Advertisement

ನಿಮ್ಮ ಮನೆಯ ವಾಯುವ್ಯ ದಿಕ್ಕಿನಲ್ಲಿ ಲಕ್ಷ್ಮಿಯ ಸಲೀಸು ಓಡಾಟ 

03:45 AM Feb 20, 2017 | Harsha Rao |

ಶ್ರೀಮಂತಿಕೆಯ ಅಹಂಕಾರ ಎಂದು ನಾವು ಎಷ್ಟೇ ಮೂಗು ಮುರಿದರೂ, ಶ್ರೀಮಂತಿಕೆ ಒಂದು ದೇವರ ಕೃಪೆ. ಪಾಪ, ಪುಣ್ಯದ ವಿಚಾರ ಎಂಬುದನ್ನು ಪ್ರತ್ಯೇಕವಾಗಿ ವಿಶ್ಲೇಷಿಸೋಣ. ಆದರೆ ಸ್ತಯ ಮಾರ್ಗದಲ್ಲಿ ಕೂಡಿ ಬಂದ ಶ್ರೀಮಂತಿಕೆಗೆ ದಿವ್ಯದ ಬೆಳಕಿದೆ. ಹೀಗಾಗಿಯೇ ಶ್ರೀ ಮನ್ಮಹಾಲಕ್ಷಿಯನ್ನು ಲೋಕದ ಏಕೈಕ ಬೆಳಕಿನ ಶಕ್ತಿ, ಬೆಳಕಿನ ಬೀಜ ಗರ್ಭವೇ ಮಹಾಲಕ್ಷ್ಮಿ ಎಂಬ ಮಾತಿದೆ ನಮ್ಮಲ್ಲಿ. ಈಕೆಯೇ ಜಗದ ಉತ್ಪತ್ತಿಗೆ, ವಿಶ್ವವನ್ನು ಸೃಷ್ಟಿಸುವ ಮಾಯೆಗೆ
ತಾಯಿಯಾಗಿದ್ದಾಳೆ. ಪದ್ಮಾಸನ ಸ್ಥಿತಿಯಲ್ಲಿಯೂ ಕುಳಿತು, ಕಮಲದ ಮೇಲೇ ನಿಂತಿದ್ದಾಳೆ. ಸಮಸ್ತ ದೇವತೆಗಳಿಗೆ ಅಗ್ರಳಾದವಳಾಗಿ ಸಮಸ್ತ ದೇವವನಿತಾ ಎಂಬುದಾಗಿ ಪೂಜಿಸಲ್ಪಡುತ್ತಾಳೆ. ದುಡಿದು ಬಂದ ಸತ್ಯದ ಆವರಣದೊಂದಿಗಿನ, ಶ್ರೀಮಂತಿಕೆಗೆ ಅಪಾರವಾದ ತೂಕವಿದೆ.

Advertisement

ಹೀಗಾಗಿ ಮನೆಯ ವಾಯುವ್ಯ ದಿಕ್ಕಿನ ಮಹತ್ವ, ಸ್ವತ್ಛತೆಯಿಂದ  ಒಗ್ಗೂಡಿದ್ದರೆ ಸಂಪತ್ತಿಗೆ ಪ್ರೇರಕನಾದ ಚೈತನ್ಯ ಮನೆಯೊಡೆಯನಿಗೆ ನಿಶ್ಚಿತ. ಮನೆಯ ವ್ಯಾಪ್ತಿಗೆ ಸ್ಥಾವರ ( ನಿಂತಲ್ಲಿಯೇ ನಿಂತ) ಸ್ಥಿತಿ ಒದಗಿದ್ದರೂ, ಅದು ತನ್ನೊಳಗಿನ ಜೀವಗಳನ್ನ ಚಲನಶೀಲತೆಗೆ ಒಳಪಡಿಸಿ ಚೈತನ್ಯದ ಸೆಲೆಯನ್ನ ತುಂಬಿ ತುಳುಕಿಸುವ ಕೆಲಸ ಮಾಡುತ್ತದೆ. ಯಾವುದೇ
ಕೆಲಸದ ಬಗೆಗಿನ ಮೊದಲ ಹೆಜ್ಜೆ ನಿಮ್ಮ ಮನೆಯೊಳಗಿನಿಂದಲೇ ಪ್ರಾರಂಭಗೊಳ್ಳಬೇಕು. ಬಾಡಿಗೆ ಮನೆಯಾಗಿದ್ದರೂ ಸದ್ಯ ಅದು ನಿಮ್ಮದೇ ಮನೆ. ನಿಮ್ಮ ಉತ್ಸಾಹ, ನಿರಾಸೆ, ಅಸಹಾಯಕತೆ, ಕೇಕೆ, ಚಾತುರ್ಯ ಅದು ಒಟ್ಟಾಗಿ ಸೇರಿ ಮನೆಯ ಮೇಲೂ ಪ್ರಭಾವ ಬೀರುತ್ತದೆ. ಮನೆ ಹಾಗಾಗಿ ನಿಂತಂತಿದ್ದರೂ ನಿರ್ಜೀವತೆಯೊಂದಿಗೆ ಶುಷ್ಕವಲ್ಲ. ಸಂಪನ್ನವಾದದ್ದು.

