Advertisement

ಚರ್ಚೆಗೆ ಕಾರಣವಾದ ಅರವಿಂದ ಪಾಟೀಲ ಮೌನ

01:53 PM Feb 01, 2021 | Team Udayavani |

ಖಾನಾಪುರ: ಮಾಜಿ ಶಾಸಕ ಅರವಿಂದನ ಪಾಟೀಲ ಬಿಜೆಪಿ ಸೇರ್ಪಡೆ ಕುರಿತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಎಂಇಎಸ್‌ದಲ್ಲಿ ಅಕ್ರೋಶ ವ್ಯಕ್ತವಾಗಿದ್ದರೂ ಮಾಜಿ ಶಾಸಕ ಅರವಿಂದ ಪಾಟೀಲ ಅದಕ್ಕೆ ಯಾವುದೇ ಉತ್ತರ ನೀಡದೇ ಮೌನಕ್ಕೆ ಜಾರಿರುವುದು ಅಚ್ಚರಿಗೆ ಕಾರಣವಾಗಿದೆ. ತಮ್ಮ ಎಂಇಎಸ್‌ ನಿಷ್ಟೆ ಎಷ್ಟು ಎನ್ನುವದನ್ನು ಅವರು ಪ್ರದರ್ಶಿಸಬೇಕಾಗಿತ್ತಾದರೂ ಅವರು ಮೌನ ತಾಳಿರುವುದು ಉಪಮುಖ್ಯಮಂತ್ರಿಗಳ ಹೇಳಿಕೆಯನ್ನು ಅಪರೋಕ್ಷವಾಗಿ ಬೆಂಬಲಿಸಿದಂತಾಗಿದೆ.

Advertisement

ಅರವಿಂದ ಪಾಟೀಲ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿ ತಾವು ಬಿಜೆಪಿ ಸೇರುವ ಗೊಂದಲಕ್ಕೆ ಕೊನೆ ಹಾಡಬಹುದಾಗಿತ್ತು. ಆದರೆ ಈ ಕುರಿತು ತುಟಿಪಿಟಕ್ಕೆನ್ನದೆ ಮೌನವಾಗಿದ್ದು ಒಂದು ಕಾಲು ಎಂಇಎಸ್‌ ಕಡೆಗೆ, ಇನ್ನೊಂದು ಕಾಲು ಬಿಜೆಪಿಯತ್ತ ಎನ್ನುವ ಅಚ್ಚರಿಯ ನಡುವಳಿಕೆ ಪ್ರದರ್ಶಿಸುತ್ತಿದ್ದಾರೆ. ಗಡಿ ಮತ್ತು ಭಾಷೆ ವಿಷಯಗಳ ಇವರ ಹೋರಾಟ ಎಷ್ಟು ನಾಟಕೀಯ ಎನ್ನುವದು ಇಲ್ಲಿ ಅನಾವರಣಗೊಂಡಿದೆ. ಡಿಸಿಎಂ ಲಕ್ಷ್ಮಣ ಸವದಿ ರೆಡ್‌ ಕಾಪೆìಟ್‌ ಹಾಸಿ ಇವರನ್ನು ಬಿಜೆಪಿಗೆ ಕರೆದಿದ್ದಾರಾದರೂ ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬಲಿ ಕೊಟ್ಟು ಪಾಟೀಲ ಬಿಜೆಪಿಗೆ ಜಿಗಿಯುವರೇ ಎನ್ನುವುದು ಬಿಜೆಪಿ ಮತ್ತು ಎಂಇಎಸ್‌ ಪಕ್ಷಗಳಲ್ಲಿ ಭಾರಿ ಚರ್ಚೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ವಿಚಿತ್ರ ಎಂದರೆ ಬಿಜೆಪಿಯಲ್ಲಿ ಕೂಡ ಒಳಗಡೆ ಇರುವ ಗುಂಪುಗಾರಿಕೆಯಿಂದ ಹಲವು ನಾಯಕರು ಮಾಜಿ ಶಾಸಕ ಅರವಿಂದ ಪಾಟೀಲರನ್ನು ಅಪ್ಪಿ ಕೊಂಡು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಹಲವರು ಅವರ ಆಗಮನ ವಿರೋ  ಧಿಸಲು ಸಜ್ಜಾಗುತ್ತಿದ್ದಾರೆ. ಎಂಇಎಸ್‌ ಹಾಗೂ ಬಿಜೆಪಿಯವರು ತಮ್ಮ ತಮ್ಮ ಹೈಕಮಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಖಾನಾಪುರ ಮತ ಕ್ಷೇತ್ರದಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲರದೇ ಪ್ರಮುಖ ಚರ್ಚೆ ವಿಷಯವಾಗಿದೆ. ಎಂಇಎಸ್‌ ಕಟ್ಟಾ ಕಾರ್ಯಕರ್ತರಿಗೆ ಅರವಿಂದ ಪಾಟೀಲರ ಡಬಲ್‌ ಗೇಮ್‌ನಿಂದ ಶಾಕ್‌ ಆಗಿದ್ದರೆ ಅರವಿಂದ ಪಾಟೀಲರಿಗೆ ತಾವು ಬಿಜೆಪಿ ಸೇರ್ಪಡೆಯಾದರೆ ಎಲ್ಲಿ ಎಂಇಎಸ್‌ ಕಾರ್ಯಕರ್ತರು ತಮ್ಮಿಂದ ದೂರ ಸರಿಯುತ್ತಾರೊ ಎನ್ನುವ ಅಂಜಿಕೆ ಭಯ ಕೂಡ ಇದ್ದಂತಿದೆ.

