ಬುದ್ದಿವಂತರಾ? ಅವರು ತಮ್ಮ ವೈದ್ಯಕೀಯ ಕೋರ್ಸ್ ಮುಗಿಸಿದ್ದಾರಾ? ಅಂತ ಎಷ್ಟೊ ಬಾರಿ ನಮಗೆ ಗೊತ್ತೇ ಆಗಲ್ಲ. ನಿಯಮವಳಿಗಳು ಸಾವಿರ ಇವೆ. ಆದರೆ, ಅದರಂತೆ ನಡೆಯುತ್ತಿದ್ದೆಯಾ? ಖಂಡಿತ ಇಲ್ಲ. ವೈದ್ಯರು ಕೂಡ ಎಡವಟ್ಟು ಮಾಡುತ್ತಾರಾ? ಮಾಡಬಹುದು. ಈಗ ವೈದ್ಯನೋ ನಾರಾಯಣೋ ಹರಿಃ ಅನ್ನುವ ಹಾಗಿಲ್ಲ. ಅವರೆಲ್ಲಾ ಲಕ್ಷ ಲಕ್ಷ ಫೀಸು ಕಟ್ಟಿ ಡಾಕ್ಟರ್ ಆಗಿರೋದು. ಅಂದರೆ, ಡಾಕ್ಟರಿಕೆ ಬ್ಯುಸಿನೆಸ್. ಪೇಶೆಂಟ್‌ಗೆ ಜ್ವರ ಹೆಚ್ಚಿದ್ದರೆ ಅವರಿಗೆ ಖುಷಿ. ಏಕೆಂದರೆ, ಬಿಲ್ ಹೆಚ್ಚಾಗುತ್ತದೆ.ಲಾಭ ಬರುತ್ತದೆ ಅಂತ ಯೋಚಿಸುವ ಕಾಲದಲ್ಲಿ ಎಡವಟ್ಟಾಗದೇ ಇರುತ್ತದೆಯೇ? ಕೆಲವು ಬಾರಿ ಗೊತ್ತಾಗದೇ ಮೆಡಿಸಿನ್ ಕೊಟ್ಟು ಬಿಡುತ್ತಾರೆ. ರೋಗಿ ಅವುಗಳನ್ನು ತೆಗೆದುಕೊಂಡು ಅಪಾಯ ತಂದುಕೊಳ್ಳುವ ಸಂಭವವಿರುತ್ತದೆ. ಅಂತಹ ಸಮಯದಲ್ಲಿ ಗೂಗಲಿಂಗ್ ಸಹಾಯಕ್ಕೆ ಬರಬಹುದು. ನೋಡಿ, ಪರೀಕ್ಷೆಯಲ್ಲಿ ಸಕ್ಕರೆ ಪ್ರಮಾಣ ಕಂಡು ಬಂತು ಅಂತ ಮುಲಾಜಿಲ್ಲದೆ ಕೆಲ ವೈದ್ಯರು ಮಾತ್ರೆ ಬರೆದುಬಿಡುತ್ತಾರೆ. ಅದನ್ನು ತೆಗೆದುಕೊಳ್ಳುವ ಮುನ್ನ ಗೂಗಲ್ ಮಾಡಿದ ರೋಗಿಗೆ ವಿಚಾರವೊಂದು ತಿಳಿಯುತ್ತದೆ. ಸಕ್ಕರೆ ಪ್ರಮಾಣ ಕಂಡು ಬಂದಿದ್ದಾಗ, ತಕ್ಷಣ ಮಾತ್ರೆ ಕೊಡುವ ಬದಲು ಸ್ವಲ್ಪ ದಿನ ಪರೀವೀಕ್ಷಣೆಯಲ್ಲಿಟ್ಟು ಅದೇ ಸ್ಥಿತಿ ಮುಂದುವರೆದರೆ ಮಾತ್ರೆಯನ್ನು ನೀಡಬಹುದು ಎಂಬುದೇ ವಿಚಾರ. ಆಗ, ವೈದ್ಯರು ನೇರವಾಗಿ ಮಾತ್ರೆ ಕೊಟ್ಟಿದ್ದು ತಪ್ಪು ಅಂತ ಅವನ ಅರಿವಿಗೆ ಬರುತ್ತದೆ. ಮುಂದೆ ನುರಿತ ವೈದ್ಯರನ್ನು ಆತ ಸಂಪರ್ಕಿಸಬಹುದು. ಆದರೆ ಇಂತಹ ವಿಚಾರಗಳನ್ನು ನೀವು ಯಾವ ವೆಬ್‌ಸೈಟ್ ನಲ್ಲಿ ನೋಡುತ್ತೀರಿ ಅನ್ನುವುದರ ಮೇಲೆ ಇದೆಲ್ಲಾ ನಿರ್ಧಾರವಾಗುತ್ತದೆ. ಸದಾಶಿವ ಸೊರಟೂರು