ಮನೆಯಲ್ಲಿನ ಕಿಟಕಿ ಬಾಗಿಲುಗಳೆಲ್ಲ ತೆರೆದಿರಲಿ. ಒಳಗಿನ ಗಾಳಿ ಹೊರಗೆ (ಇರುವ ಕಲ್ಮಷಗಳನ್ನು ಒಗ್ಗೂಡಿಸಿಕೊಂಡು) ಹೋಗಲು ಸಹಾಯಕವಾಗುತ್ತದೆ. ವಾಯುವ್ಯ ದಿಕ್ಕಿನ ಸ್ವತ್ಛತೆ, ನೈರ್ಮಲ್ಯಗಳಿಂದ ಅಲ್ಲಿನ ಗಾಳಿ ಕಿಟಿಕಿ ಬಾಗಿಲುಗಳ ಮೂಲಕ ಮನೆಯೊಳಗೆ ಬರಲೂ ಸಹಾಯವಾಗುತ್ತದೆ. ಒಳ ಬರುವ ಹೊಸಗಳಿಗೆ ಲಕ್ಷ್ಮಿಯ ಕೃಪೆಯನ್ನು ಉದ್ದೀಪಿಸುವ ಸಿಗ್ನತೆ ಕೂಡಿಕೊಂಡಿರುತ್ತದೆ. ಮನೆಯ ಒಳಗೆ ಆದಷ್ಟು ಜಗಳ, ಕೋಪ, ತಾಪ ನಿಯಂತ್ರಿಸಿ. ಧಾನ್ಯಕ್ಕೆ ಮನಸ್ಸನ್ನು ಸ್ಥೈರ್ಯಗೊಳಿಸುವ ಶಕ್ತಿ ಇದೆ. ಮನಸ್ಸು ಮತ್ತು ಸ್ವತ್ಛ ಹೊಸಗಾಳಿ ಪರಸ್ಪರ ಬಂಧುಗಳಂತೆ ಒಂದು ಇನ್ನೊಂದನ್ನು ಶಕ್ತಿ ಸ್ಪಂದನಗಳೊಡನೆ ಸಕಾರಾತ್ಮಕಗೊಳಿಸುತ್ತದೆ. ಬೇಕಾದ ವಸ್ತುಗಳು ಮಾತ್ರ ಮನೆಯೊಳಗೆ ಇರಲಿ. ಬೇಡವಾದುದನ್ನು ನಿರ್ದಾಕ್ಷಿಣ್ಯವಾಗಿ ಹೊರತಳ್ಳಿ ಇಲ್ಲದಿದ್ದರೆ ಒಂದು ಸುಸಂಬದ್ಧ ಚಕ್ರಮಯ ಪ್ರಕೃತಿ ಹಾರಕ್ಕೆ ಧಕ್ಕೆ ಬರುತ್ತದೆ.

