Advertisement

ನಿಷೇಧದ ಬಳಿಕವೂ ಚೀನಿ ಅಂತರ್ಜಾಲ ಮಾರಾಟ ತಾಣಗಳು ಸಕ್ರಿಯ?

11:28 AM Jul 11, 2020 | sudhir |

ಮುಂಬಯಿ: ಭಾರತ ಸರಕಾರದಿಂದ ನಿಷೇಧಕ್ಕೊಳಗಾಗಿ­ದ್ದರೂ ಅಂತರ್ಜಾಲ ಆಧಾರಿತ ಚೀನಿ ಮಾರಾಟ ತಾಣ­ಗಳು ಈಗಲೂ ಸಕ್ರಿಯವಾಗಿಯೇ ಇವೆ! ಹೀಗೆಂದು ಆಂಗ್ಲಪತ್ರಿಕೆ­ಯೊಂದು ವರದಿ ಮಾಡಿದೆ. ತಮ್ಮದೇ ಮಾರ್ಗಗಳ ಮೂಲಕ ಕ್ಲಬ್‌ ಫ್ಯಾಕ್ಟರಿ, ಶೀನ್‌ ಆ್ಯಪ್ ‌ಗಳು ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತಿವೆ. ಈ ಪೈಕಿ ರಾಂವೆ ವೆಬ್‌ಸೈಟ್‌ ಚಾಲ್ತಿಯಲ್ಲಿದ್ದರೂ, ಅಲ್ಲಿ ಕೊಳ್ಳಲು ಆಗುತ್ತಿಲ್ಲ­ವೆಂದು ಕೆಲವು ಗ್ರಾಹಕರು ಅಭಿಪ್ರಾಯ­ಪಟ್ಟಿದ್ದಾರಂತೆ.

Advertisement

59 ಆ್ಯಪ್ ಗಳ ನಿಷೇಧದ ಬಳಿಕ, ಇವುಗಳ ವೆಬ್‌ಸೈಟ್‌ಗಳು ದೂರ­ಸಂಪರ್ಕ ಕಂಪೆನಿಗಳ ಅಂತರ್ಜಾಲ ವ್ಯವಸ್ಥೆ ಮೂಲಕ ಈಗಲೂ ಕಾರ್ಯಾಚರಣೆ ಮಾಡುತ್ತಿವೆ ಎಂದು ವರದಿ­ಯಲ್ಲಿ ಹೇಳಲಾಗಿದೆ.

ಈಗ ಹುಟ್ಟಿಕೊಂಡಿರುವ ಇನ್ನೊಂದು ಗುಮಾ­ನಿಯ ಪ್ರಕಾರ, ಕ್ಲಬ್‌ಫ್ಯಾಕ್ಟರಿ, ಶೀನ್‌ ಕಂಪೆನಿಗಳು ಗ್ರಾಹಕರಿಗೆ ಪರ್ಯಾಯ ಲಿಂಕ್‌ ಕಳುಹಿಸಿ ತಮ್ಮ ಆ್ಯಪ್‌ ಡೌನ್‌ಲೋಡ್‌ ಮಾಡಿ­ಕೊಳ್ಳಲು ಅವಕಾಶ ಕೊಟ್ಟಿವೆ ಎನ್ನುವುದು!

Advertisement

Udayavani is now on Telegram. Click here to join our channel and stay updated with the latest news.

Next