Advertisement

ಪುರಾತತ್ವಶಾಸ್ತ್ರಜ್ಞ ,ಪದ್ಮವಿಭೂಷಣ ಶತಾಯುಷಿ ಬಿ ಬಿ ಲಾಲ್ ನಿಧನ

07:40 PM Sep 10, 2022 | Team Udayavani |

ನವದೆಹಲಿ: ಪುರಾತತ್ವಶಾಸ್ತ್ರಜ್ಞ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಿ ಬಿ ಲಾಲ್ (101) ಅವರು ಶನಿವಾರ ( ಸೆ.10) ನಿಧನರಾಗಿದ್ದಾರೆ.

Advertisement

ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯ ಮಹಾನಿರ್ದೇಶಕರಾಗಿದ್ದ ಲಾಲ್‌ ಅವರು, ಅಯೋಧ್ಯೆಯಲ್ಲಿ ನಡೆಸಿದ ಉತ್ಖನನದ ವೇಳೆ ಮಂದಿರದ ಕಂಬಗಳ ಮೇಲೆ ಮಸೀದಿ ನಿರ್ಮಿಸಿರುವುದನ್ನು ಪತ್ತೆ ಹಚ್ಚಿದ್ದರು. ಅವರು ಭಾರತೀಯ ಪುರಾತತ್ವ ಇಲಾಖೆಯ ಅತಿ ಕಿರಿಯ ಮಹಾನಿರ್ದೇಶಕರಲ್ಲಿ ಒಬ್ಬರಾಗಿದ್ದರು. 1968ರಿಂದ 1972ರವರೆಗೆ ಎಎಸ್‌ಐನ ಮಹಾನಿರ್ದೇಶಕರಾಗಿದ್ದರು.

2021 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದರು.

ಬಿಬಿ ಲಾಲ್ ಅವರ ನಿಧನಕ್ಕೆ ಟ್ವಿಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಭೂತಕಾಲದೊಂದಿಗೆ ನಮ್ಮ ಸಂಬಂಧವನ್ನು ಗಾಢವಾಗಿಸಿದ ಒಬ್ಬ ಮಹಾನ್ ಬುದ್ಧಿಜೀವಿ ಅವರ ನಿಧನದಿಂದ ನೋವಾಗಿದೆ,’ ಎಂದು ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮಾತನಾಡಿ, ಬಿಬಿ ಲಾಲ್ ಅವರು ಪುರಾತತ್ತ್ವ ಶಾಸ್ತ್ರದ ಉತ್ಖನನ ಮತ್ತು ಪ್ರಯತ್ನಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಮತ್ತು ನಾಲ್ಕು ದಶಕಗಳಿಂದ ಪುರಾತತ್ವಶಾಸ್ತ್ರಜ್ಞರಿಗೆ ತರಬೇತಿ ನೀಡಿದ್ದಾರೆ.

Advertisement

ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಅಧಿಕೃತ ಟ್ವಿಟರ್ ನಲ್ಲಿ ಲಾಲ್ ಅವರಿಗೆ ಗೌರವ ಸಲ್ಲಿಸಿದೆ ಮತ್ತು ಅವರು ಹೋದರೂ  ಅವರ ಕೆಲಸಗಳು ಜೀವಂತವಾಗಿದೆ.

ಲಾಲ್ 1921 ರಲ್ಲಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಜನಿಸಿದರು. ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು ಪುರಾತತ್ತ್ವ ಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.

ಬಿಬಿ ಲಾಲ್  ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next