ಇದನ್ನೂ ಓದಿ:ಕೇಂದ್ರ ಬಜೆಟ್ 2021 : ವೈಯಕ್ತಿಕ ತೆರಿಗೆದಾರರಿಗೆ ದೊಡ್ಡ ನಿರಾಶೆ !

ಹೀಗಾಗಿ ಅವರು ಕಾಯ್ದು ನೋಡುವ ತಂತ್ರಕ್ಕೆ ಶರಣಾದಂತಿದೆ. ಅಥವಾ ನಿಜವಾಗಿ ಅರವಿಂದ ಪಾಟೀಲರು ತಮ್ಮ ಮುಂದಿನ ನಡೆ ಬಗ್ಗೆ ತಾವೇ ಗೊಂದಲದಲ್ಲಿ ಇದ್ದಂತಿದೆ. ಕಳೆದ ವಿಧಾನಸಭೆ ಚುನಾವಣೆ ಕಾಲಕ್ಕೆ ಬಿಜೆಪಿ ಸೇರ್ಪಡೆ ವಿಚಾರ ಬಂದಾಗಲೂ ತಾವು ಬಿಜೆಪಿ ಸೇರ್ಪಡೆಯಾಗುತ್ತಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅವರ ವರ್ತನೆ ಬದಲಾಗಿದ್ದು ಎಂಇಎಸ್‌ ಹೋರಾಟಕ್ಕೆ ತಿಲಾಂಜಲಿ ನೀಡುವ ಸಾಧ್ಯತೆ ದಟ್ಟಗಾಗಿ ಕಂಡು ಬರುತ್ತಿದೆ. ಇವರು ಎಂಇಎಸ್‌ನಲ್ಲಿ ಉಳಿದರೂ ಬಿಜೆಪಿ ಸೇರ್ಪಡೆಯಾದರೂ ಎರಡು ಕಡೆ ಪ್ರಬಲ ಬಂಡಾಯ ಎದುರಿಸಬೇಕಾಗುವುದರಲ್ಲಿ ಯಾವ ಅನುಮಾನವೂ ಇಲ್ಲ.

Advertisement

ಜಗದೀಶ ಹೊಸಮನಿ

Advertisement

Udayavani is now on Telegram. Click here to join our channel and stay updated with the latest news.

Next