Advertisement

ಸಿಎಂ-ಬಿಎಸ್‌ವೈ ಬಸವಣ್ಣನವರ ಅನುಯಾಯಿಗಳಲ್ವಾ?

11:46 PM Jun 07, 2022 | Team Udayavani |

ಬಾಗಲಕೋಟೆ: ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರ ಕೃತಿ ಚೌರ್ಯ ಮಾಡಲಾಗಿದೆ. ಇದು ಅವರಿಗೆ ಮಾಡಿದ ಅವಮಾನ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ ಅವರು ಬಸವಣ್ಣ ನವರ ಅನುಯಾಯಿಗಳು ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಬಸವಣ್ಣನವರ ಬಗ್ಗೆ ಯಾಕೆ ತಿರುಚಿದ್ದಾರೆ. ಅಂಬೇಡ್ಕರ್‌, ಬಸವಣ್ಣ, ಕುವೆಂಪು ಅವರ ಕೃತಿ ತಿರುಚಿದ್ದಾರೆ. ನಾರಾಯಣಗುರು, ಭಗತಸಿಂಗ್‌, ಸುರಪುರದ ನಾಯಕರ ಇತಿಹಾಸ ತೆಗೆದು ಹಾಕಿರುವುದು ಯಾಕೆ. ಇತಿಹಾಸ ಹೇಗಿದೆಯೋ ಹಾಗೆಯೇ ಮಕ್ಕಳಿಗೆ ಹೇಳಬೇಕು ಎಂದರು.

ಬಿಎಸ್‌ವೈ ಭೇಟಿ ಆಕಸ್ಮಿಕ
ವಿಮಾನ ನಿಲ್ದಾಣದಲ್ಲಿ ನಾನು-ಯಡಿಯೂರಪ್ಪ ಅವರು ಭೇಟಿಯಾಗಿ ರುವುದು ಆಕಸ್ಮಿಕ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸಬೇಕಿಲ್ಲ. ವೈಯಕ್ತಿಕ ಸಂಬಂಧಗಳೇ ಬೇರೆ, ರಾಜಕೀಯ ಸಂಬಂಧಗಳೇ ಬೇರೆ. ನಾವು ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತೇವೆ.

ಈ ದೇಶಕ್ಕೆ ಏನು ಸಿದ್ಧಾಂತ ಬೇಕೋ, ಆ ರಾಜಕೀಯ ಮಾಡುತ್ತೇವೆ. ನಾವು ಬಹು ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು. ಬಹು ಜನರ ಕಲ್ಯಾಣವೇ ನಮ್ಮ ಧ್ಯೇಯ ಎಂದು ಸಿದ್ದರಾಮಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next