ಜ್ಞಾನವೂ, ಸಂಪತ್ತು ಎರಡೂ ಹದವಾಗಿ ಸೇರಿಕೊಂಡಾಗ ಕುಟುಂಬ ಕ್ಷೇಮಕರವಾಗಿ ಇರುತ್ತದೆ. ಬಾಗಿಲುಗಳನ್ನೆಲ್ಲ ಹಾಕಿ ಒಳಗಿನ ಗಾಳಿಯನ್ನು ಹೊರ ಹೋಗದಂತೆ ಕಟ್ಟಿಡ ಬೇಡಿ. ಮನೆಯ ವಾಯುವ್ಯ ದಿಕ್ಕಿನಲ್ಲಿ ಒಂದೆಡೆಯಿಂದ ಶುದ್ಧ ಗಾಳಿ
ಹರಿಯುವಂತಾದರೆ ಲಕ್ಷ್ಮಿಯ ಬರುವಿಕೆಗೆ ಹೆದ್ದಾರಿಯೊಂದನ್ನು ನಿರ್ಮಿಸಿದ ಸೌಭಾಗ್ಯ ನಿಮ್ಮದಾಗುತ್ತದೆ. ಆದರೆ ವಾಯುವ್ಯದಲ್ಲಿ ಶೌಚಗೃಹ, ವಿಸರ್ಜನಾ ಘಟಕಗಳಿದ್ದ ಸಂದರ್ಭ ಇರುತ್ತದೆ. ಆದರೆ ಶೌಚ ಗೃಹವಾಗಲೀ, ವಿಸರ್ಜನಾ ಘಟಕಗಳಾಗಲೀ ಅವು ಮುಚ್ಚಿರಬೇಕು. ಬಾಗಿಲು ತೆರೆದಿಡಬೇಡಿ. ಅದನ್ನು ಜಾಗೃತೆಯಿಂದ ಮುಚ್ಚಿ, ಮತ್ತೂಂದೆಡೆಯ ಪ್ರತ್ಯೇಕ ಕಿಟಕಿಯೋ, ಇನ್ನೇನೋ ಒಂದು ತೆರೆದ ಭಾಗದಿಂದ ಗಾಳಿ ಒಳಬರುವಂತಾಗುವುದು ಕ್ಷೇಮ.

ಗಂಧದ ಪರಿಮಳ, ಹಾವಿನ ಪರಿಮಳ, ದೇವ ನೀಲಾಂಜನದೆದುರಿನ ಸುವಾಸನಾ ದ್ರವ್ಯಗಳಹಿತಮಿತವಾದ ಸುವಾಸನೆ ಪಸರಿಸಿದ್ದರೆ ಅದು ಮನೆಯ ಕ್ರಿಯಾಶೀಲತೆಗೆ, ಸಕಾರಾತ್ಮಕ ಸ್ಪಂದನಗಳಿಗೆ ಸಹಾಯಕಾರಿ. ಮಹಾಲಕ್ಷ್ಮಿಯು ಅನಿಲ ಸ್ವರೂಪದಲ್ಲಿಯೇ ಇದ್ದಾಳೆಂಬುದು ಅರ್ಥವಲ್ಲ. ವಾಯುವ್ಯ ದಿಕ್ಕಿನ ಪರಿಪಕ್ವ ನಿರ್ಮಲತೆ ಮನೆಯೊಳಗಿನ ಮನಸ್ಸುಗಳನ್ನು ಕಾಯಕದಿಂದ ಕೈಲಾಸ ನಿರ್ಮಿಸುವತ್ತ ಶಕ್ತಿಯುತಗೊಳಿಸುತ್ತದೆ. ಈ ನಿರ್ಮಾಣಕ್ಕಾಗಿನ ದ್ರವ್ಯ(ಲಕ್ಷ್ಮಿ) ವನ್ನು ಚೈತನ್ಯಪೂರ್ಣವಾಗಿ ಓಡಾಡಿಸುವ, ದಾಸರು ಹೇಳಿದಂತೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಭಾಗ್ಯವನ್ನು ಚಿಗುರಿಸಲು ಶಕ್ತಿಯುತ ಮನಸ್ಸುಗಳು ನಿಸ್ಸಂದೇಹವಾಗಿ ಗೆಲ್ಲುತ್ತವೆ. ಹೀಗಾಗಿ ನಿಮ್ಮ ಮನೆಯ ಒಳಗಿನ ಗಾಳಿ ಹಿತವೆನಿಸುವ ಗಾಳಿಯಾಗಿ, ಸ್ಪೂರ್ತಿಯಾಗಿ ತುಂಬಿಕೊಂಡಿರಲಿ. 

Advertisement

– ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next